Kurudu Baavali Lyrics

ಕುರುಡು ಬಾವಲಿ Lyrics

in Jatta

in ಜಟ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕುರುಡು ಬಾವಲಿ ರಾತರಿ ಹೊತ್ತಲಿ ಶರಣು ಎಂತಿತ್ತು
ಪಾಳು ಗುಡಿಯ ಹಾಳು ದೇವರ ಕತ್ತಿಗೆ ಜೋತಾಡಿತ್ತು
ಒಣಗಿದ ಎದೆಗೆ ಕಚಗುಳಿ ಇಟ್ಟು ದಿನವೆಲ್ಲ ಕಳೆದುಹೋಗೋ
ರಾತರಿ ಬೀಳೊ ಹಸಿಗನಸ್ಸ ಕಂಡ ಮನಸ್ಸಿಗೆ ಏನನ್ನುದೋ
ಅಂತಹ ಕನಸ್ಸ ಬಾವಲಿ ಕಂಡು ಕರಗಣ್ಣ ಕಳ್ಕೊಂಡಿತ್ತು
ಕುರುಡು ಬಾವಲಿ ರಾತರಿ ಹೊತ್ತಲಿ ಶರಣು ಎಂತಿತ್ತು
 
ಕಲ್ಲಿನ ಒಳಗಿರೊ ಶಿಲೆಯು ಯಾವುದೊ
ಇದ್ದಿಲ ಒಳಗಿರೊ ಉರಿಯು ಯಾವುದೊ
ಇವನ ಸಂಚಲಿ ಕುರಿಯು ಯಾವುದೊ
ಮನುಜನ ಮುಖದ ನರಿಯು ಯಾವುದೊ
ಶಿಲೆ ಕಲ್ಲ ಇದ್ದಿಲುರಿದು ಭಸ್ಮಗೈವ ಸಂಚು
ಸೇಡೊಂದೆ ಪರಮಸುಖ ಮಾತು ಸುಪ್ತ ಹಂಚು
ಕಡೆಗಣಿಸಿದ ಗಣಿತಕ್ಕೆಲ್ಲ ರಕುತದಲ್ಲೆ ಲೆಕ್ಕ
ಎದೆ ಸೊಂಟ ಹಿಂಡದವನು ಯಾವನಿಲ್ಲಿ ಢಕ್ಕ
ಕುರುಡಾಗಿದೆ ಬಾವಲಿ
 
||ಕುರುಡು ಬಾವಲಿ ರಾತರಿ ಹೊತ್ತಲಿ ಶರಣು ಎಂತಿತ್ತು
ಪಾಳು ಗುಡಿಯ ಹಾಳು ದೇವರ ಕತ್ತಿಗೆ ಜೋತಾಡಿತ್ತು||
 
ರಾಮನ ರಾತ್ರಿಯ ನಿದ್ದೆ ಹೋದವು
ಸೀತೆಯ ಒಳಗಿರೊ ಬಳೆಗಳ್ಯಾರವು
ಅನುಮಾನದ ಸನ್ನಿ ನೆತ್ತಿಗೇರಿತು
ಮರ್ಯಾದೆ ಭೂತ ಹೆಗಲು ಏರಿತು
ಸೈತಾನನ ದಿಲ್ಲಗಿ ಕಂಡ ಅಡ್ಡವಾಣಿಯ ಮಾತು ಕೇಳಿ
ಕಣ್‌ ಕುರುಡಾಗಿ ಕಿವಿ ಬರಡಾಗಿ ಬಾವಲಿ ಕಥೆಯ ಹೇಳದೆ ಕೊರಗಿ
ಸೈತಾನನ ದಿಲ್ಲಗಿ ಕಂಡ ಅಡ್ಡವಾಣಿಯ ಮಾತು ಕೇಳಿ
ಕಣ್‌ ಕುರುಡಾಗಿ ಕಿವಿ ಬರಡಾಗಿ ಬಾವಲಿ ಕಥೆಯ ಹೇಳದೆ ಕೊರಗಿ
ಹರಕು ಮುರುಕು ಧರ್ಮಗಳ ಕಾಡ್ಗಿಚ್ಚಿಗೆ ಬಾವಲಿ ಬಲಿ
ಮರುಕ ಪಡದ ತಿರುಕರೆದೆಯ ನೋಟ ಕಂಡು ಹೇಸಿತು ಹುಲಿ
ಶರಣು ನಿಮ್ಮ ಧರ್ಮವೆ ತೀರಿತಿಂದು ಕತೆಯ ಋಣ
ಅಳುವೊ ನಗುವೊ ಸಮವೊ ಬೆಸವೊ ಉರಿಯುತಿರಲಿ ಎದೆಯಲಿ ಕರುಣ

Kurudu Baavali song lyrics from Kannada Movie Jatta starring Kishore Kumar, Sukrutha Wagle, Pavana, Lyrics penned by B M Giriraj Sung by Sujay Harthi, Music Composed by Ashley-Abhilash, film is Directed by B M Giriraj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ