Belli Modada Mele Lyrics

in Praja Shakthi

Video:

LYRIC

ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
ಕಾಮನಬಿಲ್ಲಿನ ಮೇಲೆ ಓಡಿದೆ ಬಯಕೆ ಕುದುರೆಗಳು
ಮಿಂಚು ಮಿಂಚು ಒಡಲಲಿ ಮಿಂಚು ಮಿಂಚು
ಏನೊ ಏನೊ ಮನಸ್ಸಿನ ಸಂಚು ಸಂಚು
ತಾಳ ಶೃತಿ ಎದೆ ಹಾಡುತ್ತಿದೆ ಪ್ರೇಮವಿದು ತಿಳಿ ಎನ್ನುತ್ತಿದೆ
ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
 
ಮುತ್ತು ಹವಳ ಪಚ್ಚೆ ತೋರಣದ ಹೊಸಬೀದಿಯಲ್ಲಿ
ಬಂದೆ ನೀನು ಹೂವ ತೇರಿನಲಿ
ಹತ್ತು ಸೂರ್ಯರ ಕಾಂತಿ ಬೆಳಗಿಸುವ ಕಿರೀಟ ಹೊತ್ತು
ನಿಂತೆ ನೀನು ರಾಜ ಠೀವಿಯಲಿ
 
ಮುತ್ತು ಹವಳ ಪಚ್ಚೆ ತೋರಣದ ಹೊಸಬೀದಿಯಲ್ಲಿ
ಬಂದೆ ನೀನು ಹೂವ ತೇರಿನಲಿ
ಹತ್ತು ಸೂರ್ಯರ ಕಾಂತಿ ಬೆಳಗಿಸುವ ಕಿರೀಟ ಹೊತ್ತು
ನಿಂತೆ ನೀನು ರಾಜ ಠೀವಿಯಲಿ
ಈ ದಿನವೆ ಮದನೋತ್ಸವ ಪ್ರೇಮಿಕ್ಕಿದೆ ನಿಜ ವೈಭವ
ಹಾಲಿನ ಕೊಡದೊಳಗೆ ನಿನಗೆ ಮಾಡಲೆ ಅಭಿಷೇಕ
ಶಾರದೆ ವೀಣೆಯಲಿ ಮಿಡಿದ ಇಂಪಿದೆ ಮಾತಿನಲಿ
ಮಂಜಿನ ಹನಿಗಳಲಿ ಮಿಂದ ತಂಪಿದೆ ತೋಳಿನಲಿ
 
||ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
ಕಾಮನಬಿಲ್ಲಿನ ಮೇಲೆ ಓಡಿದೆ ಬಯಕೆ ಕುದುರೆಗಳು||
 
ಮರಳುಗಾಡಲಿ ಹಸಿರುತೋಪಿನಲು ನೀ ಬಂದೆ
ಇಂದು ಚೇತನ ತಂದೆ ನನ್ನ ಜೀವನದೆ
ಮೌನದ ಮಲ್ಲಿಗೆ ಅರಳಿ ನಿಂತಂತೆ ನೀ ತಂದೆ
ಇಂದು ನೂತನ ಪರಿಮಳ ಎದೆಯ ಅಂಗಳದೆ
 
ಮರಳುಗಾಡಲಿ ಹಸಿರುತೋಪಿನಲು ನೀ ಬಂದೆ
ಇಂದು ಚೇತನ ತಂದೆ ನನ್ನ ಜೀವನದೆ
ಮೌನದ ಮಲ್ಲಿಗೆ ಅರಳಿ ನಿಂತಂತೆ ನೀ ತಂದೆ
ಇಂದು ನೂತನ ಪರಿಮಳ ಎದೆಯ ಅಂಗಳದೆ
ಧನ್ಯತೆಯ ಹೂಮಾಲಿಕೆ ಅರ್ಪಿಸಲೆ ಈ ಪಾದಕ್ಕೆ
ದೈವವು ಅಲ್ಲವು ನಾ ನಿನ್ನ ಪ್ರೀತಿಯ ದಾಸನು ನಾ
ಯಾವುದೊ ಜನ್ಮದಲಿ ಗೈದ ಪೂಜೆಯ ಫಲ ಇದುವೆ
ಇಂದಿನ ಜನ್ಮದಲಿ ಗೈದ ಪ್ರೀತಿಯ ಬಲ ಇದುವೆ
 
ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
ಕಾಮನಬಿಲ್ಲಿನ ಮೇಲೆ ಓಡಿದೆ ಬಯಕೆ ಕುದುರೆಗಳು
ನನ್ನ ನಿನ್ನ ಮಿಲನವು ಚಿನ್ನ ಚಿನ್ನ
ಬಣ್ಣ ಬಣ್ಣ ಕನಸ್ಸಲು ಚೆನ್ನ ಚೆನ್ನ
ಪ್ರೇಮವಿದೆ ತಿಳಿ ಎನ್ನುತ್ತಿದೆ ಸಂಗಮವೆ ಸುಖ ಕಾಣುತ್ತಿದೆ
 
|| ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
ಕಾಮನಬಿಲ್ಲಿನ ಮೇಲೆ ಓಡಿದೆ ಬಯಕೆ ಕುದುರೆಗಳು||
||ಬೆಳ್ಳಿ ಮೋಡದ ಮೇಲೆ ಹಾರಿದೆ ಆಸೆ ಹಕ್ಕಿಗಳು
ಓಡಿದೆ ಬಯಕೆ ಕುದುರೆಗಳು
ಹಾರಿದೆ ಆಸೆ ಹಕ್ಕಿಗಳು
ಓಡಿದೆ ಬಯಕೆ ಕುದುರೆಗಳು
ಹಾರಿದೆ ಆಸೆ ಹಕ್ಕಿಗಳು||

Belli Modada Mele song lyrics from Kannada Movie Praja Shakthi starring Shashikumar, Ramakrishna Hegde,, Lyrics penned by R N Jayagopal Sung by Rajesh, Chithra, Music Composed by Jai-Shekar, film is Directed by D Rajendra Babu and film is released on 1994