Eke Heegeke Lyrics

in Naga Kanye

LYRIC

ಆಆಆ...ಆಹಾಹಾಹಾ ...
ಏಕೆ ಹೀಗೇಕೆ ಹೇಳುವ
ಆಸೆ ಆಡದು ಮಾತೇಕೆ
ಏಕೆ ಹೀಗೇಕೆ ಹೇಳುವ
ಆಸೆ ಆಡದು ಮಾತೇಕೆ
 
|| ಏಕೆ ಹೀಗೇಕೆ...||
 
ಆಆಆ.... ಆಆ..
ಆಆ ...ಆಆಆ ... 
 
ಹರಿಯುವ ನೀರಿಗೆ ಕಡಲಿನ ಮೋಹ..
ಆಆಆ... ಆಆಆ...
ಹರಿಯುವ ನೀರಿಗೆ ಕಡಲಿನ ಮೋಹ
ನೈದಿಲೆ ಹೂವಿಗೆ ಚಂದ್ರನ ಸ್ನೇಹ
ನೈದಿಲೆ ಹೂವಿಗೆ ಚಂದ್ರನ ಸ್ನೇಹ
ಎನ್ನ ಮನ ತುಂಬಲು
ಜೋಡಿಯ ದಾಹ
 
|| ಏಕೆ ಹೀಗೇಕೆ ಹೇಳುವ
ಆಸೆ ಆಡದು ಮಾತೇಕೆ
ಏಕೆ ಹೀಗೇಕೆ…||
 
ತೇಲುವ ಮೋಡಕೆ ಬೆಳ್ಳಿಯ ಅಂಚು
ಆಆಆ... ಆಆಆ ಆಆಆ
ತೇಲುವ ಮೋಡಕೆ ಬೆಳ್ಳಿಯ ಅಂಚು
ಹೆಣ್ಣಿನ ಕಣ್ಣಲ್ಲಿ ಸುಳಿಯುವ ಮಿಂಚು
ಹೆಣ್ಣಿನ ಕಣ್ಣಲ್ಲಿ ಸುಳಿಯುವ ಮಿಂಚು
ತರುಣಿಯ ಎದೆಯಲಿ ಬಯಕೆಯ ಸಂಚು
 
|| ಏಕೆ ಹೀಗೇಕೆ ಹೇಳುವ
ಆಸೆ ಆಡದು ಮಾತೇಕೆ
ಏಕೆ ಹೀಗೇಕೆ…||
 
ದಿನವೂ ಇರುಳಲಿ ಕನಸಿನ ಕಾಟ
ಆಆಆ... ಆಆಆ ಆಆಆ
ದಿನವೂ ಇರುಳಲಿ ಕನಸಿನ ಕಾಟ
ಹಗಲಲಿ ಸಾವಿರ ಆಸೆಯ ಆಟ
ಹಗಲಲಿ ಸಾವಿರ ಆಸೆಯ ಆಟ
ಮೈ ಜುಮ್ಮೆನ್ನುವ ಹುಡುಗಾಟ
 
|| ಏಕೆ ಹೀಗೇಕೆ ಹೇಳುವ
ಆಸೆ ಆಡದು ಮಾತೇಕೆ
ಏಕೆ ಹೀಗೇಕೆ…||
 

Eke Heegeke song lyrics from Kannada Movie Naga Kanye starring Vishnuvardhan, Bhavani, Rajashree, Lyrics penned by Chi Udayashankar Sung by S Janaki, Music Composed by Sathyam, film is Directed by S V Rajendra Singh Babu and film is released on 1975