-
ಒಂದು ಕನಸು ಖಾಲಿ ಪೀಲಿ
ಕಣ್ಣಮುಂದೆ ಹೀಗೆ ಓಡುತ್ತಿರಬೇಕು
ಬಾಕಿ ಮಾತು ಮಾರೋ ಗೋಲಿ
ಏನೋ ಗುಂಗು ನನ್ನ ಕಾಡುತ್ತಿರಬೇಕು
ಗೊಂಬೆ ನಾನೇನಲ್ಲ
ಬೇಕಿಲ್ಲ ಯಾರ ಸೂತ್ರ
ಈ ನನ್ನ ನಾಟಕದಲ್ಲಿ
ನಾ ವಹಿಸುವೆ ನನ್ನದೆ ಪಾತ್ರ
ಚಿಟಕಿ ಬಾರಿಸಿ
ನಾನು ಬದಲಾಯಿಸಬಲ್ಲೆ ಸೀನು
ಈ ಗಾಜಿನ ಹೂಜಿಯಲ್ಲಿ
ನಾನಲ್ಲ ಬಣ್ಣದ ಮೀನು
ಒಂದು ಕನಸು ಖಾಲಿ ಪೀಲಿ
ಕಣ್ಣಮುಂದೆ ಹೀಗೆ ಓಡುತ್ತಿರಬೇಕು
ಒಂದರಕ್ಕಿಂತ ಒಂದು
ಏನೇನೊ ಸೆಳೆತದ ಕಾಟ
ಈ ಮನದ ಪರದೆಯ ಮೇಲೆ
ನೆರಳು ಬೆಳಕಿನ ಆಟ
ದೈನಿಕ ಧಾರಾವಾಹಿ
ಈ ಬಾಳು ಖಂಡಿತ ಅಲ್ಲ
ಈ ನಲಿವು ನೋವುಗಿಲ್ಲಿ
ಪ್ರಾಯೋಜಕರಂತು ಇಲ್ಲ
ಮೋರೆಯಲ್ಲಿ ಖಾಲಿ ಪೀಲಿ
ಮಂದಹಾಸ ಮೂಡುತಿರಬೇಕು
ನನ್ನ ನಿಲುವನ್ನು ಕಂಡು
ಖಳನಾಯಕರೆಲ್ಲ ಮೂಕ
ಕರೆ ನಾನೆ ಮಾತಾಡಿರಲು
ಬರಿ ಹಲೋ ಎಂದರೆ ಸಾಕ
ಕಾರಣವಿಲ್ಲದ ಪ್ರೀತಿ
ಅದು ನನ್ನ ಗುರುತಿನ ಚೀಟಿ
ಈ ನನ್ನ ನೆಮ್ಮದಿ ಕಂಡು
ಆ ಚಂದಿರ ಹೊಡಿಯಲಿ ಸೀಟಿ
ಊರಿನಲ್ಲಿ ಖಾಲಿ ಪೀಲಿ
ಎಲ್ಲ ನನ್ನ ಕಡೆ ನೋಡುತಿರಬೇಕು
-
ಒಂದು ಕನಸು ಖಾಲಿ ಪೀಲಿ
ಕಣ್ಣಮುಂದೆ ಹೀಗೆ ಓಡುತ್ತಿರಬೇಕು
ಬಾಕಿ ಮಾತು ಮಾರೋ ಗೋಲಿ
ಏನೋ ಗುಂಗು ನನ್ನ ಕಾಡುತ್ತಿರಬೇಕು
ಗೊಂಬೆ ನಾನೇನಲ್ಲ
ಬೇಕಿಲ್ಲ ಯಾರ ಸೂತ್ರ
ಈ ನನ್ನ ನಾಟಕದಲ್ಲಿ
ನಾ ವಹಿಸುವೆ ನನ್ನದೆ ಪಾತ್ರ
ಚಿಟಕಿ ಬಾರಿಸಿ
ನಾನು ಬದಲಾಯಿಸಬಲ್ಲೆ ಸೀನು
ಈ ಗಾಜಿನ ಹೂಜಿಯಲ್ಲಿ
ನಾನಲ್ಲ ಬಣ್ಣದ ಮೀನು
ಒಂದು ಕನಸು ಖಾಲಿ ಪೀಲಿ
ಕಣ್ಣಮುಂದೆ ಹೀಗೆ ಓಡುತ್ತಿರಬೇಕು
ಒಂದರಕ್ಕಿಂತ ಒಂದು
ಏನೇನೊ ಸೆಳೆತದ ಕಾಟ
ಈ ಮನದ ಪರದೆಯ ಮೇಲೆ
ನೆರಳು ಬೆಳಕಿನ ಆಟ
ದೈನಿಕ ಧಾರಾವಾಹಿ
ಈ ಬಾಳು ಖಂಡಿತ ಅಲ್ಲ
ಈ ನಲಿವು ನೋವುಗಿಲ್ಲಿ
ಪ್ರಾಯೋಜಕರಂತು ಇಲ್ಲ
ಮೋರೆಯಲ್ಲಿ ಖಾಲಿ ಪೀಲಿ
ಮಂದಹಾಸ ಮೂಡುತಿರಬೇಕು
ನನ್ನ ನಿಲುವನ್ನು ಕಂಡು
ಖಳನಾಯಕರೆಲ್ಲ ಮೂಕ
ಕರೆ ನಾನೆ ಮಾತಾಡಿರಲು
ಬರಿ ಹಲೋ ಎಂದರೆ ಸಾಕ
ಕಾರಣವಿಲ್ಲದ ಪ್ರೀತಿ
ಅದು ನನ್ನ ಗುರುತಿನ ಚೀಟಿ
ಈ ನನ್ನ ನೆಮ್ಮದಿ ಕಂಡು
ಆ ಚಂದಿರ ಹೊಡಿಯಲಿ ಸೀಟಿ
ಊರಿನಲ್ಲಿ ಖಾಲಿ ಪೀಲಿ
ಎಲ್ಲ ನನ್ನ ಕಡೆ ನೋಡುತಿರಬೇಕು