ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ
ಮನಸೀಗ ಗಾಳಿಯ ಪಟವಾಗಿ ಹೋಯ್ತಾ
ಬದುಕೊಂದು ಬರಿಹಾಳೆ ಪುಟವಾಗಿ ಹೋಯ್ತಾ
ವಿರಹನೆ ಪ್ರೀತಿಲಿ ದಿಟವಾಗಿ ಹೋಯ್ತಾ
ಅಳಿಸೋದೆ ದೇವರಿಗೆ ಚಟವಾಗಿ ಹೋಯ್ತಾ
ಇದು ಯಾರು ಮಾಡಿಟ್ಟ ಜಾತಕ ದೂರಾಗುವಾಸೆ ಯಾವ ಲೆಕ್ಕ
ಕಾಲಾನೇ ಕಣ್ಣಿರ ಚಾಲಕ ಹಂಚೋದು ಹೇಗೆ ಸುಖ ದುಃಖ
ಕನಸು ಕೊಟ್ಟು ಕತ್ತಿ ಮಸೆಯೋ
ನೆನೆಪು ಕೊಟ್ಟು ನೋವ ಹೊಸೆಯೋ
ಒಹ್ ದೈವ ನಿನಗೀಗ ಕ್ಷಮೆಯಿಲ್ಲ ಭೂಮಿಲಿ
ಪ್ರೇಮಿಗಳ ಹಿಡಿ ಶಾಪ ಉಂಟು ಇಲ್ಲಿ
ಹೃದಯಾನ ಸೀಳುವ ಕಾಯಕ
ನಿಂಗ್ಯಾಕೊ ಬೇಕೋ ಇರುಳಾಯಕ
ನಿನಾಗೆ ನಿಡುವ ಪ್ರೀತಿಯ ನಿನಾಗೆ ಕೊಲ್ಲೋದ್ಯಾವ ಲೆಕ್ಕ
||ಪ್ರೀತಿ ಒಂದು ಸೂಜಿ ದಾರ ||
ಅತ್ತ ಒಂದು ಅರಳೋ ಪ್ರೀತಿ
ಇತ್ತ ಒಂದು ನರಳೊ ಪ್ರೀತಿ
ನಗುವಾಗ ನಗಲಿಲ್ಲ
ಅಳುವಾಗ ಅಳಲಿಲ್ಲ
ಒಂದಾಗೋ ವೇಳೆಲಿ ಒಬ್ಬೊಂಟಿ ಆಯ್ತಲ್ಲಾ
ಕೊನೆ ಏನು ಅನ್ನೋದು ಬಲ್ಲೋನು ಕ್ಷಣ ಕ್ಷಣವೂ ಪ್ರೀತಿ ಬೆಳೆಸಿದ್ಯಾಕೆ
ಕರುಣೆಯ ಕಣ್ಣಿರದ ವಿಧಿರಾಯ ಕಣ್ಣಿರಲ್ ಬೆಂಕಿ ಹಚ್ಚಿದ್ಯಾಕೆ
||ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ||
ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ
ಮನಸೀಗ ಗಾಳಿಯ ಪಟವಾಗಿ ಹೋಯ್ತಾ
ಬದುಕೊಂದು ಬರಿಹಾಳೆ ಪುಟವಾಗಿ ಹೋಯ್ತಾ
ವಿರಹನೆ ಪ್ರೀತಿಲಿ ದಿಟವಾಗಿ ಹೋಯ್ತಾ
ಅಳಿಸೋದೆ ದೇವರಿಗೆ ಚಟವಾಗಿ ಹೋಯ್ತಾ
ಇದು ಯಾರು ಮಾಡಿಟ್ಟ ಜಾತಕ ದೂರಾಗುವಾಸೆ ಯಾವ ಲೆಕ್ಕ
ಕಾಲಾನೇ ಕಣ್ಣಿರ ಚಾಲಕ ಹಂಚೋದು ಹೇಗೆ ಸುಖ ದುಃಖ
ಕನಸು ಕೊಟ್ಟು ಕತ್ತಿ ಮಸೆಯೋ
ನೆನೆಪು ಕೊಟ್ಟು ನೋವ ಹೊಸೆಯೋ
ಒಹ್ ದೈವ ನಿನಗೀಗ ಕ್ಷಮೆಯಿಲ್ಲ ಭೂಮಿಲಿ
ಪ್ರೇಮಿಗಳ ಹಿಡಿ ಶಾಪ ಉಂಟು ಇಲ್ಲಿ
ಹೃದಯಾನ ಸೀಳುವ ಕಾಯಕ
ನಿಂಗ್ಯಾಕೊ ಬೇಕೋ ಇರುಳಾಯಕ
ನಿನಾಗೆ ನಿಡುವ ಪ್ರೀತಿಯ ನಿನಾಗೆ ಕೊಲ್ಲೋದ್ಯಾವ ಲೆಕ್ಕ
||ಪ್ರೀತಿ ಒಂದು ಸೂಜಿ ದಾರ ||
ಅತ್ತ ಒಂದು ಅರಳೋ ಪ್ರೀತಿ
ಇತ್ತ ಒಂದು ನರಳೊ ಪ್ರೀತಿ
ನಗುವಾಗ ನಗಲಿಲ್ಲ
ಅಳುವಾಗ ಅಳಲಿಲ್ಲ
ಒಂದಾಗೋ ವೇಳೆಲಿ ಒಬ್ಬೊಂಟಿ ಆಯ್ತಲ್ಲಾ
ಕೊನೆ ಏನು ಅನ್ನೋದು ಬಲ್ಲೋನು ಕ್ಷಣ ಕ್ಷಣವೂ ಪ್ರೀತಿ ಬೆಳೆಸಿದ್ಯಾಕೆ
ಕರುಣೆಯ ಕಣ್ಣಿರದ ವಿಧಿರಾಯ ಕಣ್ಣಿರಲ್ ಬೆಂಕಿ ಹಚ್ಚಿದ್ಯಾಕೆ
||ಪ್ರೀತಿ ಒಂದು ಸೂಜಿ ದಾರ
ಹೊಲಿಯೊನ ಯಾರೋ ಸೂತ್ರಧಾರ||