Notadage Nageya Meeti (Sad) Lyrics

in Parasangada Gendethimma

LYRIC

ನೋಟದಾಗೆ ನಗೆಯ ಮೀಟೀ…
ಮೋಜಿನಾಗೆ ಎಲ್ಲೆಯ ದಾಟೀ...
ಮೋಡಿಯ ಮಾಡಿದೋಳ
ಪರಸಂಗ ಐತೆ, ಪರಸಂಗ ಐತೆ
ಮೋಹಾವ ತೋರಿದೋಳ
ಪರಸಂಗ ಐತೆ, ಪರಸಂಗ ಐತೆ
 
ಬದುಕೆಲ್ಲ ಹೂವಾಗ್ಲಿ ಅಂತ
ಗುಲಾಬೀನೆ ಹುಡುಕಿ ತಂದೆ
ಮೂರು ಹೊತ್ತು ಮರೀದಂಗೆ 
ಹೃದಯದಾಗೆ ಇಟ್ಕೊಂಡಿದ್ದೆ
ಕಂಪ ಕೊಡುವ ಹೂ ಕೂಡ...ಆಆಆ  
ಕಂಪ ಕೊಡುವ ಹೂ ಕೂಡ 
ನನ್ ಜೊತೆ ಮುನಿದೈತೆ
ಏನೇ ಆದ್ರು ಎದೆಯಾಗೆ 
ಮುಳ್ಳಾಗಿ ಉಳಿದೈತೆ…
 
ಬಿಡಿಸದಾ ಒಗಟೊಂದು 
ಎದೆಬಿಡದೆ ತೊಡಕಾಯ್ತೆ
ನೆನೆದಾರೆ ಜೋರಾಗಿ 
ಗೊಂದಲದ ಬೀಡಾಯ್ತೆ
ತಪ್ಪು ಸರಿ ತಿಳಿಯದೇ.....
ತಪ್ಪು ಸರಿ ತಿಳಿಯದೇ
ದಾರಿ ಅರಿಯದಾಯಿತೇ
ಹಗಲಿರುಳು ಗೋಳಾಡಿ
ಬಾಳು ಬರೀ ಕತ್ತಲಾಯಿತೇ…

Notadage Nageya Meeti (Sad) song lyrics from Kannada Movie Parasangada Gendethimma starring Lokesh, Reeta Anchan, Manu, Lyrics penned by Doddarange Gowda Sung by S P Balasubrahmanyam, Music Composed by Rajan-Nagendra, film is Directed by Maruthi Shivaram and film is released on 1978