Enenagali Lyrics

in Kaldogbitte

LYRIC

ಏನೇನಾಗಲಿ ಗುರಿ ಒಂದಿರಲಿ
ಏನೇನಾಗಲಿ ಗುರಿ ಒಂದಿರಲಿ
ಯಾರೇನೆ ಹೇಳಲಿ ಹಿಂದೆ ಸರಿಯದಿರಿ
ಯಾರೇನೆ ಅನ್ನಲಿ ಕಿವಿಗೊಡದಿರಿ
ನೀವು ಏನಾಗಬೇಕು ಆಗುವ ತನಕ ನಿಲ್ಲದಿರಿ
ಆಗುವುದೆಲ್ಲ ಒಳ್ಳೆಯದಕ್ಕೆ ನನ್ನ ಮಾತು ನಂಬಿರಿ
ಏನೇನಾಗಲಿ ಗುರಿ ಒಂದಿರಲಿ
ಏನೇನಾಗಲಿ ಗುರಿ ಒಂದಿರಲಿ
 
ಕಷ್ಟದ ಮೇಲೆ ಕಷ್ಟ ಎದುರಾಗಲಿ
ಮನಸ್ಸಲಿ ಕನಸ್ಸುಗಳು ಇರಲಿ
ಪ್ರಯತ್ನದ ಮೇಲೆ ಪ್ರಯತ್ನವ ಮಾಡಿರಿ
ಒಂದಿನ ನೀವು ಗುರಿ ಮುಟ್ಟುತ್ತೀರಿ
ಆಗ ನೀವು ಯಾರೆಂದು ಗುರುತಿಸಿ ಹೇಳುವುದು ಜಗವು
ನಿಮ್ಮನ್ನು ತೋರಿಸಿ
ಇಲ್ಲದ ಬದುಕಿನ ಆಸೆ ಬಿಟ್ಟುಬಿಡಿ
ಇರುವ ಬದುಕಲ್ಲೆ ಸಾಧನೆ ಮಾಡಿ
ಪ್ರೀತಿಸಿದರೆ ತಪ್ಪೇನಿಲ್ಲ ಅದು ನಿಮ್ಮ ಸಾಧನೆಗೆ ಸ್ಪೂರ್ತಿಯಾಗಲಿ
ಮೊದಲು ವಿದ್ಯೆಯನು ಪ್ರೀತಿಸಿ ನಿಮ್ಮ ಗುರಿಯನು ಸಾಧಿಸಿ
 
||ಏನೇನಾಗಲಿ ಗುರಿ ಒಂದಿರಲಿ||
||ಏನೇನಾಗಲಿ ಗುರಿ ಒಂದಿರಲಿ||
 
ಬಾಣವನು ಗುರಿಯತ್ತ ಬಿಡಬೇಕು ಅಂದರೆ
ಮೊದಲದನ ಹಿಂದಕ್ಕೆ ಎಳೆಯಲೆಬೇಕು
ಸಾಧನೆ ಮಾಡಬೇಕು ಅಂದರೆ ಮೊದಲು ಅದರಲಿ ಸೋಲಲೆಬೇಕು
ಸೋತರ ಮಾತ್ರ ಗೆಲ್ಲಲು ಸಾಧ್ಯ
ಸೋತರೆ ಧೈರ್ಯಗೆಡಬೇಡಿ ಗೆದ್ದರೆ ಮೆರೆಯಬೇಡಿ
ಸೋತರೆ ಧೈರ್ಯಗೆಡಬೇಡಿ ಗೆದ್ದರೆ ಮೆರೆಯಬೇಡಿ
 
ನಿಮಗಿಷ್ಟವಾಗದ ವಿಷಯದಲ್ಲಿ ಕಷ್ಟ ಪಡೋದು ನಿಲ್ಲಿಸಿ
ನಿಮಗೆ ಇಷ್ಟಪಡುವ ವಿಷಯದಲ್ಲಿ ಅಭ್ಯಾಸ ಸಾಧಿಸಿ
ತಾಳ್ಮೆಯಿಂದ ಕಲಿಯುತ್ತ ಆತ್ಮವಿಶ್ವಾಸದಿ ಶ್ರಮಿಸಿ
ಒಳ್ಳೆ ಕಾಲ ಬಂದೆ ಬರುತ್ತದೆ ನಿಮ್ಮನ್ನು ಹರಸಿ
ಒಳ್ಳೆ ಕಾಲ ಬಂದೆ ಬರುತ್ತದೆ ನಿಮ್ಮನ್ನು ಹರಸಿ
 
||ಏನೇನಾಗಲಿ ಗುರಿ ಒಂದಿರಲಿ||
||ಏನೇನಾಗಲಿ ಗುರಿ ಒಂದಿರಲಿ||

Enenagali song lyrics from Kannada Movie Kaldogbitte starring Ashu Ashok, Poojitha, Balaram, Lyrics penned by Uday Prem Sung by Archana Ravi, Music Composed by Sri Harsha, film is Directed by Uday Prem and film is released on 2015