ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ
ಕುರುಡನಿಗೆ ಕಣ್ಣನು ವರವಾಗಿ
ಕರುಣಿಸಿ ಇರುಳಲೇ ನಡೆಸುವೆಯ
ನಿಜವಾದ ಜೀವನ ಅರಿತಿಹನು ಈ ದಿನ
ಹೊಸದಾದ ಚೇತನ ನಗುವೆಲ್ಲ
ಮರೆಮಾಚಿ ಬರಿಮೌನ ತಾಳಿದೆ
ಎಳೆ ವಯಸ್ಸನೇಕೆ ಚಿಗುರಿಸುವೆ
ಎಳೆ ಮನಸ್ಸನೇಕೆ ನೋಯುಸಿವೆ
ಇದು ಶೋಭೆಯೇನು ನಿನಗೆ ಭಗವಂತನೆ
||ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ||
ಅಂದು ರಾಜರಾಣಿ ಹಾಗೆ ಕಂಡ ತಾಯಿ ತಂದೆ
ಇಂದು ಕಾಣುತ್ತಾರೆ ಜೀತದಾಳು ಕಂಡಹಾಗೆ
ಇವರ ಶ್ರಮವು ಬೇಕು ಸ್ನೇಃಮಾತ್ರ ಬೇಕೆಯಿಲ್ಲ
ಉಳ್ಳವರ ವರ್ತನೆಯು ಇವನಿಗೆ ಅರ್ಥವಾಗುತಿಲ್ಲ
ಬಡತನದ ಬೇಗೆಯಲ್ಲಿ ಬೇಯುವುದೆ ಜೀವನವ
ನಂಬಿಕೆಯು ಕಾಲ್ಮುರಿದುಕೊಂಡು ಮೂಲೆಯಲಿ ಕೂತಿದೆ
ಈ ಬದುಕನೆ ಏಕೆ ಸೃಷ್ಟಿಸುವೆ
ಬಡಜನರನ್ನೇಕೆ ನೋಯಿಸುವೆ
ಕೀಳರಿಮೆ ಏಕೆ ಮೂಡಿಸುವೆ
ಇದು ಶೋಭೆಯೇನು ನಿನಗೆ ಭಗವಂತನೆ
ಸುಡುವ ಬಿಸಿಲಿನಲ್ಲಿ ಹೊರಗೆ ಒಬ್ಬ ನರಳುತ್ತಾನೆ
ತಂಪು ಗಾಳಿಯಲ್ಲಿ ಒಳಗೆ ಒಬ್ಬ ನಲಿಯುತ್ತಾನೆ
ಹೊಟ್ಟೆಪಾಡಿಗಾಗಿ ದಿನವೂ ದುಡಿಯೋ ಜೀವವಿಲ್ಲಿ
ಮೂಟೆಮೂಟೆಯಾಗಿ ಕೂಡಿ ಇಡುವ ಕೂಟವಲ್ಲಿ
ಧನಿಕನಿಗೆ ನಗು ಸರಳ ಬಡವನಿಗೆ ಅದೆ ವಿರಳ
ಜೋಪಡಿಯು ಈ ಜನರ ಗೂಡು ಮಾಳಿಗೆಯು ಅವರದು
ಸಿರಿವಂತನು ನಿನ್ನ ಮಗನೆ ಬಡಪಾಯಿಯು ನಿನ್ನ ಮಗನೆ
ಈ ಭೇದಭಾವವು ಏಕೆ
ಇದು ಶೋಭೆಯೇನು ನಿನಗೆ ಭಗವಂತನೆ
||ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ||
ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ
ಕುರುಡನಿಗೆ ಕಣ್ಣನು ವರವಾಗಿ
ಕರುಣಿಸಿ ಇರುಳಲೇ ನಡೆಸುವೆಯ
ನಿಜವಾದ ಜೀವನ ಅರಿತಿಹನು ಈ ದಿನ
ಹೊಸದಾದ ಚೇತನ ನಗುವೆಲ್ಲ
ಮರೆಮಾಚಿ ಬರಿಮೌನ ತಾಳಿದೆ
ಎಳೆ ವಯಸ್ಸನೇಕೆ ಚಿಗುರಿಸುವೆ
ಎಳೆ ಮನಸ್ಸನೇಕೆ ನೋಯುಸಿವೆ
ಇದು ಶೋಭೆಯೇನು ನಿನಗೆ ಭಗವಂತನೆ
||ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ||
ಅಂದು ರಾಜರಾಣಿ ಹಾಗೆ ಕಂಡ ತಾಯಿ ತಂದೆ
ಇಂದು ಕಾಣುತ್ತಾರೆ ಜೀತದಾಳು ಕಂಡಹಾಗೆ
ಇವರ ಶ್ರಮವು ಬೇಕು ಸ್ನೇಃಮಾತ್ರ ಬೇಕೆಯಿಲ್ಲ
ಉಳ್ಳವರ ವರ್ತನೆಯು ಇವನಿಗೆ ಅರ್ಥವಾಗುತಿಲ್ಲ
ಬಡತನದ ಬೇಗೆಯಲ್ಲಿ ಬೇಯುವುದೆ ಜೀವನವ
ನಂಬಿಕೆಯು ಕಾಲ್ಮುರಿದುಕೊಂಡು ಮೂಲೆಯಲಿ ಕೂತಿದೆ
ಈ ಬದುಕನೆ ಏಕೆ ಸೃಷ್ಟಿಸುವೆ
ಬಡಜನರನ್ನೇಕೆ ನೋಯಿಸುವೆ
ಕೀಳರಿಮೆ ಏಕೆ ಮೂಡಿಸುವೆ
ಇದು ಶೋಭೆಯೇನು ನಿನಗೆ ಭಗವಂತನೆ
ಸುಡುವ ಬಿಸಿಲಿನಲ್ಲಿ ಹೊರಗೆ ಒಬ್ಬ ನರಳುತ್ತಾನೆ
ತಂಪು ಗಾಳಿಯಲ್ಲಿ ಒಳಗೆ ಒಬ್ಬ ನಲಿಯುತ್ತಾನೆ
ಹೊಟ್ಟೆಪಾಡಿಗಾಗಿ ದಿನವೂ ದುಡಿಯೋ ಜೀವವಿಲ್ಲಿ
ಮೂಟೆಮೂಟೆಯಾಗಿ ಕೂಡಿ ಇಡುವ ಕೂಟವಲ್ಲಿ
ಧನಿಕನಿಗೆ ನಗು ಸರಳ ಬಡವನಿಗೆ ಅದೆ ವಿರಳ
ಜೋಪಡಿಯು ಈ ಜನರ ಗೂಡು ಮಾಳಿಗೆಯು ಅವರದು
ಸಿರಿವಂತನು ನಿನ್ನ ಮಗನೆ ಬಡಪಾಯಿಯು ನಿನ್ನ ಮಗನೆ
ಈ ಭೇದಭಾವವು ಏಕೆ
ಇದು ಶೋಭೆಯೇನು ನಿನಗೆ ಭಗವಂತನೆ
||ಪ್ರತಿಯೊಂದು ಪಾತ್ರಕೆ ತಿರುವುಗಳ ನೀಡುತ
ಆಟವ ನೋಡುವೆಯಾ||