Nanna Sama Yarilla Lyrics

in Sididedda Sahodara

Video:

LYRIC

ಹ್ಹೀ.. ಶಬರೀಬ ಶಬರಬರೀಬ
ನನ ಸಮ ಯಾರಿಲ್ಲಾ
ನಂಗೆ ಯಾರ ಹಂಗಿಲ್ಲಾ
ಕೊಟ್ಟ ಮಾತು ತಪ್ಪಲ್ಲಾ
ಆಗದೆಂಬ ಮಾತಿಲ್ಲಾ
ಎದುರಾಳಿಗೆ ಬಿರುಗಾಳಿಗೆ
ಹಾರಾಟಕೆ ಕೂಗಾಟಕೆ
ನಾನೆಂದೂ ಅಂಜೋದಿಲ್ಲಾ ಯ್ಯಾ..
 
ನನ ಸಮ ಯಾರಿಲ್ಲಾ (ಆಂ ) 
ನಂಗೆ ಯಾರ ಹಂಗಿಲ್ಲಾ (ಹೂಂ )
ಕೊಟ್ಟ ಮಾತು ತಪ್ಪಲ್ಲಾ (ಆಂ )
ಆಗದೆಂಬ ಮಾತಿಲ್ಲಾ (ಹೂಂ )
ಎದುರಾಳಿಗೆ (ಓ) ಬಿರುಗಾಳಿಗೆ (ಓ)
ಹಾರಾಟಕೆ (ಆ) ಕೂಗಾಟಕೆ (ಆ)
ನಾನೆಂದೂ ಅಂಜೋದಿಲ್ಲಾ ಯ್ಯಾ..
 
|| ನನ ಸಮ ಯಾರಿಲ್ಲಾ 
ನಂಗೆ ಯಾರ ಹಂಗಿಲ್ಲಾ ಯ್ಯಾ...||
 
ಸ್ನೇಹಕ್ಕೆ ಬಾಗುವೇ ದ್ವೇಷವ ಗೆಲ್ಲುವೆ
ಹಗೆಯಾಗಿ ಬಂದವರ ಬುಡವನ್ನೇ ಕೀಳುವೆ
ನ್ಯಾಯಕ್ಕೆ ಹೋರುವೇ ನಾಡಿಗೆ ದುಡಿಯುವೆ
ಈ ತಾಯ ಮಣ್ಣಲೀ ಕುಲದೈವ ಕಾಣುವೇ
ಪ್ರೀತಿಗೆ ಪ್ರೇಮಕೇ ದಾಸನು ಆಗುವೇ
ಕಲ್ಲಲೂ ನೀರಿದೆ ಎನ್ನುವ ಮಾತಿಗೆ
ದೃಷ್ಟಾಂತ ನಾನಗುವೇ…
 
|| ನನ ಸಮ ಯಾರಿಲ್ಲಾ (ಪಪ್ಪಪ್ಪ)
ನಂಗೆ ಯಾರ ಹಂಗಿಲ್ಲಾ (ಪಪ್ಪಪ್ಪ)
ಕೊಟ್ಟ ಮಾತು ತಪ್ಪಲ್ಲಾ (ಪಪ್ಪಪ್ಪ)
ಆಗದೆಂಬ ಮಾತಿಲ್ಲಾ (ಪಪ್ಪಪ್ಪ)
ಎದುರಾಳಿಗೆ (ಆ) ಬಿರುಗಾಳಿಗೆ (ಆ)
ಹಾರಾಟಕೆ (ಓ ) ಕೂಗಾಟಕೆ (ಓ )
ನಾನೆಂದೂ ಅಂಜೋದಿಲ್ಲಾ ..
 
ನನ ಸಮ ಯಾರಿಲ್ಲಾ ... 
ನಂಗೆ ಯಾರ ಹಂಗಿಲ್ಲಾ ಒಹೋ... ||
 
ಕಣ್ಣಲೇ ಕೊಲ್ಲುವೇ ನದಿಯಲಿ ಕುಣಿಸುವೇ
ಈ ಬೆಂಕಿ ಜೊತೆ ಸೇರಿ ಸವಾಲು ನಾ ಹಾಕುವೇ
ರೂಪಕೆ ಸೋಲುವೆ ನೋಟಕೆ ಬಾಗುವೇ
ಚೆಲುವೆಂಬ ಗುಡಿಯಲ್ಲಿ ಪೂಜಾರಿ ಆಗುವೆ
ದೀನರ ಕಂಗಳ ಕಂಬನಿ ಒರೆಸುವೆ
ಆದರ ತೋರುವ ಎಲ್ಲರ ಪಾಲಿಗೆ
ಸ್ನೇಹದ ಕೈ ನೀಡುವೇ….
 
|| ನನ ಸಮ ಯಾರಿಲ್ಲಾ (ಪಪ್ಪಪ್ಪ)
ನಂಗೆ ಯಾರ ಹಂಗಿಲ್ಲಾ (ಪಪ್ಪಪ್ಪ)
ಕೊಟ್ಟ ಮಾತು ತಪ್ಪಲ್ಲಾ (ಪಪ್ಪಪ್ಪ)
ಆಗದೆಂಬ ಮಾತಿಲ್ಲಾ (ಪಪ್ಪಪ್ಪ)
ಎದುರಾಳಿಗೆ (ಆ) ಬಿರುಗಾಳಿಗೆ (ಆ)
ಹಾರಾಟಕೆ (ಓ ) ಕೂಗಾಟಕೆ  (ಓ )
ನಾನೆಂದೂ ಅಂಜೋದಿಲ್ಲಾ ..
 
ನನ ಸಮ ಯಾರಿಲ್ಲಾ ... 
ನಂಗೆ ಯಾರ ಹಂಗಿಲ್ಲಾ ಯಾ...||A

Nanna Sama Yarilla song lyrics from Kannada Movie Sididedda Sahodara starring Vishnuvardhan, Tiger Prabhakar, Aarathi, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Joe Simon and film is released on 1983