Thera Eri Ambaradaage Lyrics

in Parasangada Gendethimma

Video:

LYRIC

ತೇರಾ ಏರಿ ಅಂಬರದಾಗೆ ನೇಸರು ನಗುತಾನೆ.. 
ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ...
ಬೀರ್ಯಾವೇ ಚೆಲುವ ಬೀರ್ಯಾವೇ
ಬಾ ನೋಡಿ ನಲಿಯೋಣ ತಮ್ಮಾ
ನಾವ್ ಹಾಡಿ ಕುಣಿಯೋಣ ತಮ್ಮಾ
 
ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ
ಹೂವಿನ ತುಂಬಾ ಸಣ್ಣ ಚಿಟ್ಟೆ ಕುಂತಾವೆ
ಬಾಗಿ ಬೀಗಿ ಅತ್ತಾ ಇತ್ತಾ ಬಾಳೆ ಬಳುಕ್ಯಾವೆ
ಬಾಳೆ ವನವೇ ನಕ್ಕು ಕಣ್ಣು ತಂದ್ಯಾವೆ
ಕುಂತರೆ ಸೆಳೆವ ಅಹ್ಹಹ್ಹಾಹ್ಹಹ್ಹಾ ಸಂತಸ ತರುವ
ಕುಂತರೆ ಸೆಳೆವ ಸಂತಸ ತರುವ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೇ
 
|| ತೇರಾ ಏರಿ ಅಂಬರದಾಗೆ ನೇಸರು ನಗುತಾನೆ.. 
ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ...
ಮರಗಿಡ ತೂಗ್ಯಾವೇ ಚಿಲಿಪಿಲಿ ಹಕ್ಕಿ ಹಾಡ್ಯಾವೇ...||
 
ಭೂಮಿ ಮ್ಯಾಗೇ ಹಚ್ಚ ಹಚ್ಚಗೆ ಹಾದಿ ತೆರೆದ್ಯಾವೇ
ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಮೌನದ ಗಾನ ಎಲ್ಲರ ಮನಸ್ಸ ಸೆಳೆದಾವೆ
ಭಾವ ಬಿರಿದು ಹತ್ತಿರ ಕರೆದು
ಭಾವ ಬಿರಿದು ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ
ಅಹ್ಹಹ್ಹಹ್ಹ ಅಹ್ಹಹ್ಹಹಹ್ಹಾ
 
|| ತೇರಾ ಏರಿ ಅಂಬರದಾಗೆ ನೇಸರು ನಗುತಾನೆ.. 
ಆ… ತೇರಾ ಏರಿ ಅಂಬರದಾಗೆ ನೇಸರು ನಗುತಾನೆ.. 
ಮರಗಿಡ ತೂಗ್ಯಾವೇ ಹಕ್ಕಿ ಹಾಡ್ಯಾವೇ
ಬೀರ್ಯಾವೇ ಚೆಲುವ ಬೀರ್ಯಾವೇ
ಬಾ, ನೋಡಿ ನಲಿಯೋಣ ತಮ್ಮಾ
ನಾವ್ ಹಾಡಿ ಕುಣಿಯೋಣ ತಮ್ಮಾ…||

Thera Eri Ambaradaage song lyrics from Kannada Movie Parasangada Gendethimma starring Lokesh, Reeta Anchan, Manu, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Maruthi Shivaram and film is released on 1978