ಗಂಡು : ಆಷಾಢ ಕಳೆದೈತೆ .. ಶ್ರಾವಣ ಕುಣಿತೈತೆ...
ತೋರಣ ತೂಗ್ತೈತೆ ಜೀಗುವ ಜೋಕಾಲಿ
ಕೋರಸ್ : ಆಷಾಢ ಕಳೆದೈತೆ .. ಶ್ರಾವಣ ಕುಣಿತೈತೆ...
ತೋರಣ ತೂಗ್ತೈತೆ ಜೀಗುವ ಜೋಕಾಲಿ
ಗಂಡು : ಬಾನಿಗು ಭೂಮಿಗು ಸೇತುವೆ ಆಗೈತೆ
ಬೀಗುತ ಬಾಗುತ ಜೋಗುಳ ಹಾಡೈತೆ
||ಹೆಣ್ಣು : ಆಷಾಢ ಕಳೆದೈತೆ .. ಶ್ರಾವಣ ಕುಣಿತೈತೆ...
ತೋರಣ ತೂಗ್ತೈತೆ ಜೀಗುವ ಜೋಕಾಲಿ
ಕೋರಸ್ : ಆಷಾಢ ಕಳೆದೈತೆ .. ಶ್ರಾವಣ ಕುಣಿತೈತೆ...
ತೋರಣ ತೂಗ್ತೈತೆ ಜೀಗುವ ಜೋಕಾಲಿ
ಹೆಣ್ಣು : ಬಾನಿಗು ಭೂಮಿಗು ಸೇತುವೆ ಆಗೈತೆ
ಬೀಗುತ ಬಾಗುತ ಜೋಗುಳ ಹಾಡೈತೆ ||
ಹೆಣ್ಣು: ಎಲೆ ಹಾಕು ಬಾಯಿಗಿಷ್ಟು ಸುಣ್ಣ ಇಕ್ಕು
ವೀಳ್ಯ ತಿಂದು ಕೆಂಪಾದಂತೆ
ಬಾನಲ್ಲಿ ಸಾವಿರ ರಂಗೋಲಿ
ಗಂಡು : ಹೇ ಮುಡಿ ತುಂಬಾ
ಮಲ್ಲಿಗೆಯ ಹೂವ ಇಟ್ಟು
ಹಸಿರಿನ ಸೀರೆ ಉಟ್ಟು
ಭೂದೇವಿ ಆಡುತ ಜೋಕಾಲಿ..
ಹೆಣ್ಣು : ಜಗ್ಗುತ್ತ ಹಗ್ಗ ಜೀಗುತ ವೇಗ ಜಂಗುಳಿ ಸೇರಿ ಚೀರಾಡಿ
ಗಂಡು : ಸೊಂಟದ ನೆತ್ತಿ ಸೆರಗಿನ ಪಟ್ಟಿ ಬಿಗಿಯಾಗಿ ಕಟ್ಟಿ ಚೀರಾಡಿ
ಹೆಣ್ಣು : ಹೋದೆಯ ಸಭೀಕನೆ
ಕೋರಸ್ : ಗೋವಿಂದ ಎನ್ನಿರಿ
ಹೆಣ್ಣು : ಗೋವಿಗೆ ಹಸಿ ತಿನ್ಸಿ
ಕೋರಸ್ : ಗೋಪಾಲ ಅನ್ನಿರಿ
ಗಂಡು : ಚುರುಂಬುರಿ ಕರ್ಜಿಕಾಯಿ ಕೋಸಂಬರಿ
ಕರದಂಟು ತಿಂದು ತೇಗಿ
ಜೋಕಾಲಿ ಸುಂಯ್ ಅಂತ ಸುತ್ತಾಡಿ
ಹೆಣ್ಣು : ಆಆಆ... ದ್ಯಾಮಲಮ್ಮಾ ಮಹಾಮಾಯಿ ಮಾರಿಯಮ್ಮಾ
ಬೆಟ್ಟದಾ ಹುಲಿಯಮ್ಮಾ
ಜೀಗುತ ಶರಣೆಂದು ಹಾಡ್ಯಾಡಿ
ಗಂಡು : ಹೋಯ್ .. ಕಂದಿಕೇರಿಯ ಬಿಂದಿಕೇರಿಯ
ಹಾಗಲ್ ಕೇರಿಯ ನಾಯಕ್ರ
ಹೆಣ್ಣು : ಗಾಳಿ ಬಾಯವ್ವ ಹಿರಿ ಬಾಯವ್ವ
ಕಿರಿ ಬಾಯಿ ಬೇಗ ಬನ್ರವ್ವ
ಗಂಡು : ತಾಂಡದ ಜನ ನಾವು ..
ಕೋರಸ್: ತಾಂಡವ ಆಡುವ
ಗಂಡು : ತೂಗುವ ಧರ್ಮ ನ್ಯಾಯ..
ಕೋರಸ್ : ಪಾಂಡವರಾಗುವ
ಗಂಡು : ತಾಂಡದ ಜನ ನಾವು ..
ಕೋರಸ್: ತಾಂಡವ ಆಡುವ
ಹೆಣ್ಣು : ಹೋದೆಯ ಸಭೀಕನೆ
ಕೋರಸ್ : ಗೋವಿಂದ ಎನ್ನಿರಿ
ಹೆಣ್ಣು : ಗೋವಿಗೆ ಹಸಿ ತಿನ್ಸಿ
ಕೋರಸ್ : ಗೋಪಾಲ ಅನ್ನಿರಿ
ಗಂಡು : ತಾಂಡದ ಜನ ನಾವು ..
ಕೋರಸ್: ತಾಂಡವ ಆಡುವ
ಹೆಣ್ಣು : ಹೋದೆಯ ಸಭೀಕನೆ
ಕೋರಸ್ : ಗೋವಿಂದ ಎನ್ನಿರಿ
ಹೆಣ್ಣು : ಗೋವಿಗೆ ಹಸಿ ತಿನ್ಸಿ
ಕೋರಸ್ : ಗೋಪಾಲ ಅನ್ನಿರಿ