ಓ..ಓ ಓ ಓ... ಆ...ಆ ಆ ಆ ಅ
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ
ಬೆಳಕು ನೀನಿ ಭೂಮಿಗೆ ಉಸಿರು ಹೆತ್ತತಾಯಿಗೆ
ನಗುವೇ ನಿನ್ನ ಭಾಷೆಯು ಅಳುವೇ ನಿನ್ನ ಆಜ್ಞೆಯು
ದಂತದ... ಬೊಂಬೆಯೇ....
|| ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ||
ಓದುವುದು ಬರೆಯಲ್ಲಿಲ್ಲ ಆ ಶಿವ ನನಗೆ
ಹಾಡುವುದ ಮರೆಸಲಿಲ್ಲ ಬೇಡಲು ಕೊನೆಗೆ
ಕೇಳುಗರ ಗುಂಡಿಗೆಯ ತಾಳಕೆ ನಾನು
ಹಾಡುವೆನು ಬದಲಿಗೆ ನಾ ಕೇಳೆನು ಏನು
ಮನೆಯೇ ನನ್ನ ಶಾಲೆಯು , ಪದವೇ ನನ್ನ ಪಾಠವು
ಗುರುವೇ ನನ್ನ ಅಮ್ಮನು ನನಗೆ ನಾನೇ ಗುಮ್ಮನು
ಊರಿನಾ ಗಿಣಿಯು ನಾ..
|| ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ ||
ದೇವರಿಗೆ ನಾನು ದಿನ ಮುಗಿಯುವುದಿಲ್ಲ
ಅಮ್ಮನನು ಜಪಿಸುವುದ ಮರೆಯುವುದಿಲ್ಲ
ಮಗನ ವಿನಃ ಅಮ್ಮನಿಗೆ ಲೋಕವೇ ಇಲ್ಲ
ಅವಳ ಮುಖ ನೋಡಿದರೆ ಹಸಿಯುವುದಿಲ್ಲ
ನನಗೆ ಗಾಯ ಆದರೇ , ಅವಳು ಅತ್ತು ಕರೆವಳು
ನನಗೆ ನಗು ಬಂದರೆ, ಅವಳು ನೋವಾ ಮರೆವಳು
ಅವಳಿಗೆ ಕರುವು ನಾ .. ..
||ರಾಮಾಚಾರಿ ಹಾಡುವ ಲಾಲಿ ಹಾಡು ಕೇಳವ್ವ
ನೀಲಿ ಬಾನಿನೂರಿಗೆ ಬೆಳ್ಳಿ ದೀಪ ನೀನವ್ವ||