(ಆಆಆ... ಆಆಆ...
ಆಆಆ ಆಆಆ...
ಆಆಆ ಆಆಆ... ಆಆಆ )
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ.... ಕೊನೆಯಿಲ್ಲ…||
ಕೂಡಿ ಹಾಡಿದ ಒಂದು ಹಕ್ಕಿಯು
ಸೇರಿತು ಪಂಜರವಾ
ಕೂಡಿ ಹಾಡಿದ ಒಂದು ಹಕ್ಕಿಯು
ಸೇರಿತು ಪಂಜರವಾ
ನೋವು ಸಹಿಸದೆ ನೊಂದ ಹಕ್ಕಿಯು
ಸುರಿಸಿತು ಕಂಬನಿಯ
ನೆನೆಯುತ ಒಲವಿನ ನಂದನವಾ
ಪ್ರೇಮ ಜೋಡಿಯ ಒಂದು ಜೀವವು
ಮಸಣದ ಹೂವಾಯ್ತು
ವಿರಹ ಬೆಂಕಿಗೆ ಬೆಂದ ಒಡಲಿಗೆ
ಜೀವನ ಹೊರೆಯಾಯ್ತು
ಪ್ರೇಮವು ನೋವಿನ ಕಥೆಯಾಯಿತು
(ಆ... ಆ... ಆ.. ಆ.. )
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ.... ಕೊನೆಯಿಲ್ಲ…||
ಹೆತ್ತ ತಾಯಿಯ ಸುತ್ತ ಮುತ್ತಲು
ಮುಸುಕಿದೆ ಮೋಡಗಳು
ಹೆತ್ತ ತಾಯಿಯ ಸುತ್ತ ಮುತ್ತಲು
ಮುಸುಕಿದೆ ಮೋಡಗಳು
ಮಗಳ ಬಾಳಿಗೆ ಬಡಿದ ಸಿಡಿಲಿಗೆ
ಮಿಡುಕಿದೆ ಹೆಂಗರಳು
ಬಾಡಿದೆ ಮಮತೆಯ ಜೀವಗಳು
ಸ್ನೇಹ ಜೀವವು ಮೋಹ ತುಂಬಿದ
ಕಣ್ಣಿಗೆ ಸೆರೆಯಾಯ್ತು
ಚಿತ್ರಹಿಂಸೆಗೆ ಸಿಕ್ಕ ಹೆಣ್ಣಿಗೆ
ಮೌನವೇ ಗತಿಯಾಯ್ತು
ಪ್ರೇಮವು ನೋವಿನ ಕಥೆಯಾಯಿತು
(ಆ... ಆ... ಆ.. ಆ..ಆ )
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ....
ಅನ್ಯಾಯಕ್ಕೆ.... ಕೊನೆಯಿಲ್ಲ…||
(ಆಆಆ... ಆಆಆ...
ಆಆಆ ಆಆಆ...
ಆಆಆ ಆಆಆ... ಆಆಆ )
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ.... ಕೊನೆಯಿಲ್ಲ…||
ಕೂಡಿ ಹಾಡಿದ ಒಂದು ಹಕ್ಕಿಯು
ಸೇರಿತು ಪಂಜರವಾ
ಕೂಡಿ ಹಾಡಿದ ಒಂದು ಹಕ್ಕಿಯು
ಸೇರಿತು ಪಂಜರವಾ
ನೋವು ಸಹಿಸದೆ ನೊಂದ ಹಕ್ಕಿಯು
ಸುರಿಸಿತು ಕಂಬನಿಯ
ನೆನೆಯುತ ಒಲವಿನ ನಂದನವಾ
ಪ್ರೇಮ ಜೋಡಿಯ ಒಂದು ಜೀವವು
ಮಸಣದ ಹೂವಾಯ್ತು
ವಿರಹ ಬೆಂಕಿಗೆ ಬೆಂದ ಒಡಲಿಗೆ
ಜೀವನ ಹೊರೆಯಾಯ್ತು
ಪ್ರೇಮವು ನೋವಿನ ಕಥೆಯಾಯಿತು
(ಆ... ಆ... ಆ.. ಆ.. )
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ.... ಕೊನೆಯಿಲ್ಲ…||
ಹೆತ್ತ ತಾಯಿಯ ಸುತ್ತ ಮುತ್ತಲು
ಮುಸುಕಿದೆ ಮೋಡಗಳು
ಹೆತ್ತ ತಾಯಿಯ ಸುತ್ತ ಮುತ್ತಲು
ಮುಸುಕಿದೆ ಮೋಡಗಳು
ಮಗಳ ಬಾಳಿಗೆ ಬಡಿದ ಸಿಡಿಲಿಗೆ
ಮಿಡುಕಿದೆ ಹೆಂಗರಳು
ಬಾಡಿದೆ ಮಮತೆಯ ಜೀವಗಳು
ಸ್ನೇಹ ಜೀವವು ಮೋಹ ತುಂಬಿದ
ಕಣ್ಣಿಗೆ ಸೆರೆಯಾಯ್ತು
ಚಿತ್ರಹಿಂಸೆಗೆ ಸಿಕ್ಕ ಹೆಣ್ಣಿಗೆ
ಮೌನವೇ ಗತಿಯಾಯ್ತು
ಪ್ರೇಮವು ನೋವಿನ ಕಥೆಯಾಯಿತು
(ಆ... ಆ... ಆ.. ಆ..ಆ )
|| ನ್ಯಾಯಕ್ಕೆ ನೆಲೆಯಿಲ್ಲ
ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ....
ಅನ್ಯಾಯಕ್ಕೆ.... ಕೊನೆಯಿಲ್ಲ…||
Nyayakke Neleyilla song lyrics from Kannada Movie Mooru Janma starring Ambarish, Ambika, Anuradha, Lyrics penned by Shyamasundar Kulkarni Sung by S P Balasubrahmanyam, Music Composed by Rajan-Nagendra, film is Directed by Bhargava and film is released on 1984