Idu Yaatharada Yathaneyo Lyrics

in Rocket

LYRIC

ಇದು ಯಾತರದ ಯಾತನೆಯೊ ಸುಖವಿದೆಯಲ್ಲ
ಇವಳ್ಯಾತರದ ಸಖಿಯೊ ಅರಿಯೆ ತಿಳಿದಿಹಳಲ್ಲ
ಇದು ಯಾತರದ ಯಾತನೆಯೊ ಸುಖವಿದೆಯಲ್ಲ
ಇವನ್ಯಾತರದ ಸಖನೊ ಅರಿಯೆ ತಿಳಿದಿಹನಲ್ಲ
ಎಂದು ಕಂಡೆನೊ ನಿನ್ನ ಒಂದೇ ಒಂದಿನ
ಹೇ ಸೋಲುತಿರುವೆ ನಿನಗೆ ಹಾಗೆ ಭಾರಿ ಭಾರಿ ನಾ
ಎಂದು ಕಂಡೆನೊ ನಿನ್ನ ಅಂದೆ ಬಂಧಿ ನಾನು
ಸೋಲುತಿರುವೆ ನಿನಗೆ ಹೀಗೆ ಭಾರಿ ಭಾರಿ ನಾ
ಇದು ಯಾತರದ ಯಾತನೆಯೊ ಸುಖವಿದೆಯಲ್ಲ
 
ನೆರವಾಗು ನನ್ನ ಹೃದಯದ ಬಡಿತಕ್ಕೆ
ಸ್ವರವಾಗು ನನ್ನ ಒಲವಿನ ನೆಪಗಳಿಗೆ
ನೆರವಾಗು ನನ್ನ ಹೃದಯದ ಬಡಿತಕ್ಕೆ
ಸ್ವರವಾಗು ನನ್ನ ಒಲವಿನ ನೆಪಗಳಿಗೆ
ನೀನಿದ್ದರೆ ಜೊತೆಗಿದ್ದರೆ ಬರಿ ಪ್ರೀತಿ ಮೆರವಣಿಗೆ
ನೀನಿದ್ದರೆ ಜೊತೆಗಿದ್ದರೆ ಸಂಭ್ರಮ ಕಡೆವರೆಗೆ
ನೀನ ನಾನ ನಾನ ನೀನ ನೀನೆ ನಾನೇನ
ನೀನ ನಾನ ನಾನ ನೀನ ನೀನೆ ನಾನೇನ
 
||ಇದು ಯಾತರದ ಯಾತನೆಯೊ ಸುಖವಿದೆಯಲ್ಲ||
 
ಏನಾದರು ನಿನ್ನ ಹೆಗಲಲ್ಲೆ ನಾನು
ಸಾವಾದರು ನನ್ನ ನಿನ್ನ ಮಡಿಲಲೆ ನಾನು
ಏನಾದರು ನಿನ್ನ ಹೆಗಲಲ್ಲೆ ನಾನು
ಸಾವಾದರು ನನ್ನ ನಿನ್ನ ಮಡಿಲಲೆ ನಾನು
ನಾ ಹಾಡಿದ ಈ ಹಾಡಿಗೆ ನಮ್ಮೊಲವೆ ಸಾಕ್ಷಿ
ನಿನ್ನ ಹಾಡಿಗೆ ದನಿಗೂಡುವೆ ಭೂಮಂಡಲ ಅಕ್ಷಿ
ನೀನ ನಾನ ನಾನ ನೀನ ನೀನೆ ನಾನೇನ
 
||ಇದು ಯಾತರದ ಯಾತನೆಯೊ ಸುಖವಿದೆಯಲ್ಲ||
ಇವನ್ಯಾತರದ ಸಖನೊ ಅರಿಯೆ ತಿಳಿದಿಹನಲ್ಲ||
||ಇದು ಯಾತರದ ಯಾತನೆಯೊ ಸುಖವಿದೆಯಲ್ಲ||
 

Idu Yaatharada Yathaneyo song lyrics from Kannada Movie Rocket starring Ninasam Sathish, Aishani Shetty, Achyuth Kumar, Lyrics penned by Ninasam Sathish Sung by Prajwal Jain, Anuradha Bhat, Music Composed by Poornachandra Tejaswi, film is Directed by Shivashashi and film is released on 2015