Kokorekoko Koko Lyrics

in Sipayi Ramu

Video:

LYRIC

ಕೋಕೋರೆಕೊಕೊ ಕೋಕೋರೆಕೊಕೊ
ಕೋಕೋರೆಕೊಕೊ ಕೋ
ಬಹರೇ ಮೇರಾ ಮುರುಗಾ ಬಹರೇ ನನ್ನ ರಂಗ
ಯಾರು ಇಲ್ಲ ಸಾಟಿ ಇವ ಭಲೇ ಕಿಲಾಡಿ ರಂಗ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಓ ಮಾವ ಓ ಮಾವ ಓ ಮಾವ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ನತ್ಥನ ನತ್ಥನ ನತ್ಥನನತ್ಥನನತ್ಥನ ಹಮಮ್
 
ಬಹರೇ ಮೇರಾ ಮುರುಗಾ ಬಹರೇ ನನ್ನ ಸಿಂಗ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ಅರೇ ಛೋಡೋ ಅರೇ ದೇಖೋ
 
ಸವಾಲು ನಂದು ಜವಾಬು ನಿಂದು
ನೋಡುವೆ ಏಕೆ ಹಿಂದೂ ಮುಂದು
ಪಟಾಪಟಿ ಕಾಳಗವ ಮಾಡು ಮಾಡು
ಲಟಾಪಟಿ ಹೊರಟವ ನೋಡು ನೋಡು
ಪೊತಪೋಟಿ ಗಂಡಾಗುಂಡಿ
ಪೊತಪೋಟಿ ಗಂಡಾಗುಂಡಿ ಹೆದ್ರೋಳಲ್ಲ
ನಾನು ಬಂಡಿ..ಬಾಜಿ ಕಟ್ಟಿ... ಹೇ.. ಹೇ..
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
 
ರಂಗ ಸರ್ ಅಂತ ಹಾರಿ ಬಂದು ಕುಕ್ಕುವಾ
ಸಿಂಗ ಪುರ್ ಅಂತ ಹಾರಿ ಹೋಗಿ ನಿಲ್ಲುವ
ಅರೇ ಹಥ್ ಥೇರಕಿ ...
ಉಗುರಿನಿಂದ ಸಿಂಗ ಬಲವಾಗಿ ಚುಚ್ಚಿದಾಗ
ಭಯದಿಂದ ರಂಗ ಠಣ್ ಕೆಳಗೆ ಬಿದ್ದನಾಗ
ಅರೇ ನಹೀ ನಹೀ ...
ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ
ಆವ ಜಂಭದಿಂದ ತಲೆ ಎತ್ತಿ ನಿಲ್ಲುವಾ
ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ
 
ಆವ ಜಂಭದಿಂದ ತಲೆ ಎತ್ತಿ ನಿಲ್ಲುವಾ
ಹೈ ನೋಡ್ತಿನಿ ಒಂದು ಕೈ, ಮೀಸೆ ಮೇಲೆ ಸೈ 
ಸೋತು ನೀನು ಹಿಸುಕ ಬೇಕು ಕೈ ಕೈ ಕೈಸ್
ಅರೇ ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವಾ
ಅಹ್ ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
 
ವಾಹರೇ ಮೇರಾ ಮುರಘಾ, ವಾಹರೇ ನನ್ನ ರಂಗಾ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಅಹ..  ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ಓ.. ಮಾವ..  ಓ.. ಹೆಣ್ಣೇ...  ಓ.. ಮಾವ.. 
ಓ.. ಹೆಣ್ಣೇ...  ಓ.. ಮಾವಾ..

Kokorekoko Koko song lyrics from Kannada Movie Sipayi Ramu starring Dr Rajkumar, M Leelavathi, Aarathi, Lyrics penned by R N Jayagopal Sung by S P Balasubrahmanyam, L R Eswari, Music Composed by Upendra Kumar, film is Directed by Y R Swamy and film is released on 1972