Kanda Nee Banda Dina-male Lyrics

in Mukunda Chandra

LYRIC

ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ
ಕಣ್ಣ ತುಂಬ ಮೆರೆವ ದಿನ
ನಿನ್ನ ಕುದುರೆ ಆಡಿ ಓಡಿ
ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ
ಕಾಡೇ ಗೂಡಾಗಲಿ
 
ಹೆತ್ತ ಕುಲ ಹೊತ್ತ
ನೆಲ ಭಲೇ ಭಲೇ ಎನ್ನಲಿ 
ಚಿನ್ನ ನಿನ್ನ ಹೆಸರ ಹಣತೆ
ಗುಡಿ ಗುಡಿಸಲ ಬೆಳಗಲಿ
 
|| ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ
ಕಣ್ಣ ತುಂಬ ಮೆರೆವ ದಿನ
ನಿನ್ನ ಕುದುರೆ ಆಡಿ ಓಡಿ
ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ
ಕಾಡೇ ಗೂಡಾಗಲಿ…||

Kanda Nee Banda Dina-male song lyrics from Kannada Movie Mukunda Chandra starring Kalyan Kumar, Udayakumar, Balakrishna, Lyrics penned by Kuvempu, Kanagal Prabhakar Shastry Sung by P B Srinivas, Music Composed by G K Venkatesh, film is Directed by S K A Chari and film is released on 1969