Aaseyu Kaigoodithu Lyrics

in Nanobba Kalla

Video:

LYRIC

ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ         
ಇನ್ನೇನು ಕೇಳೆ ನಿನ್ನ
ನನ್ನಾಣೆ ನಂಬು ನನ್ನ
 
|| ಆಸೆಯು ಕೈಗೂಡಿತು
ಆಸರೆ ದೊರೆತಾಯಿತು…||
 
ಕಂದ ನೊಂದು ಅತ್ತಾಗ,
ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿಬರುವ
ತಾಯಂತೆ ನೀನು ಬಂದೆ
ಗಾಳಿ ಬೀಸಿ ಬಂದಾಗ,
ಜ್ಯೋತಿ ಹೆದರಿ ಹೋದಾಗ
ಆ ದೀಪದಲ್ಲಿ ನೀ ಜೀವವಾಗಿ
ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ…
 
|| ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು…||
 
ನೀನೆ ನನ್ನ ಸಂತೋಷ,
ನೀನೆ ನನ್ನ ಸೌಭಾಗ್ಯ
ನಿನ್ನಿಂದ ನಾನು ನಿನಗಾಗ
ನಾನು ನಿನ್ನಲ್ಲೆ ಸೇರಿ ಹೋದೆ
ಬಾಳೋ ಆಸೆ ನೀ ತಂದೆ,
ನನ್ನ ಸೇರಿ ಒಂದಾದೆ
ಸುಳಿಯಲ್ಲಿ ನಾನು ಹೋರಾಡುವಾಗ
ಜೊತೆಯಾಗಿ ನೀನು ಬಂದೆ,
ಇನ್ನೇನು ಕಾಣೆ ಮುಂದೆ
 
|| ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ
ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ
ನನ್ನಾಣೆ ನಂಬು ನನ್ನ
 
ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
ಮನಸು ಹಗುರವಾಯಿತು,
ಮನಸು ಹಗುರವಾಯಿತು….||

Aaseyu Kaigoodithu song lyrics from Kannada Movie Nanobba Kalla starring Dr Rajkumar, Lakshmi, Kanchana, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Dorai-Bhagavan and film is released on 1979