Vandane Nanjunda Lyrics

in Nanjanagoodu Nanjunda

Video:

LYRIC

-
ವಂದನೆ ನಂಜುಂಡ ನೂರು ನೂರು ಕೋಟಿ
ಒಪ್ಪಿಗೆ ನೀಡೋವ್ಳೆ ನಂಗು ಒಬ್ಳು ಬ್ಯೂಟಿ
ವಂದನೆ ನಂಜುಂಡ ನೂರು ನೂರು ಕೋಟಿ
ಒಪ್ಪಿಗೆ ನೀಡೋವ್ಳೆ ನಂಗು ಒಬ್ಳು ಬ್ಯೂಟಿ
ಇವಾಗ ನಾನು ನಿನ್ನ ಕಣ್ಗೆ ಬಿದ್ದೆನು
ದೇವತೆಯಂತ ಹೆಣ್ಣ ಮನ್ಸು ಕದ್ದೆನು
ನಂಜುಂಡ ನೂರೊಂದು ಈಡುಗಾಯಿ ಒಡೆಲೆ
ಗುರುಬಲ ಬಂತು ನಂಗೆ ಸ್ವಾಮಿ ನಂಜುಂಡ
ಇನ್ಮೇಲೆ ಬಾಳು ಸವಿಜೇನು
ಪ್ರೀತಿಸೊ ಜೀವವೊಂದು ತಂದೆಯ ನಂಜುಂಡ
ಅಬ್ಬಬ್ಬ ಚೆಂದ ನಿನ್ನ ಪ್ಲಾನು
ವಂದನೆ ನಂಜುಂಡ ನೂರು ನೂರು ಕೋಟಿ
ಒಪ್ಪಿಗೆ ನೀಡೋವ್ಳೆ ನಂಗು ಒಬ್ಳು ಬ್ಯೂಟಿ
 
ಕೋಗಿಲೆಗೆ ಮಾವು ಆ ದುಂಬಿಗೊಂದು ಹೂವು
ಸೃಷ್ಟಿಸೋನು ನೀನೆ ಒಂದಾಗಿಸೋನು ನೀನೆ
ಏನು ನಿನ್ನ ಮೋಡಿ ಕೊಂಡಾಡಬೇಕು ಹಾಡಿ
ನೀ ನೀಡಿಬಿಟ್ಟೆ ಎಲ್ಲ ನಂಗೂನು ಒಂದು ಜೋಡಿ
ಫೇಲಾದ ಸ್ಟೂಡೆಂಟ್‌ ಈಗ ನೂರಕ್ಕೆ ನೂರು ಬಂದಂಗೆ
ನಂಗವಳು ಸಿಕ್ಕಿದೀಗ ಸ್ವರ್ಗ ಕೈಗೆ ಸಿಕ್ದಂಗೆ
ಭಾಗ್ಯನೆ ಬಾಗಿಲ್ಲಿದೆ ದೆ ದೆ ದೆ ನನ್ನನ್ನೆ ಮೆಚ್ಚಿಕೊಂಡಿದೆ ದೆ ದೆ ದೆ
 
||ವಂದನೆ ನಂಜುಂಡ ನೂರು ನೂರು ಕೋಟಿ
ಒಪ್ಪಿಗೆ ನೀಡೋವ್ಳೆ ನಂಗು ಒಬ್ಳು ಬ್ಯೂಟಿ||
 
ನಾನು ಖಾಲಿ ತೇರು ನನ್ನವ್ಳೆ ನಂಗೆ ದೇವ್ರು
ಊರು ಸುತ್ತುತ್ತೀನಿ ನೆತ್ತಿಲಿ ಹೊತ್ತುಕೊಂಡು
ನಕ್ಕರೆ ಅವ್ಳು ರಂಭೆ ಸುಮ್ನಿದ್ರು ಜೀವದ ಬೊಂಬೆ
ಪ್ರೀತಿ ಮಾಡುತ್ತೀನಿ ಕಣ್ಣಲ್ಲೆ ಇಟ್ಟುಕೊಂಡು
ಕಣ್ಣಲ್ಲಿ ನೀರು ಬಂದ್ರೆ ನಾನೆ ಕರ್ಚೀಫ್ ಆಗುವೆ
ಜಗಳಕ್ಕೆ ಬಂದ್ರೆ ಅವಳು ನಾನೆ ಮೊದಲು ಸೋಲುವೆ
ನನ್ನಂತ ಲಕ್ಕಿ ಫೆಲೊನ ನಾ ನಾ ನಾ ನಾನೆಲ್ಲು ನೋಡೆ ಇಲ್ಲ ನಾ ನಾ ನಾ
 
||ವಂದನೆ ನಂಜುಂಡ ನೂರು ನೂರು ಕೋಟಿ
ಒಪ್ಪಿಗೆ ನೀಡೋವ್ಳೆ ನಂಗು ಒಬ್ಳು ಬ್ಯೂಟಿ
ಇವಾಗ ನಾನು ನಿನ್ನ ಕಣ್ಗೆ ಬಿದ್ದೆನು
ದೇವತೆಯಂತ ಹೆಣ್ಣ ಮನ್ಸು ಕದ್ದೆನು
ನಂಜುಂಡ ನೂರೊಂದು ಈಡುಗಾಯಿ ಒಡೆಲೆ
ಗುರುಬಲ ಬಂತು ನಂಗೆ ಸ್ವಾಮಿ ನಂಜುಂಡ
ಇನ್ಮೇಲೆ ಬಾಳು ಸವಿಜೇನು
ಪ್ರೀತಿಸೊ ಜೀವವೊಂದು ತಂದೆಯ ನಂಜುಂಡ
ಅಬ್ಬಬ್ಬ ಚೆಂದ ನಿನ್ನ ಪ್ಲಾನು||

Vandane Nanjunda song lyrics from Kannada Movie Nanjanagoodu Nanjunda starring Ravishankar, Hamsini, Omprakash Rao, Lyrics penned by V Nagendra Prasad Sung by S P Balasubrahmanyam, Music Composed by K V Ravichandra, film is Directed by Srinivas Prasad and film is released on 2010