Sanna Sanna Kaaranava Lyrics

ಸಣ್ಣ ಸಣ್ಣ ಕಾರಣವ Lyrics

in Nanjundi Kalyana

in ನಂಜುಂಡಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
ನಿನ್ನ ಕಣ್ಣ ರೆಪ್ಪೆಯಲ್ಲೆ ನಾನು ಇರುವೆ
ಕಣ್ಣ ರೆಪ್ಪೆಯನ್ನೆ ನೀನು ಹೇಗೆ ಮರೆವೆ
 
ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
ನಿನ್ನ ಕಣ್ಣ ರೆಪ್ಪೆಯಲ್ಲೆ ನಾನು ಇರುವೆ
ಕಣ್ಣ ರೆಪ್ಪೆಯನ್ನೆ ನೀನು ಹೇಗೆ ಮರೆವೆ
ಬಿಡುವಾಗ ಏಕೆ ಮನ ನೆನೆವುದಿಲ್ಲ ಕೂಡಿಟ್ಟ ನೂರು ಘಳಿಗೆ
ಒಣಜಂಭ ಮರೆತು ಒಂದಾದರೇನೆ ಬೆಲೆಯುಂಟು ಪ್ರೀತಿ ಸಲಿಗೆ
ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
 
ಅಯ್ಯೊ ಹೃದಯವೆ ಅವಳಿನ್ನು ಬರುವುದಿಲ್ಲ
ಅಯ್ಯೊ ನೆನಪೆ ಮರುಕಳಿಸಿ ಕಾಡಬೇಡ
ಅಯ್ಯೊ ದನಿಗಳೆ ಮಾತಾಗಿ ಕರೆಯಬೇಡಿ
ಅಯ್ಯೊ ಹನಿಗಳೆ ಕಣ್ಣಾಲಿ ತುಂಬಬೇಡಿ
ಅಯ್ಯೊ ಗೆಳತಿಯೆ ತಿರುಗೊಮ್ಮೆ ನೋಡು ನೀನು
ಕ್ಷಮೆಯ ನೀಡು ನೀ ಓಡೋಡಿ ಬರುವೆ ನಾನು
ಮರುಭೂಮಿಯಾಯ್ತು ನನ್ನ ಪುಟ್ಟ ಮನಸ್ಸು ನೀ ಎನ್ನ ಜೀವ ಸೆಲೆಯು
ಪ್ರತಿ ಪುಟವು ಬರೆಯದೆ ಖಾಲಿ ಉಳಿದ ಅತೃಪ್ತ ಆತ್ಮಕಥೆಯು
 
||ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ||
 
ಏನೊ ಮನಸ್ಸಲಿ ಕಸಿವಿಸಿಯ ಮೂಕ ಭಾವ
ಏಕೊ ಬಳಲಿದೆ ನೀ ಕಾಣದಿರಲು ಜೀವ
ಎಂತೊ ಎಲ್ಲವು ಕಹಿಯ ಕನಸ್ಸು ಎಂಬ ಆಸೆ
ಏನೊ ಎಲ್ಲೆಡೆ ಕಾಣುವುದು ಮೌನ ಭಾಷೆ
ಎಲ್ಲೊ ಕಣ್ಣಲಿ ಹನಿಯಾಡುತಿಹುದು ಅಳಲು
ಎಂದೊ ಆಡದೆ ಮರೆತುಳಿದ ಮಾತನೇಳಲು
ಕಣಕಣವು ದಿನವು ಹಾತೊರೆಯುತಿಹುದು ನಿನಗಾಗಿ ಒಲುಮೆಯಿಂದ
ಕ್ಷಣಕ್ಷಣವು ಕಿವಿಯು ಚಡಪಡಿಸುತಿಹುದು ನಿನ್ನ ದನಿಗೆ ಆಸೆಯಿಂದ
 
||ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ||

ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
ನಿನ್ನ ಕಣ್ಣ ರೆಪ್ಪೆಯಲ್ಲೆ ನಾನು ಇರುವೆ
ಕಣ್ಣ ರೆಪ್ಪೆಯನ್ನೆ ನೀನು ಹೇಗೆ ಮರೆವೆ
 
ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
ನಿನ್ನ ಕಣ್ಣ ರೆಪ್ಪೆಯಲ್ಲೆ ನಾನು ಇರುವೆ
ಕಣ್ಣ ರೆಪ್ಪೆಯನ್ನೆ ನೀನು ಹೇಗೆ ಮರೆವೆ
ಬಿಡುವಾಗ ಏಕೆ ಮನ ನೆನೆವುದಿಲ್ಲ ಕೂಡಿಟ್ಟ ನೂರು ಘಳಿಗೆ
ಒಣಜಂಭ ಮರೆತು ಒಂದಾದರೇನೆ ಬೆಲೆಯುಂಟು ಪ್ರೀತಿ ಸಲಿಗೆ
ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ
 
ಅಯ್ಯೊ ಹೃದಯವೆ ಅವಳಿನ್ನು ಬರುವುದಿಲ್ಲ
ಅಯ್ಯೊ ನೆನಪೆ ಮರುಕಳಿಸಿ ಕಾಡಬೇಡ
ಅಯ್ಯೊ ದನಿಗಳೆ ಮಾತಾಗಿ ಕರೆಯಬೇಡಿ
ಅಯ್ಯೊ ಹನಿಗಳೆ ಕಣ್ಣಾಲಿ ತುಂಬಬೇಡಿ
ಅಯ್ಯೊ ಗೆಳತಿಯೆ ತಿರುಗೊಮ್ಮೆ ನೋಡು ನೀನು
ಕ್ಷಮೆಯ ನೀಡು ನೀ ಓಡೋಡಿ ಬರುವೆ ನಾನು
ಮರುಭೂಮಿಯಾಯ್ತು ನನ್ನ ಪುಟ್ಟ ಮನಸ್ಸು ನೀ ಎನ್ನ ಜೀವ ಸೆಲೆಯು
ಪ್ರತಿ ಪುಟವು ಬರೆಯದೆ ಖಾಲಿ ಉಳಿದ ಅತೃಪ್ತ ಆತ್ಮಕಥೆಯು
 
||ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ||
 
ಏನೊ ಮನಸ್ಸಲಿ ಕಸಿವಿಸಿಯ ಮೂಕ ಭಾವ
ಏಕೊ ಬಳಲಿದೆ ನೀ ಕಾಣದಿರಲು ಜೀವ
ಎಂತೊ ಎಲ್ಲವು ಕಹಿಯ ಕನಸ್ಸು ಎಂಬ ಆಸೆ
ಏನೊ ಎಲ್ಲೆಡೆ ಕಾಣುವುದು ಮೌನ ಭಾಷೆ
ಎಲ್ಲೊ ಕಣ್ಣಲಿ ಹನಿಯಾಡುತಿಹುದು ಅಳಲು
ಎಂದೊ ಆಡದೆ ಮರೆತುಳಿದ ಮಾತನೇಳಲು
ಕಣಕಣವು ದಿನವು ಹಾತೊರೆಯುತಿಹುದು ನಿನಗಾಗಿ ಒಲುಮೆಯಿಂದ
ಕ್ಷಣಕ್ಷಣವು ಕಿವಿಯು ಚಡಪಡಿಸುತಿಹುದು ನಿನ್ನ ದನಿಗೆ ಆಸೆಯಿಂದ
 
||ಸಣ್ಣ ಸಣ್ಣ ಕಾರಣವ ಹೇಳಿಹೊರಟೆ
ಸಣ್ಣ ಸಣ್ಣ ಖುಷಿಗಳ ಹೇಗೆ ಮರೆತೆ||

Sanna Sanna Kaaranava song lyrics from Kannada Movie Nanjundi Kalyana starring Thanush Shivanna, Shravya,, Lyrics penned by Rajendra Karanth Sung by Vijay Prakash, Music Composed by J Anoop Seelin, Sathish, film is Directed by Rajendra Karanth and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ