Rekkeya Solo Lyrics

ರೆಕ್ಕೆಯ ಸೋಲೊ Lyrics

in Kavacha

in ಕವಚ

LYRIC

Song Details Page after Lyrice

-
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ 
ಅವನ ಪ್ರೀತಿ ಬೇಕೆನಗೆ 
ಮಿನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ
ಅವನ ಸನಿಹ ಬೇಕೆನಗೆ

ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ
ಹಗಲಿನಲ್ಲಿ ತಾರೆಗಳು ಹೇಳದೆ ಮಾಯಾ
ಅಂತ ಕುದುರೆ ತಾರೆ ಇಲ್ಲ ನಂಗೆ ಯಾಕಪ್ಪ
ಎಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪ

||ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಅವನ ಸನಿಹ ಬೇಕೆನಗೆ||

ಸಾಲಕ್ಕೆ ಸಿಗುವಂತ ಇಂದ್ರನ
ಆನೆಯು ನನಗೆ ಬೇಕಿಲ್ಲ
ನನ್ನೊಡನೆ ನಗುತ ಮುದ್ದಿಸಿ
ಆಡುವ ಅಪ್ಪ ಬೇಕಪ್ಪ

ಹಗಲು ಬಂದರೆ ಮಾಸುವ
ಹುಣ್ಣಿಮೆ ನನಗೆ ಬೇಕಿಲ್ಲ
ಅದಕ್ಕಿಂತ ಹೆಚ್ಚಿನ ತಂಪನ್ನು
ನೀಡುವ ಅಪ್ಪ ಬೇಕಪ್ಪ

ಬೇಡವೆ ಬೇಡ ಕಾಮನಬಿಲ್ಲು
ಮಳೆಯೂ ಸುರಿದರೆ
ಅದರೆ ಬಣ್ಣವು ಕರಗದೆ
ಎಂದೆಂದೂ ಕರಗದ
ನಿನ್ನ ಒಲುಮೆ ಬೇಕಿದೆ

||ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ||

ಕಣ್ಣಿಗೆ ಕಾಣದ ಗಂಧರ್ವಲೋಕದ
ಅಪ್ಪನು ಬಲು ದೂರ
ಇಂದಲ್ಲ ನಾಳೆ ಬರುತ್ತಾನೆ
ಎನ್ನುವ ಆಸೆ ಬಲು ಭಾರ

ನನ್ನ ಆಸೆಗಳ ಪೂರೈಸೋ ಅಪ್ಪನು
ಇದ್ದರೆ ಸಾಕಿನ್ನು
ಮುದ್ದು ಮಾಡಿ ನನ್ನ ಪ್ರೀತಿ ಮಾಡೋ ಅಪ್ಪ
ಬೇಕು ನನಗಿನ್ನೂ

ನೆರಳಿನ ಹಾಗೆ ಜೊತೆ ಇರಬೇಕು
ಲಾಲನೆ ಪಾಲನೆಗೆ ಬೇರೆ ಜೀವವು ಇನ್ನೇತಕೆ
ಸುಂದರ ಸುಳ್ಳುಗಳು ಸಾಕು
ಎಲ್ಲಿದೆ ಜೀವಂತಿಕೆ

-
ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ 
ಅವನ ಪ್ರೀತಿ ಬೇಕೆನಗೆ 
ಮಿನುಗೋ ಚುಕ್ಕಿಗಳನ್ನು ತರುವ ಅಪ್ಪನು ಬೇಡ
ಅವನ ಸನಿಹ ಬೇಕೆನಗೆ

ಕಲ್ಪನೆಯ ಕುದುರೆಗಳು ಕ್ಷಣದಲಿ ಮಾಯಾ
ಹಗಲಿನಲ್ಲಿ ತಾರೆಗಳು ಹೇಳದೆ ಮಾಯಾ
ಅಂತ ಕುದುರೆ ತಾರೆ ಇಲ್ಲ ನಂಗೆ ಯಾಕಪ್ಪ
ಎಂದು ನನ್ನ ಜೊತೆ ಇರೋ ಅಪ್ಪ ಬೇಕಪ್ಪ

||ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ
ಅವನ ಸನಿಹ ಬೇಕೆನಗೆ||

ಸಾಲಕ್ಕೆ ಸಿಗುವಂತ ಇಂದ್ರನ
ಆನೆಯು ನನಗೆ ಬೇಕಿಲ್ಲ
ನನ್ನೊಡನೆ ನಗುತ ಮುದ್ದಿಸಿ
ಆಡುವ ಅಪ್ಪ ಬೇಕಪ್ಪ

ಹಗಲು ಬಂದರೆ ಮಾಸುವ
ಹುಣ್ಣಿಮೆ ನನಗೆ ಬೇಕಿಲ್ಲ
ಅದಕ್ಕಿಂತ ಹೆಚ್ಚಿನ ತಂಪನ್ನು
ನೀಡುವ ಅಪ್ಪ ಬೇಕಪ್ಪ

ಬೇಡವೆ ಬೇಡ ಕಾಮನಬಿಲ್ಲು
ಮಳೆಯೂ ಸುರಿದರೆ
ಅದರೆ ಬಣ್ಣವು ಕರಗದೆ
ಎಂದೆಂದೂ ಕರಗದ
ನಿನ್ನ ಒಲುಮೆ ಬೇಕಿದೆ

||ರೆಕ್ಕೆಯ ಕುದುರೆ ಏರಿ ಬರುವ ಅಪ್ಪನು ಬೇಡ
ಅವನ ಪ್ರೀತಿ ಬೇಕೆನಗೆ||

ಕಣ್ಣಿಗೆ ಕಾಣದ ಗಂಧರ್ವಲೋಕದ
ಅಪ್ಪನು ಬಲು ದೂರ
ಇಂದಲ್ಲ ನಾಳೆ ಬರುತ್ತಾನೆ
ಎನ್ನುವ ಆಸೆ ಬಲು ಭಾರ

ನನ್ನ ಆಸೆಗಳ ಪೂರೈಸೋ ಅಪ್ಪನು
ಇದ್ದರೆ ಸಾಕಿನ್ನು
ಮುದ್ದು ಮಾಡಿ ನನ್ನ ಪ್ರೀತಿ ಮಾಡೋ ಅಪ್ಪ
ಬೇಕು ನನಗಿನ್ನೂ

ನೆರಳಿನ ಹಾಗೆ ಜೊತೆ ಇರಬೇಕು
ಲಾಲನೆ ಪಾಲನೆಗೆ ಬೇರೆ ಜೀವವು ಇನ್ನೇತಕೆ
ಸುಂದರ ಸುಳ್ಳುಗಳು ಸಾಕು
ಎಲ್ಲಿದೆ ಜೀವಂತಿಕೆ

Rekkeya Solo song lyrics from Kannada Movie Kavacha starring Shivarajkumar, Isha Koppikar, Kruthika Jayakumar, Lyrics penned by V Nagendra Prasad Sung by Sreya Jayadeep, Music Composed by Arjun Janya, film is Directed by GVR Vasu and film is released on 2019

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ