Ninna Kanda Mele Lyrics

in Prakruthiya Madilu Banavasi

LYRIC

ನಿನ್ನ ಕಂಡ ಮೇಲೆ ಮನದಿ ಪ್ರೇಮಜ್ವಾಲೆ
ನಿನ್ನ ನೆನೆವ ವೇಳೆ ಮನವೆ ಹೂವ ಮಾಲೆ
ನಿನ್ನ ಕಂಡ ಮೇಲೆ ಮನದಿ ಪ್ರೇಮಜ್ವಾಲೆ
ನಿನ್ನ ನೆನೆವ ವೇಳೆ ಮನವೆ ಹೂವ ಮಾಲೆ
ಏನೊ ಪ್ರೀತಿ ಮೋಡಿಯು ನೀನು ಕಂಡ ರೀತಿಯು
ಏನೊ ಪ್ರೀತಿ ಮೋಡಿಯು ನೀನು ತಂದ ಪ್ರೀತಿಯು
ಪ್ರೀತಿಯ ಮೋಡಿಯೊ
ನಿನ್ನ ಕಂಡ ಮೇಲೆ ಮನದಿ ಪ್ರೇಮಜ್ವಾಲೆ
ನಿನ್ನ ನೆನೆವ ವೇಳೆ ಮನವೆ ಹೂವ ಮಾಲೆ
 
ನನ್ನೆದೆಯಲ್ಲಿ ಚಿಗುರೊಡೆಯಿತು ಪ್ರೀತಿಯ ಬಳ್ಳಿ
ಕಣ್ಣೆದುರಲ್ಲಿ ನೀ ಅಡಿಗೇಗೆ ಕಾಡಿದೆ
ಬಿರುಬಿಸಲಲ್ಲಿ ಣಿನಾದೆ ತಣ್ಣನೆ ಗಾಳಿ
ತಂಪನು ಚೆಲ್ಲಿ ಮೈ ಸೋಕಿ ಏಕೆ ಓಡಿದೆ
ಎಲ್ಲೊ ಬಾನಿನಲಿ ನಿಲ್ಲೊ ಮೋಡದಲಿ
ನೀರಾಗಿ ನೀನು ಸುರಿದೆ ನನ್ನೊಲವೆ ನನ್ನಲ್ಲೆ ಏಕೆ ಸೇರಿದೆ
ಎಲ್ಲೊ ಬಾನಿನಲಿ ನಿಲ್ಲೊ ಮೋಡದಲಿ
ನೀರಾಗಿ ನೀನು ಸುರಿದೆ ನನ್ನೊಲವೆ ನನ್ನಲ್ಲೆ ಏಕೆ ಸೇರಿದೆ
ಹರಿಯೊ ಝರಿಯು ನೀನಾದೆ ಬಿರಿಯೊ ಧರೆಯು ನಾನಾದೆ
ಬೆರೆಯೊ ಕರೆಯ ಅರಿತು ತಂಪಾದೆ
 
||ನಿನ್ನ ಕಂಡ ಮೇಲೆ ಮನದಿ ಪ್ರೇಮಜ್ವಾಲೆ
ನಿನ್ನ ನೆನೆವ ವೇಳೆ ಮನವೆ ಹೂವ ಮಾಲೆ||
 
ಹೃದಯದ ಒಳಗೆ ನಿನದೇನೆ ಮೆಲ್ಲನೆ ನಡಿಗೆ
ಕನಸ್ಸಿನ ಕಡೆಗೆ ನೀ ಓಡಿ ಏಕೆ ಕಾಡಿದೆ
ನಿದಿರೆಯ ಒಳಗೆ ನೀನಾದೆ ಪ್ರೀತಿಯ ಚಡಿಗೆ
ಅರೆಯದ ಬೆಸುಗೆ ಮರೆಯಾಗದ ಹಾಗೆ ಮಾಡಿದೆ
ತಂಪು ಗಾಳಿಯಲಿ ಮಂಪು ವೇಳೆಯಲಿ
ಮಂಜಾಗಿ ನೀನು ಸುರಿದೆ ನನ್ನೊಳಗೆ ಹನಿಯಾಗಿ ಏಕೆ ಸೇರಿದೆ
ತಂಪು ಗಾಳಿಯಲಿ ಮಂಪು ವೇಳೆಯಲಿ
ಮಂಜಾಗಿ ನೀನು ಸುರಿದೆ ನನ್ನೊಳಗೆ ಹನಿಯಾಗಿ ಏಕೆ ಸೇರಿದೆ
ಅರಳೊ ತಿರುಳು ನೀನಾದೆ ಕೆರಳೊ ಒಡಲು ನಾನದೆ
ಕದಲೊ ಬದಲು ನೋವಲು ಸುಖಿಯಾದೆ
 
||ನಿನ್ನ ಕಂಡ ಮೇಲೆ ಮನದಿ ಪ್ರೇಮಜ್ವಾಲೆ
ನಿನ್ನ ನೆನೆವ ವೇಳೆ ಮನವೆ ಹೂವ ಮಾಲೆ
ಏನೊ ಪ್ರೀತಿ ಮೋಡಿಯು ನೀನು ಕಂಡ ರೀತಿಯು
ಪ್ರೀತಿಯ ಮೋಡಿಯೊ||

Ninna Kanda Mele song lyrics from Kannada Movie Prakruthiya Madilu Banavasi starring Lochan Barga, Sanathani, Sanjay Shivan, Lyrics penned by M Parthasarathi Sung by Santhosh Venky, Anuradha Bhat, Music Composed by Dhanasheelan, film is Directed by Dheeraj Surya and film is released on 2016