ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ
ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ
ಕನ್ನಡದಲಿ ಉಸಿರಾಡುವುದೆನ್ನೆದೆ…
ಕನ್ನಡ ಉಳಿದು ಬೇರೆ ಏನಿದೆ
ತಿರುಗೊ ಭೂಮಿಗೆ ಗೊತ್ತು ಕನ್ನಡಕಿರುವ ಗತ್ತು
ಕ್ರಾಂತಿಗೆ ತಿಲಕವನಿಟ್ಟ ನಾಡು ನನ್ನದು
ತಾಯಿಯ ಕೂಗಿಗೆ ಬಂದೆನು ಇಲ್ಲಿಗೆ
||ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ||
||ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ||
ಗಗನದೊಳು ಪಡಪಡಿಸೊ
ಭಾಷೆಯ ಬಾವುಟ ನಮ್ದೇನೆ
ಧರೆಯೊಳಗೆ ಘಮಘಮಿಸೊ
ಗಂಧದ ಗುಡಿಯು ನಮ್ದೇನೆ
ಕಪ್ಪುಮಣ್ಣ ಭೂಮಿ
ನಿಂದೆ ಕನ್ನಡಿಗ
ಸ್ವಾಮಿಆಂಜನೇಯ
ನಮ್ಮ ಕನ್ನಡಿಗ
ಯವನರ ತಡೆದು ನೆತ್ತರ ಬಸಿದ
ಒನಕೆಯ ಹಿಡಿದು ತಲೆಗಳ ಕಡಿದ
ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೆ ಚಿರಋಣಿ..
||ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ||
||ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ||
ನೀಲಿ ಸಿದ್ದಪ್ಪಾಜಿ ಸ್ವಾಮಿ ಬನ್ಯೋ ಬನ್ಯೋ
ಮಂಟೇದ ಲಿಂಗಯ್ಯ ಬನ್ಯೋ..
ಸಿದ್ದಾರೂಢ ಸ್ವಾಮಿಸ್ವಾಮಿ ಮಹಂತಜ್ಜ
ಎಲ್ಲವ್ವ ನಿಂಗ್ ನಾಲ್ಕು ಧೋ..
ಕಾವೇರಿ ಸ್ವಾಭಿಮಾನ ಮಹಾದಾಯಿ ಜೀವಗಾನ
ಗಡಿ ನಾಡು ನಮ್ಮ ಪ್ರಾಣ.. ಕೇಳು
ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲ್ಲಿ
ಪ್ರಾಚೀನ ನಾವೆ ಇಲ್ಲಿ..
ಧೈರ್ಯದ ಬಟ್ಟಲು ಧರ್ಮದ ತೊಟ್ಟಿಲು..
ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ
ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ
ಕನ್ನಡದಲಿ ಉಸಿರಾಡುವುದೆನ್ನೆದೆ…
ಕನ್ನಡ ಉಳಿದು ಬೇರೆ ಏನಿದೆ
ತಿರುಗೊ ಭೂಮಿಗೆ ಗೊತ್ತು ಕನ್ನಡಕಿರುವ ಗತ್ತು
ಕ್ರಾಂತಿಗೆ ತಿಲಕವನಿಟ್ಟ ನಾಡು ನನ್ನದು
ತಾಯಿಯ ಕೂಗಿಗೆ ಬಂದೆನು ಇಲ್ಲಿಗೆ
||ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ||
||ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ||
ಗಗನದೊಳು ಪಡಪಡಿಸೊ
ಭಾಷೆಯ ಬಾವುಟ ನಮ್ದೇನೆ
ಧರೆಯೊಳಗೆ ಘಮಘಮಿಸೊ
ಗಂಧದ ಗುಡಿಯು ನಮ್ದೇನೆ
ಕಪ್ಪುಮಣ್ಣ ಭೂಮಿ
ನಿಂದೆ ಕನ್ನಡಿಗ
ಸ್ವಾಮಿಆಂಜನೇಯ
ನಮ್ಮ ಕನ್ನಡಿಗ
ಯವನರ ತಡೆದು ನೆತ್ತರ ಬಸಿದ
ಒನಕೆಯ ಹಿಡಿದು ತಲೆಗಳ ಕಡಿದ
ವಿಶ್ವದ ಲಿಪಿಗಳ ರಾಣಿ
ಅಮೃತ ಉಣಿಸುವ ಮಾಣಿ
ಮಂತ್ತ್ರಾಕ್ಷತೆಯ ಭರಣಿ ನನ್ನ ಕನ್ನಡ
ಕನ್ನಡ ತಾಯಿಗೆ ಜನ್ಮವೆ ಚಿರಋಣಿ..
||ಧರಣಿ ಮಂಡಲ ಮಧ್ಯದಲಿ
ಮೆರೆವ ಕನ್ನಡ ದೇಶದಲಿ
ಮೊಳಗೋ ಕಹಳೆ
ದನಿ ಕೇಳಿ ಬೆಚ್ಚೊ ಗಗನ||
||ಕಪಟ ಇಲ್ಲದ ಊರಿನಲಿ
ಕರುಣೆ ತುಂಬಿದ ನಾಡಿನಲಿ
ದಿನವು ಕ್ಷಣವೂ
ರಣ ಕಲಿಗಳಿಲ್ಲಿ ಜನನ||
ನೀಲಿ ಸಿದ್ದಪ್ಪಾಜಿ ಸ್ವಾಮಿ ಬನ್ಯೋ ಬನ್ಯೋ
ಮಂಟೇದ ಲಿಂಗಯ್ಯ ಬನ್ಯೋ..
ಸಿದ್ದಾರೂಢ ಸ್ವಾಮಿಸ್ವಾಮಿ ಮಹಂತಜ್ಜ
ಎಲ್ಲವ್ವ ನಿಂಗ್ ನಾಲ್ಕು ಧೋ..
ಕಾವೇರಿ ಸ್ವಾಭಿಮಾನ ಮಹಾದಾಯಿ ಜೀವಗಾನ
ಗಡಿ ನಾಡು ನಮ್ಮ ಪ್ರಾಣ.. ಕೇಳು
ವೀರತ್ವ ಬಾಳಿನಲ್ಲಿ ಸಾಮರ್ಥ್ಯ ತೋಳಿನಲ್ಲಿ
ಪ್ರಾಚೀನ ನಾವೆ ಇಲ್ಲಿ..
ಧೈರ್ಯದ ಬಟ್ಟಲು ಧರ್ಮದ ತೊಟ್ಟಿಲು..