Ninna Kanna Kannadiyalli-‌duet Lyrics

in Swayamvara

Video:

LYRIC

ನಿನ್ನ ಕಣ್ಣ ಕನ್ನಡಿಯಲ್ಲಿ
ಕಂಡೆ ನನ್ನ ರೂಪ
ನಿನ್ನ ಕಣ್ಣ ಕನ್ನಡಿಯಲ್ಲಿ
ಕಂಡೆ ನನ್ನ ರೂಪ
ನಿನ್ನ ಕಣ್ಣ ಕನ್ನಡಿಯಲ್ಲಿ
ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ
ಕಂಡೆ ಪ್ರೇಮ ದೀಪ
 
ನಿನ್ನ ತುಂಟ ಹೂ ನಗೆಯಲ್ಲಿ
ಏನೊ ಏನೊ ಭಾವ
ನಿನ್ನ ತುಂಟ ಹೂ ನಗೆಯಲ್ಲಿ
ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ
ನಲಿಯಿತೆನ್ನ ಜೀವ
ನಿನ್ನ ತುಂಟ ಹೂ ನಗೆಯಲ್ಲಿ
 
ಬಾನ ಹಕ್ಕಿ ಹಾಡೋ ವೇಳೆ
ಉದಯ ರವಿಯು ಮೂಡುವ ವೇಳೆ
ಬಾನ ಹಕ್ಕಿ ಹಾಡೋ ವೇಳೆ
ಉದಯರವಿಯು ಮೂಡುವ ವೇಳೆ
ನೀನು ಬರುವ ದಾರಿಯಲ್ಲಿ
ಹೃದಯ ಹಾಸಿ ನಿಲ್ಲುವೆ
ಆಆಆ.... 
ಮರದ ನೆರಳ ತಂಪಿನಲ್ಲಿ
ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯನಿಟ್ಟು ಮಲಗಿರುವಾಗ
ಸ್ವರ್ಗ ಅಲ್ಲೆ ಕಾಣುವೆ
ನನ್ನ ಮನವ ಆಳಬಂದ
ನನ್ನವನೇ ಚೆನ್ನಿಗನೇ
 
|| ನಿನ್ನ ಕಣ್ಣ ಕನ್ನಡಿಯಲ್ಲಿ
ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ
ಕಂಡೆ ಪ್ರೇಮ ದೀಪ
ನಿನ್ನ ಕಣ್ಣ ಕನ್ನಡಿಯಲ್ಲಿ||
 
ಹಸಿರು ಎಲೆಯ ಸೀರೆ ಧರಿಸಿ
ಹೂವ ತಿಲಕ ಹಣೆಯಲಿ ಇರಿಸಿ
ಹಸಿರು ಎಲೆಯ ಸೀರೆ ಧರಿಸಿ
ಹೂವ ತಿಲಕ ಹಣೆಯಲಿ ಇರಿಸಿ
ಒಲಿದು ಬಂದ ವನದೇವತೆಯೋ
ಸೊಬಗು ಏನ ಹೇಳಲಿ
ಆಆಆಆ
ಹೂವ ಸಂಗ ಕೂಡಿ ಆಡಿ
ಕಂಪು ಕದ್ದು ಮೆಲ್ಲನೆ ಓಡಿ
ತೂರಿ ಬಂದ ಗಾಳಿಯಂತೆ
ಬಂದೆ ನನ್ನ ತೊಳಲಿ
ನಿನ್ನ ಚೆಲುವ ಮೋಡಿ ನೋಡಿ
ಮೈಮರೆತೆ ಮನಸೋತೆ
 
||ನಿನ್ನ ತುಂಟ ಹೂ ನಗೆಯಲ್ಲಿ
ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ
ನಲಿಯಿತೆನ್ನ ಜೀವ ||
||ನಿನ್ನ ಕಣ್ಣ ಕನ್ನಡಿಯಲ್ಲಿ
ಕಂಡೆ ನನ್ನ ರೂಪ ||
ಆಆಆಆಆ ಆಆಆಆಆ
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್

Ninna Kanna Kannadiyalli-male song lyrics from Kannada Movie Swayamvara starring Dr Rajkumar, N Bharathi, Balakrishna, Lyrics penned by R N Jayagopal Sung by P B Srinivas, P Susheela, Music Composed by Rajan-Nagendra, film is Directed by Y R Swamy and film is released on 1973