ಹನಿಯೊಂದು ಜಾರಿ
ನದಿಯಾಗಿ ಬಂತು
ಮಲೆನಾಡ ಮಗಳಾಗಲು
ವರವೊಂದು ತಾನೆ
ಕರೆ ಮಾಡಿ ಬಂತು
ಕಳೆದೋದ ನಗು ಹಂಚಲು
ಹಸಿಮಡಿಕೆ ಅಡಿಯ
ಹೊಂಬಾಳೆಯೊಳಗೆ
ಬದುಕನು ಹೆಣೆಯುವವ
ಉದರಡಿಕೆಯ ಸುರಿದು
ಕೊನೆಯೆಲ್ಲ ಬಡಿದು
ಮಣಿಗಳ ಸುಲಿಯುವವ
ನಗುವೇ ನಗುವೇ
ನನ್ನೂರ ಜೀವಂತಿಕೆ
ಹಸಿರಾ ಹೊದಿಕೆ
ನಮ್ಮೂರ ಶ್ರೀಮಂತಿಕೆ
ಬಾನು ಇರುಳಾಗಲು
ಒಲೆಯಲ್ಲಿ ಬೆಳಗಾಯಿತು
ನೀನು ಎದುರಾಗಲು
ಎದೆಯೆಲ್ಲ ಪದ ಹಾಡಿತು
ಕೊಳೆಯೆಲ್ಲಾ ತೊಳೆದು
ಕಡುಗೆಂಪು ಬಳಿದು
ಮಣಿ ಈಗ ಮನೆ ಏರಿದೆ
ಮಡಿಯೆಲ್ಲ ಕರಗಿ
ಕುಡಿಮೀಸೆಯೊಳಗೆ
ಕಿರಿದಾದ ಕಿಡಿಮೂಡಿದೆ
ಒಲವೇ ಒಲವೇ
ಕವಿಯಾಗಿದೆ ಲೇಖನಿ…
ಚೆಲುವೇ ಚೆಲುವೇ
ನೀನೊಂದು ಸಮ್ಮೋಹಿನಿ…
ನನ್ನ ಲಹರಿ ತುಂಬ
ನಿನ್ನ ಮುನ್ನೂರು ಬಿಂಬ
ಕೆನ್ನೆ ಸವರಿ ಚಂದ್ರ
ಬಂದು ಬೆನ್ನೇರು ಅಂದ
ಮುಗಿಲೇ ಮುಗಿಲೇ
ಬೆಳದಿಂಗಳ ಲೇಪಿಸು
ಅವಳ ಕಡೆಗೆ
ಕನಸೊಂದನು ಸಾಗಿಸು
ಹನಿಯೊಂದು ಜಾರಿ
ನದಿಯಾಗಿ ಬಂತು
ಮಲೆನಾಡ ಮಗಳಾಗಲು
ವರವೊಂದು ತಾನೆ
ಕರೆ ಮಾಡಿ ಬಂತು
ಕಳೆದೋದ ನಗು ಹಂಚಲು
ಹಸಿಮಡಿಕೆ ಅಡಿಯ
ಹೊಂಬಾಳೆಯೊಳಗೆ
ಬದುಕನು ಹೆಣೆಯುವವ
ಉದರಡಿಕೆಯ ಸುರಿದು
ಕೊನೆಯೆಲ್ಲ ಬಡಿದು
ಮಣಿಗಳ ಸುಲಿಯುವವ
ನಗುವೇ ನಗುವೇ
ನನ್ನೂರ ಜೀವಂತಿಕೆ
ಹಸಿರಾ ಹೊದಿಕೆ
ನಮ್ಮೂರ ಶ್ರೀಮಂತಿಕೆ
ಬಾನು ಇರುಳಾಗಲು
ಒಲೆಯಲ್ಲಿ ಬೆಳಗಾಯಿತು
ನೀನು ಎದುರಾಗಲು
ಎದೆಯೆಲ್ಲ ಪದ ಹಾಡಿತು
ಕೊಳೆಯೆಲ್ಲಾ ತೊಳೆದು
ಕಡುಗೆಂಪು ಬಳಿದು
ಮಣಿ ಈಗ ಮನೆ ಏರಿದೆ
ಮಡಿಯೆಲ್ಲ ಕರಗಿ
ಕುಡಿಮೀಸೆಯೊಳಗೆ
ಕಿರಿದಾದ ಕಿಡಿಮೂಡಿದೆ
ಒಲವೇ ಒಲವೇ
ಕವಿಯಾಗಿದೆ ಲೇಖನಿ…
ಚೆಲುವೇ ಚೆಲುವೇ
ನೀನೊಂದು ಸಮ್ಮೋಹಿನಿ…
ನನ್ನ ಲಹರಿ ತುಂಬ
ನಿನ್ನ ಮುನ್ನೂರು ಬಿಂಬ
ಕೆನ್ನೆ ಸವರಿ ಚಂದ್ರ
ಬಂದು ಬೆನ್ನೇರು ಅಂದ
ಮುಗಿಲೇ ಮುಗಿಲೇ
ಬೆಳದಿಂಗಳ ಲೇಪಿಸು
ಅವಳ ಕಡೆಗೆ
ಕನಸೊಂದನು ಸಾಗಿಸು