ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು
ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ
ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
ಖಾಕಿ ಕಾವಿಗೂ ಖಾದಿ ಟೋಪಿಗೂ ಮಾನಭಂಗ ಮಾಡಿ
ಹಣದಾ ಗಂಟಿಗೆ ದಾಸರಾಗುವಾ ಸ್ವಾರ್ಥಿ ಗುಂಪು ನೋಡಿ
ಹತ್ತು ತಿಂಗಳು ಹೊತ್ತು ಹೆತ್ತವಳ ಮಾರ ಬಲ್ಲರಿವರು
ಬಿದ್ದ ಕಾಸನು ನಾಲಿಗೆ ಚಾಚಿ ತೆಗೆಯ ಬಲ್ಲರಿವರು
ಮನಃಸಾಕ್ಷಿಯೂ ಇಲ್ಲ.... ದೈವದಂಜಿಕೆ ಇಲ್ಲ....
ಹ್ಯಾ....ಮನಃಸಾಕ್ಷಿಯೂ ಇಲ್ಲ.... ದೈವದಂಜಿಕೆ ಇಲ್ಲ....
ಪ್ಲೇಗು ಕಾಲರಾ ಬೇರೆ ಇಲ್ಲವೋ ಇವರೇ ಎಲ್ಲ ನೋಡಿ
|| ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು
ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ
ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ.....||
ರಾಜಕೀಯದ ಚಕ್ರತೀರ್ಥದೆ ಈಜಬಲ್ಲ ಜಾಣ
ಕುರ್ಚಿ ಆಸೆಗೆ ನಂಬಿದವರಿಗೆ ಚೂರಿ ಹಾಕೋ ಜಾಣ
ಓಟು ಬೇಡುತ ತಿರುಕನ ಕಾಲಿಗೆ ಬೀಳಬಲ್ಲ ಇವನು
ಗೇಟು ತೋರುವನು ಗೆದ್ದ ನಂತರ ಬಳಿಗೆ ಹೋದರೇ ಅವನು
ಬಡವ ಇವನಿಗೆ ಏಣಿ.... ಧನಿಕನಾಗಲು ದೋಣಿ...
ಅಹ್ಹಹ್ಹಾ.... ಬಡವ ಇವನಿಗೆ ಏಣಿ.... ಧನಿಕನಾಗಲು ದೋಣಿ...
ಮೇಲೆ ನೋಡಲು ಹೂವು ಒಳಗೆ ವಿಷದ ಹಾವು
|| ಹ್ಯಾ....ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ....||
ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು
ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ
ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
ಖಾಕಿ ಕಾವಿಗೂ ಖಾದಿ ಟೋಪಿಗೂ ಮಾನಭಂಗ ಮಾಡಿ
ಹಣದಾ ಗಂಟಿಗೆ ದಾಸರಾಗುವಾ ಸ್ವಾರ್ಥಿ ಗುಂಪು ನೋಡಿ
ಹತ್ತು ತಿಂಗಳು ಹೊತ್ತು ಹೆತ್ತವಳ ಮಾರ ಬಲ್ಲರಿವರು
ಬಿದ್ದ ಕಾಸನು ನಾಲಿಗೆ ಚಾಚಿ ತೆಗೆಯ ಬಲ್ಲರಿವರು
ಮನಃಸಾಕ್ಷಿಯೂ ಇಲ್ಲ.... ದೈವದಂಜಿಕೆ ಇಲ್ಲ....
ಹ್ಯಾ....ಮನಃಸಾಕ್ಷಿಯೂ ಇಲ್ಲ.... ದೈವದಂಜಿಕೆ ಇಲ್ಲ....
ಪ್ಲೇಗು ಕಾಲರಾ ಬೇರೆ ಇಲ್ಲವೋ ಇವರೇ ಎಲ್ಲ ನೋಡಿ
|| ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು
ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ
ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ.....||
ರಾಜಕೀಯದ ಚಕ್ರತೀರ್ಥದೆ ಈಜಬಲ್ಲ ಜಾಣ
ಕುರ್ಚಿ ಆಸೆಗೆ ನಂಬಿದವರಿಗೆ ಚೂರಿ ಹಾಕೋ ಜಾಣ
ಓಟು ಬೇಡುತ ತಿರುಕನ ಕಾಲಿಗೆ ಬೀಳಬಲ್ಲ ಇವನು
ಗೇಟು ತೋರುವನು ಗೆದ್ದ ನಂತರ ಬಳಿಗೆ ಹೋದರೇ ಅವನು
ಬಡವ ಇವನಿಗೆ ಏಣಿ.... ಧನಿಕನಾಗಲು ದೋಣಿ...
ಅಹ್ಹಹ್ಹಾ.... ಬಡವ ಇವನಿಗೆ ಏಣಿ.... ಧನಿಕನಾಗಲು ದೋಣಿ...
ಮೇಲೆ ನೋಡಲು ಹೂವು ಒಳಗೆ ವಿಷದ ಹಾವು
|| ಹ್ಯಾ....ಕುಡಿದಾಗ ಸತ್ಯವನ್ನೇ ನಾ ಹೇಳುವೇ
ಗುಂಡ್ ಹಾಕಿ ಗುಂಗಲ್ಲಿ ನಾ ಹಾಡುವೇ
ಕಹಿಯಾದ ಸತ್ಯವು ಎಂದು ಸಿಹಿಯಾದ ಸುಳ್ಳಿಗೂ ಮೇಲು
ಗೋಮುಖ ವ್ಯಾಘ್ರಕ್ಕಿಂತ ನಿಯತ್ತಿನ ನಾಯೇ ಮೇಲು
ಹೌದೋ ಅಲ್ವೋ ಹೇಳಿ ಈಗ ನೀವೇಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ
ನಾ ಹಾಡಿದಾಗ ಹಾಡಬೇಕು ನೀವೆಲ್ಲರೂ....||
Kudidaga Sathyavanne Naa Heluve song lyrics from Kannada Movie Kurukshethra starring Ananthnag, Saritha, Charanraj, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Bhargava and film is released on 1987