Anju Mallige Lyrics

in Palegara

LYRIC

-
ಓಓಓಓ….
ಓಓಓಓಓ……
ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ 
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ  
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ

ಝೇಂಕಾರ ಇಂಪಾಗಿದೆ 
ಮೈಯೆಲ್ಲ ಝೊಂಪೆಂದಿದೆ
ಜೇನೆಲ್ಲ ಹೆಪ್ಪಾಗಿದೆ 
ಮನಸೇನೊ ತಪ್ಪೆಂದಿದೆ

||ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ 
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ||
 
ರವಿ ಕಿರಣವು ಸುಳಿದಾಗ
ರವಿ ಕಿರಣವು ಸುಳಿದಾಗ 
ಹೂಮನೆಗಳು ತೆರೆವಂತೆ
ಇನಿಯನ ಈ ಬಿಸಿಯ ಉಸಿರಿಗೆ 
ತೆರೆಯದೆನ್ನ ಹೃದಯ ಮಾಳಿಗೆ
ಓ ಸುಮ ಬಾಲೆ 
 
 ಆನಂದ ಆನಂದ 
ಈ ನನ್ನ ದುಂಬಿ ಮಾತೆಂದ
ಈ ಹೂವು ಅರಳೋದು 
ಈ ಹೊತ್ತು ಮುಳುಗೋ ಕ್ಷಣದಿಂದ

||ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ 
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ||

ಗೆಳತಿಯೆ ಬರಬೇಕೆಂದು 
ಗೆಳತಿಯೆ ಬರಬೇಕೆಂದು 
ನವಿಲುಗರಿ ತೆರೆದಾಗ
ಹೆಣ್ಣವಿಲು ಬಾಯಿ ತೆರೆಯುವ 
ಸುಂದರದ ನೋಟ ಮರೆಸುವ
ಬಾ ಸುಮ ಬಾಲೆ 
 
ನಾ ಒಲ್ಲೆ ನಾ ಒಲ್ಲೆ 
ಆ ನವಿಲಿನಾಟ ನಾ ಒಲ್ಲೆ
ಈ ಆಸೆ ಅತಿ ಆಸೆ 
ತಾನಾಗಬಹುದು ನಾ ಒಲ್ಲೆ

ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ 
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ  
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ
ಝೇಂಕಾರ ಇಂಪಾಗಿದೆ 
ಮೈಯೆಲ್ಲ ಝೊಂಪೆಂದಿದೆ
ಜೇನೆಲ್ಲ ಹೆಪ್ಪಾಗಿದೆ 
ಮನಸೇನೊ ತಪ್ಪೆಂದಿದೆ

||ಅಂಜು ಮಲ್ಲಿಗೆ ಅರಳಲೆ ಮೆಲ್ಲಗೆ 
ನಾಚಿಕೊಂಡರೆ ಹೇಗೆಲೆ ಪ್ರೀತಿಗೆ||

Anju Mallige song lyrics from Kannada Movie Palegara starring Ambarish, Khushbu, Nirosha, Lyrics penned by Hamsalekha Sung by Manu, S Janaki, Music Composed by Hamsalekha, film is Directed by N Omprakash Rao and film is released on 1996