-
ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ
ಎಂದು ಬಾಳಲ್ಲಿ ಆಸೆ ಇಟ್ಟಾಗಲೆ
ಯಾವ ಸೋಲಿಲ್ಲದಂತೆ ನೀ ಗೆಲ್ಲುವೆ
ನಾನೀದಿನ ನಿನ್ನ ಜೊತೆಗೂಡುವೆ ನಿನ್ನಾಸೆಯ ಹಾಡು ನಾನಾಗುವೆ
ಎಂದೆಂದು ನಾ ನಿನ್ನ ಕಣ್ಣ ದೀಪ ಆಗುವೆ
ಪ್ರೇಮ ಇನ್ನೆಲ್ಲಿ ಉಂಟು ಈ ಬಾಳಲ್ಲಿ
ನುಚ್ಚು ನೂರಾಯ್ತು ಬಾಳು ಈ ಗೋಳಲಿ
ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ
ಸಂತೋಷದಿ ಕಂಡ ಕನಸ್ಸೆಲ್ಲವು ಸುಡುಗಾಡಲ್ಲಿ ಇಟ್ಟ ಶವವಾಗಿದೆ
ನೀ ಹೇಗೆ ಮತ್ತೆ ಅದರಲ್ಲಿ ಜೀವವನ್ನು ತುಂಬುವೆ
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ||
ಈ ಜಗದಲಿ ಕಹಿಯನು ಉಂಡು ನೊಂದಿಹೆ ನೀನು
ಆ ಕಹಿಯಲಿ ಇರುವೆನು ನಾನು ಜೇನಾಗಿ
ಈ ಧರೆಯಲಿ ಉರುಳಿದ ತಾರೆಯಂತಿಹೆ ನಾನು
ನೀ ಅರಿತರು ಬಯಸುವೆ ಏಕೆ ನನ್ನನು
ಆ ತಾರೆಯ ನನ್ನ ಮುಡಿಗೇರಿಸಿ ನಿನ್ನ ಬಾಳನು ಎಂದು ಇಂಪಾಗಿಸಿ
ಎಂದೆಂದು ನಾ ನಿನ್ನ ಶೃತಿಯಲ್ಲಿ ಹಾಡುತಿರುವೆ
||ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ||
ನಾ ಗಿಡವನು ತೊರೆದಿಹ ಬಾಡಿದಂತ ಸುಮವು
ಆ ಸುಮವನು ಅರಳಿಸಿ ಪಡೆವೆ ಆನಂದ
ಕಾರಿರುಳಲಿ ಬೆಳಕನು ಎಂತು ಕಾಣುವೆ ಮರುಳೆ
ಆ ಇರುಳಲಿ ಹಣತೆಯು ಆಗುವೆ ನಾನೆ
ಬದಲಾಗದು ನನ್ನ ನಿರ್ಧಾರವು
ಬದಲಾಗು ನೀ ನಿಂತು ಹೋರಾಡಲು
ಈ ಆಸೆ ನೀನಿಂದು ನನಗೇಕೆ ತೋರುತ್ತಿರುವೆ
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ
ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ
ನಾನೀದಿನ ನಿನ್ನ ಜೊತೆಗೂಡುವೆ ನಿನ್ನಾಸೆಯ ಹಾಡು ನಾನಾಗುವೆ
ಎಂದೆಂದು ನಾ ನಿನ್ನ ಕಣ್ಣ ದೀಪ ಆಗುವೆ||
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ||
-
ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ
ಎಂದು ಬಾಳಲ್ಲಿ ಆಸೆ ಇಟ್ಟಾಗಲೆ
ಯಾವ ಸೋಲಿಲ್ಲದಂತೆ ನೀ ಗೆಲ್ಲುವೆ
ನಾನೀದಿನ ನಿನ್ನ ಜೊತೆಗೂಡುವೆ ನಿನ್ನಾಸೆಯ ಹಾಡು ನಾನಾಗುವೆ
ಎಂದೆಂದು ನಾ ನಿನ್ನ ಕಣ್ಣ ದೀಪ ಆಗುವೆ
ಪ್ರೇಮ ಇನ್ನೆಲ್ಲಿ ಉಂಟು ಈ ಬಾಳಲ್ಲಿ
ನುಚ್ಚು ನೂರಾಯ್ತು ಬಾಳು ಈ ಗೋಳಲಿ
ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ
ಸಂತೋಷದಿ ಕಂಡ ಕನಸ್ಸೆಲ್ಲವು ಸುಡುಗಾಡಲ್ಲಿ ಇಟ್ಟ ಶವವಾಗಿದೆ
ನೀ ಹೇಗೆ ಮತ್ತೆ ಅದರಲ್ಲಿ ಜೀವವನ್ನು ತುಂಬುವೆ
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ||
ಈ ಜಗದಲಿ ಕಹಿಯನು ಉಂಡು ನೊಂದಿಹೆ ನೀನು
ಆ ಕಹಿಯಲಿ ಇರುವೆನು ನಾನು ಜೇನಾಗಿ
ಈ ಧರೆಯಲಿ ಉರುಳಿದ ತಾರೆಯಂತಿಹೆ ನಾನು
ನೀ ಅರಿತರು ಬಯಸುವೆ ಏಕೆ ನನ್ನನು
ಆ ತಾರೆಯ ನನ್ನ ಮುಡಿಗೇರಿಸಿ ನಿನ್ನ ಬಾಳನು ಎಂದು ಇಂಪಾಗಿಸಿ
ಎಂದೆಂದು ನಾ ನಿನ್ನ ಶೃತಿಯಲ್ಲಿ ಹಾಡುತಿರುವೆ
||ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ||
ನಾ ಗಿಡವನು ತೊರೆದಿಹ ಬಾಡಿದಂತ ಸುಮವು
ಆ ಸುಮವನು ಅರಳಿಸಿ ಪಡೆವೆ ಆನಂದ
ಕಾರಿರುಳಲಿ ಬೆಳಕನು ಎಂತು ಕಾಣುವೆ ಮರುಳೆ
ಆ ಇರುಳಲಿ ಹಣತೆಯು ಆಗುವೆ ನಾನೆ
ಬದಲಾಗದು ನನ್ನ ನಿರ್ಧಾರವು
ಬದಲಾಗು ನೀ ನಿಂತು ಹೋರಾಡಲು
ಈ ಆಸೆ ನೀನಿಂದು ನನಗೇಕೆ ತೋರುತ್ತಿರುವೆ
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ
ಏಕೆ ನನ್ನಲ್ಲಿ ಆಸೆ ನೀ ತುಂಬುವೆ
ನೋವ ನನ್ನಿಂದ ಏಕೆ ನೀ ಹೊಂದುವೆ
ನಾನೀದಿನ ನಿನ್ನ ಜೊತೆಗೂಡುವೆ ನಿನ್ನಾಸೆಯ ಹಾಡು ನಾನಾಗುವೆ
ಎಂದೆಂದು ನಾ ನಿನ್ನ ಕಣ್ಣ ದೀಪ ಆಗುವೆ||
||ರಾತ್ರಿ ಸರಿದಾಗ ಮತ್ತೆ ಸೂರ್ಯೋದಯ
ಕಾಣು ನನ್ನಲ್ಲಿ ನೀನು ಪ್ರೇಮಾಲಯ||