Kannada Naadina Veera Ramaniya Lyrics

ಕನ್ನಡ ನಾಡಿನ ವೀರ ರಮಣಿಯ Lyrics

in Nagarahavu

in ನಾಗರಹಾವು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
 
ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
 
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ
ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು
ಸಿದ್ದರು ಹರಸಿದ ಸಿರಿನಾಡು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ವೀರಮದಕರಿ ಆಳುತಲಿರಲು
ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಗೂಡಚಾರರು ಅಲೆದು ಬಂದರು
ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ
ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು
ಲಗ್ಗೆ ಹತ್ತಲು ಹೇಳಿದರು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಓ... ಸರದಾರ....
 
ಕೈಗೆ ಸಿಕ್ಕಿದ ಒನಕೆ ಹಿಡಿದಳು,
ವೀರ  ಕಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ಯಾರವಳು
ವೀರ ವನಿತೆ ಆ ಓಬವ್ವ,
ದುರ್ಗವು ಮರೆಯದ ಓಬವ್ವ
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ತೆವಳುತ ಒಳಗೆ ಬರುತಿರೆ ವೈರಿ,
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯುತ್ತಾ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡಿ ಹಾರಿಸಿದಳು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಸತಿಯ ಹುಡುಕುತ ಕಾವಲಿನವನು
ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೆ ಕಂಡನು
ರಣಚೆಂಡಿ ಅವತಾರವನು
ಕೋಟೆ ಸಲುಹಿದ ತಾಯಿಯನು
 
ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು
ಮುತ್ತಿದೆ ಹೋಗಿ ರಣ ಕಹಳೆಯನು ಊದಿ
 
ರಣ ಕಹಳೆಯನು ಊದುತಲಿರಲು
ಸಾಗರದಂತೆ ಸೈನ್ಯ  ನುಗ್ಗಲು
ವೈರಿ ಪಡೆಯು ನಿಶ್ಶೇಷವಾಗಲು
ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ…
ಚಿತ್ರದುರ್ಗದ ಓಬವ್ವ…
 
|| ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||

ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
 
ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
 
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ
ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು
ಸಿದ್ದರು ಹರಸಿದ ಸಿರಿನಾಡು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ವೀರಮದಕರಿ ಆಳುತಲಿರಲು
ಹೈದಾರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಗಾಣದೆ ಮಂಕಾದ
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಗೂಡಚಾರರು ಅಲೆದು ಬಂದರು
ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ
ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು
ಲಗ್ಗೆ ಹತ್ತಲು ಹೇಳಿದರು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಓ... ಸರದಾರ....
 
ಕೈಗೆ ಸಿಕ್ಕಿದ ಒನಕೆ ಹಿಡಿದಳು,
ವೀರ  ಕಚ್ಚೆಯ ಹಾಕಿ ನಿಂತಳು
ದುರ್ಗಿಯನ್ನು ಮನದಲ್ಲಿ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ಯಾರವಳು
ವೀರ ವನಿತೆ ಆ ಓಬವ್ವ,
ದುರ್ಗವು ಮರೆಯದ ಓಬವ್ವ
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ತೆವಳುತ ಒಳಗೆ ಬರುತಿರೆ ವೈರಿ,
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತ
ಮತ್ತೆ ನಿಂತಳು ಹಲ್ಲು ಮಸೆಯುತ್ತಾ
ವೈರಿ ರುಂಡ ಚೆಂಡಾಡಿದಳು
ರಕುತದ ಕೊಡಿ ಹಾರಿಸಿದಳು
 
|| ಕನ್ನಡ ನಾಡಿನ ವೀರ ರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||
 
ಸತಿಯ ಹುಡುಕುತ ಕಾವಲಿನವನು
ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು
ಹೆಣದ ರಾಶಿಯ ಬಳಿಯೆ ಕಂಡನು
ರಣಚೆಂಡಿ ಅವತಾರವನು
ಕೋಟೆ ಸಲುಹಿದ ತಾಯಿಯನು
 
ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು
ಮುತ್ತಿದೆ ಹೋಗಿ ರಣ ಕಹಳೆಯನು ಊದಿ
 
ರಣ ಕಹಳೆಯನು ಊದುತಲಿರಲು
ಸಾಗರದಂತೆ ಸೈನ್ಯ  ನುಗ್ಗಲು
ವೈರಿ ಪಡೆಯು ನಿಶ್ಶೇಷವಾಗಲು
ಕಾಳಗದಲ್ಲಿ ಜಯವನು ತರಲು
ಅಮರಳಾದಳು ಓಬವ್ವ…
ಚಿತ್ರದುರ್ಗದ ಓಬವ್ವ…
 
|| ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ…||

Kannada Naadina Veera Ramaniya song lyrics from Kannada Movie Nagarahavu starring Vishnuvardhan, Aarathi, Shubha, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by S R Puttanna Kanagal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ