-
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನೆ ನೀನೆ ನಾದವಾಗಿ ನೀ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ನನ್ನ ಬಾಳ ಚೈತ್ರದಲ್ಲಿ ನೀನೆ ಕೋಗಿಲೆ
ನಿನ್ನ ಗಾನಗಂಗೆಯಲ್ಲಿ ಮಿಂದೆ ಈಗಲೆ
ನಿನ್ನ ನಗೆಯ ಹೊನಲಿನಲ್ಲಿ ಸಪ್ತಸ್ವರವಿದೆ
ಅದರ ಪಲುಕಿನಲ್ಲಿ ನನ್ನ ಜೀವದುಸಿರಿದೆ
ಭಾಗ್ಯತಾರೆಯಾಗಿ ಬಂದ ಭಾಗೇಶ್ವರಿ
ಭಾವದಲೆಯ ಧಾರೆ ನೀನೆ ರಾಜೇಶ್ವರಿ
ಆ ಕಂಗಳಲ್ಲಿ ಕಥೆಯ ಬರೆವ ಮೋಹನ ಕಲ್ಯಾಣಿ
ನನ್ನ ಮನದ ಮಂದಿರದೆ ನೆಲೆಸಿದ ಕಲೈವಾಣಿ
||ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನೆ ನೀನೆ ನಾದವಾಗಿ ನೀ ||
||ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ||
-
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನೆ ನೀನೆ ನಾದವಾಗಿ ನೀ
ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ನನ್ನ ಬಾಳ ಚೈತ್ರದಲ್ಲಿ ನೀನೆ ಕೋಗಿಲೆ
ನಿನ್ನ ಗಾನಗಂಗೆಯಲ್ಲಿ ಮಿಂದೆ ಈಗಲೆ
ನಿನ್ನ ನಗೆಯ ಹೊನಲಿನಲ್ಲಿ ಸಪ್ತಸ್ವರವಿದೆ
ಅದರ ಪಲುಕಿನಲ್ಲಿ ನನ್ನ ಜೀವದುಸಿರಿದೆ
ಭಾಗ್ಯತಾರೆಯಾಗಿ ಬಂದ ಭಾಗೇಶ್ವರಿ
ಭಾವದಲೆಯ ಧಾರೆ ನೀನೆ ರಾಜೇಶ್ವರಿ
ಆ ಕಂಗಳಲ್ಲಿ ಕಥೆಯ ಬರೆವ ಮೋಹನ ಕಲ್ಯಾಣಿ
ನನ್ನ ಮನದ ಮಂದಿರದೆ ನೆಲೆಸಿದ ಕಲೈವಾಣಿ
||ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ
ಆಸೆ ತಂತಿ ತಾನೆ ನೀನೆ ನಾದವಾಗಿ ನೀ ||
||ನನ್ನ ಹೃದಯ ವೀಣೆ ಮೀಟಿ ಒಲಿದ ರಾಗಿಣಿ||