Ushe Moodidaaga Lyrics

in Preethi Vathsalya

Video:

LYRIC

ಆ…ಆ…ಆ..
ಉಷೆ ಮೂಡಿದಾಗ
ಪ್ರಿಯ ನಿನ್ನ ಕೆನ್ನೆಯಾ
ರಂಗನ್ನು ನೋಡಿದೆ  
ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು
ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ  
ಸಿಹಿ ನೋವ ತಂದಿದೆ
 
|| ಉಷೆ ಮೂಡಿದಾಗ
ಪ್ರಿಯ ನಿನ್ನ ಕೆನ್ನೆಯಾ
ರಂಗನ್ನು ನೋಡಿದೆ  
ಮೈ ಮರೆತು ಹಾಡಿದೆ…||
 
ಹೂವರಳಿ ನಿಂತ ವೇಳೆ
ಕಣ್ ಮುಂದೆ  ಬಂದಿತಲ್ಲೆ……
ಪ್ರಿಯೆ ನಿನ್ನ ಕಾಡಿಗೆ ಕಣ್ಣ
ಆ ನೋಟದಂದವೇ
ಕರೆ ನೀಡಿ ನೋಟದಲ್ಲಿ
ನೀ ನಿಂತೆ ದೂರದಲ್ಲಿ
ಬಳಿ ಬಂದೆ ಬಯಸಿ ನಿನ್ನ
ನೀ ಹೋದೆ ಕಾಣದೆ
ಆ ನೆನಪು ಕಾಡಿದೆ ನನ್ನ
ಈ ಬೇಗೆ ತಾಳೆನು ಚಿನ್ನ
 
|| ಉಷೆ ಮೂಡಿದಾಗ
ಪ್ರಿಯ ನಿನ್ನ ಕೆನ್ನೆಯಾ
ರಂಗನ್ನು ನೋಡಿದೆ  
ಮೈ ಮರೆತು ಹಾಡಿದೆ…||
 
ಕಾವೇರಿ ನೀರಿನಲ್ಲೂ
ಕನ್ನಡದ ಕಾವ್ಯದಲ್ಲೂ
ಬೇಲೂರ ಬಾಲೆಯಲ್ಲೂ
ನಾ ಕಂಡೆ ನಿನ್ನನು
ಒಂದೊಂದು ಭಂಗಿಯಲ್ಲೂ
ಒಂದೊಂದು ಭಾವದಲ್ಲೂ
ಒಂದೊಂದು ಮಾತಿನಲ್ಲೂ
ನೀ ಸೆಳೆದೆ ನನ್ನನು
ನೀ ನಿಂತೆ ಕಣ ಕಣದಲ್ಲೂ
ನನ್ನೆದೆಯ ಉಸಿರುಸಿರಲ್ಲೂ
 
|| ಉಷೆ ಮೂಡಿದಾಗ
ಪ್ರಿಯ ನಿನ್ನ ಕೆನ್ನೆಯಾ
ರಂಗನ್ನು ನೋಡಿದೆ  
ಮೈ ಮರೆತು ಹಾಡಿದೆ
ಆ ಮೇಘ ಮಿಂಚಲು
ನಗೆ ಮಿಂಚು ನಿನ್ನದು
ನೆನಪಾಗಿ ಬಂದಿದೆ  
ಸಿಹಿ ನೋವ ತಂದಿದೆ
 
ಉಷೆ ಮೂಡಿದಾಗ
ಪ್ರಿಯ ನಿನ್ನ ಕೆನ್ನೆಯಾ
ರಂಗನ್ನು ನೋಡಿದೆ  
ಮೈ ಮರೆತು ಹಾಡಿದೆ…||

Ushe Moodidaaga song lyrics from Kannada Movie Preethi Vathsalya starring Tiger Prabhakar, Aarathi, Srinath, Lyrics penned by R N Jayagopal Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1984