-
ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ
ನಗುತ ನಗುತ ಹೃದಯದ ತನಿಖೆ
ಹಗಲು ಇರುಳು ನಡೆಸುವ ಬಯಕೆ
ಸಿಗು ನೀ ಸರಿಯಾಗಿ
ನಿನ್ನೆಲ್ಲ ಗಮನ ನನ್ನಲ್ಲೆ ಹರಿಸು
ನನ್ನನ್ನು ಒಲಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
ನೀನೆ ನನ್ನ ಇಷ್ಟ ದೇವತೆ
ಪ್ರೀತಿಯೊಂದೆ ನನ್ನ ಕಾಣಿಕೆ
ಮತ್ತೆ ಮತ್ತೆ ಎಲ್ಲ ಹೇಳಲೇಬೇಕೆ
ನೀನಿದ್ದರೇ ಮಡಿಲಿನಲಿ ಇನ್ನೇತಕೆ ಹಾಡು
ಏಕಾಂಗಿಯ ದಿನಚರಿಯ ನೀನು ಸಹ ನೋಡು
ಹೆಣೆದ ಬೆರಳು ಬಿಗಿಯುತ ಇರಲು
ಬರಿ ಮುಂಗುರುಳು ನಡುವೆಯೆ ಬರಲು
ಸರಿಸು ನವಿರಾಗಿ
ನಿನ್ನೆಲ್ಲ ಕನಸು ನನ್ನಲ್ಲೇ ಇರಿಸು
ನನ್ನನ್ನೂ ಗಳಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
ಅಂದವಾದ ರೂಪ ರೇಶೆಯ
ಹೀಗೆಯೊಮ್ಮೆ ತಿದ್ದಿ ನೋಡಲೆ
ನಿನ್ನ ತೋಳೆ ಒಂದು ಗಂಧದ ಮಾಲೆ....
ನೀ ನನ್ನನು ಸಿಂಗರಿಸು ನಾ ಮುತ್ತಿನ ತೇರು
ಇದ್ದಲ್ಲಿಯೆ ಬಗೆಹರಿಸು ಎಲ್ಲ ತಕರಾರು
ಜಗವೇ ನಿನ್ನ ಸೆಳೆದರು ಸಹಿತ
ಒಲವೇ ನೀನೆ ಹೃದಯದ ಬಡಿತ
ಇರುವೆ ನಿನಗಾಗಿ
ನನ್ನನ್ನೇ ಮರೆಸು ನನ್ನನ್ನು ಅರಸು
ನನ್ನನ್ನು ಉಳಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
-
ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ
ನಗುತ ನಗುತ ಹೃದಯದ ತನಿಖೆ
ಹಗಲು ಇರುಳು ನಡೆಸುವ ಬಯಕೆ
ಸಿಗು ನೀ ಸರಿಯಾಗಿ
ನಿನ್ನೆಲ್ಲ ಗಮನ ನನ್ನಲ್ಲೆ ಹರಿಸು
ನನ್ನನ್ನು ಒಲಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
ನೀನೆ ನನ್ನ ಇಷ್ಟ ದೇವತೆ
ಪ್ರೀತಿಯೊಂದೆ ನನ್ನ ಕಾಣಿಕೆ
ಮತ್ತೆ ಮತ್ತೆ ಎಲ್ಲ ಹೇಳಲೇಬೇಕೆ
ನೀನಿದ್ದರೇ ಮಡಿಲಿನಲಿ ಇನ್ನೇತಕೆ ಹಾಡು
ಏಕಾಂಗಿಯ ದಿನಚರಿಯ ನೀನು ಸಹ ನೋಡು
ಹೆಣೆದ ಬೆರಳು ಬಿಗಿಯುತ ಇರಲು
ಬರಿ ಮುಂಗುರುಳು ನಡುವೆಯೆ ಬರಲು
ಸರಿಸು ನವಿರಾಗಿ
ನಿನ್ನೆಲ್ಲ ಕನಸು ನನ್ನಲ್ಲೇ ಇರಿಸು
ನನ್ನನ್ನೂ ಗಳಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
ಅಂದವಾದ ರೂಪ ರೇಶೆಯ
ಹೀಗೆಯೊಮ್ಮೆ ತಿದ್ದಿ ನೋಡಲೆ
ನಿನ್ನ ತೋಳೆ ಒಂದು ಗಂಧದ ಮಾಲೆ....
ನೀ ನನ್ನನು ಸಿಂಗರಿಸು ನಾ ಮುತ್ತಿನ ತೇರು
ಇದ್ದಲ್ಲಿಯೆ ಬಗೆಹರಿಸು ಎಲ್ಲ ತಕರಾರು
ಜಗವೇ ನಿನ್ನ ಸೆಳೆದರು ಸಹಿತ
ಒಲವೇ ನೀನೆ ಹೃದಯದ ಬಡಿತ
ಇರುವೆ ನಿನಗಾಗಿ
ನನ್ನನ್ನೇ ಮರೆಸು ನನ್ನನ್ನು ಅರಸು
ನನ್ನನ್ನು ಉಳಿಸು
||ಒಂದಲ್ಲ ಸಾವಿರ ಮಿಂಚು ನಿನ್ನಯ ಕಣ್ಣಲಿ
ನಾನೆಲ್ಲೆ ಹೋದರು ನನ್ನ ಜೀವವು ನಿನ್ನಲಿ||
Ondhalla song lyrics from Kannada Movie Nanu Matthu Varalakshmi starring Pruthvi, Malavika Mohanan, Prakash Rai, Lyrics penned by Jayanth Kaikini Sung by Ajay Warrier, Music Composed by V Harikrishna, film is Directed by Preetham Gubbi and film is released on 2016