ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ
ಮಳೆಯ ನಡುವಲ್ಲಿ ನಾನು ನಿಂತರು
ನಿನ್ನ ಬಿಂಬವೆ ಕಣ್ಮುಂದೆ
ಬೇರೆ ಮಾತೇಕೆ ಮೌನವೆ ಸಾಕೆ
ಪ್ರೇಮ ಪ್ರಾರ್ಥನೆಗೆ
ಕನಸಿನ ಪುಟಗಳಿಗೆ ನಿನ್ನ ನೆನಪೆಲ್ಲ ಬರವಣಿಗೆ
ಪ್ರತಿಕ್ಷಣವು ಪ್ರತಿದಿನವು ಬರಿ ಮೌನ ನಿನ ಧ್ಯಾನ
ನನ್ನೆದೆಯ ಈ ಬಾನುಲಿಯಲಿ ನಿನ್ನದೊಂದೆ ಗಾನ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||
ಪ್ರೇಮ ಸಂಭಾಷಣೆ ಕಣ್ಣಲ್ಲೆ ಮನದ ಈ ಭಾವನೆ
ಸಿಹಿ ಜೇನಿನಂತೆ ಈ ವೇಳೆ ಜೊತೆ ನೀನಿದ್ದರೆ
ಈ ಮಾಯೆ ಏನೊ ನನ್ನನ್ನೆ ಮರೆತೆ ಇಲ್ಲೆ ನಾನು
ಈ ನನ್ನ ಎದೆಯಲ್ಲಿ ನವಿರಾದ ಸಂಕೋಲೆ
ನಿನ್ನಿಂದಲೆ ಸಿಹಿಯಾತನೆ ನಿನ್ನಿಂದಲೆ ಪರಿಕಲ್ಪನೆ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||
ಏನೊ ಆಕರ್ಷಣೆ ನಿನ್ನಲ್ಲಿ ಒಲವ ಆಲಾಪನೆ
ಹೊಸಭಾವಗೀತೆ ನನ್ನಲ್ಲಿ ಇಂದು ಮೂಡುತ್ತಿದೆ
ಈ ಜೀವಧರೆಗೆ ಇದೀಗ ಸೋನೆ ಮಳೆಯಾಗಿದೆ
ನೀನಿರದ ಈ ಬದುಕ ನಾ ಹೇಗೆ ಊಹಿಸಲಿ
ಈ ಜೀವವೆ ನಿನದಾಗಿದೆ ನಿನ್ನೊಲವಿಗೆ ತಾ ಕಾದಿದೆ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||
ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ
ಮಳೆಯ ನಡುವಲ್ಲಿ ನಾನು ನಿಂತರು
ನಿನ್ನ ಬಿಂಬವೆ ಕಣ್ಮುಂದೆ
ಬೇರೆ ಮಾತೇಕೆ ಮೌನವೆ ಸಾಕೆ
ಪ್ರೇಮ ಪ್ರಾರ್ಥನೆಗೆ
ಕನಸಿನ ಪುಟಗಳಿಗೆ ನಿನ್ನ ನೆನಪೆಲ್ಲ ಬರವಣಿಗೆ
ಪ್ರತಿಕ್ಷಣವು ಪ್ರತಿದಿನವು ಬರಿ ಮೌನ ನಿನ ಧ್ಯಾನ
ನನ್ನೆದೆಯ ಈ ಬಾನುಲಿಯಲಿ ನಿನ್ನದೊಂದೆ ಗಾನ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||
ಪ್ರೇಮ ಸಂಭಾಷಣೆ ಕಣ್ಣಲ್ಲೆ ಮನದ ಈ ಭಾವನೆ
ಸಿಹಿ ಜೇನಿನಂತೆ ಈ ವೇಳೆ ಜೊತೆ ನೀನಿದ್ದರೆ
ಈ ಮಾಯೆ ಏನೊ ನನ್ನನ್ನೆ ಮರೆತೆ ಇಲ್ಲೆ ನಾನು
ಈ ನನ್ನ ಎದೆಯಲ್ಲಿ ನವಿರಾದ ಸಂಕೋಲೆ
ನಿನ್ನಿಂದಲೆ ಸಿಹಿಯಾತನೆ ನಿನ್ನಿಂದಲೆ ಪರಿಕಲ್ಪನೆ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||
ಏನೊ ಆಕರ್ಷಣೆ ನಿನ್ನಲ್ಲಿ ಒಲವ ಆಲಾಪನೆ
ಹೊಸಭಾವಗೀತೆ ನನ್ನಲ್ಲಿ ಇಂದು ಮೂಡುತ್ತಿದೆ
ಈ ಜೀವಧರೆಗೆ ಇದೀಗ ಸೋನೆ ಮಳೆಯಾಗಿದೆ
ನೀನಿರದ ಈ ಬದುಕ ನಾ ಹೇಗೆ ಊಹಿಸಲಿ
ಈ ಜೀವವೆ ನಿನದಾಗಿದೆ ನಿನ್ನೊಲವಿಗೆ ತಾ ಕಾದಿದೆ
||ಮಿಂಚು ಮೋಡ ಸಂಚು ಮಾಡಿ
ಇಂದ್ರ ಛಾಪ ಮೂಡಿದೆ
ಸಪ್ತಸ್ವರದಿ ರಾಗ ಮಾಡಿ
ಬೀಸೊಗಾಳಿ ಕಾಡಿದೆ||