Valase Bandavare Lyrics

in Huliraya

LYRIC

ವಲಸೆ ಬಂದವರೆ ನಾವು ವಲಸೆ ಬಂದವರೆ
ವಲಸೆ ಬಂದವರೆ ನಾವೆಲ್ಲರು ವಲಸೆ ಬಂದವರೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ವಲಸೆ ಬಂದವರೆ ನಾವು ವಲಸೆ ಬಂದವರೆ
ಕಾಡು ಎಂಬ ಕರುಳಬಳ್ಳಿಯು ಕರಗಿಹೋದ ಕೊರಗಿನಲ್ಲಿ
ಕಾಡು ಎಂಬ ಕರುಳಬಳ್ಳಿಯು ಕರಗಿಹೋದ ಕೊರಗಿನಲ್ಲಿ
ಮುಗ್ಧನಾದ ಮಗುವಿನಂತ ಮಾತುಬಾರದ ಮೂಕಪ್ರಾಣಿಯು
ವಲಸೆ ಬಂದಿದೆ ಹುಲಿಯು ವಲಸೆ ಬಂದಿದೆ
 
ತನ್ನೂರಿನ ಚಂದ್ರನ ಈ ಸಂತೆಯ ರಾತ್ರಿಯಲ್ಲೂ
ಕಂಡು ಹುಲಿಯು ಹಿಗ್ಗಿದೆ ಸಂತೆ ತನ್ನದೆನಿಸಿದೆ
ಆದರವನೀ ಸಂತೆಯಲ್ಲಿ ಅವನದಲ್ಲದ ಊರಲ್ಲಿ
ಆದರವನೀ ಸಂತೆಯಲ್ಲಿ ಅವನದಲ್ಲದ ಊರಲ್ಲಿ
ಕೊಳ್ಳಲಾಗದೆ ಮಾರಲಾಗದೆ ಕನಸ್ಸು ಕಾಣುತ ನಿಂತ      
ರೆಕ್ಕೆ ಇದ್ದರು ಹಾರದ ಹಾಗೆ ಮಾಡಿಬಿಟ್ಟ ಭಗವಂತ                        
ಕೊಳ್ಳಲಾಗದೆ ಮಾರಲಾಗದೆ ಕನಸ್ಸು ಕಾಣುತ ನಿಂತ      
ರೆಕ್ಕೆ ಇದ್ದರು ಹಾರದ ಹಾಗೆ ಮಾಡಿಬಿಟ್ಟ ಭಗವಂತ
 
||ವಲಸೆ ಬಂದವರೆ ನಾವೆಲ್ಲರು ವಲಸೆ ಬಂದವರೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ವಲಸೆ ಬಂದವರೆ ನಾವು ವಲಸೆ ಬಂದವರೆ||
 
ಎಲ್ಲೆಲ್ಲಿಂದಲೊ ಬಂದವರೆಲ್ಲರು ಇಲ್ಲಿಯ ನೆಲದವರಾಗಿ ಹೋದರು
ಇವನು ಮಾತ್ರ ಹೊರಗೆ ನಿಂತಿಹನು
ಇವನು ಮಾತ್ರ ಹೊರಗೆ ನಿಂತಿಹನು
ಬೂದಿಯಾಗಿರೊ ಕಾಡಿಗೆ ಹೋಗಿಬಿಡುವ ಹಂಬಲ
ಉಸಿರಾಡೋಕು ಬಾಡಿಗೆ ಕಟ್ಟಲಾಗದೆ ಏನೊ ಕಳವಳ
ಭಾಷೆ ಬಾರದೆ ಅರ್ಥವಾಗದೆ ಕೂಗಲಾರದೆ ಕೋಪ ಏರಿದೆ
ಕೆಣಕಬೇಡಿ ಇವನ ಇಂತ ಹುಲಿಯನ್ನ
ವಲಸೆ ಬಂದ ಹುಲಿಯನ್ನ
 
||ವಲಸೆ ಬಂದವರೆ ನಾವೆಲ್ಲರು ವಲಸೆ ಬಂದವರೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ನಿನ್ನೆ ಎಂಬ ಗಡಿಯ ದಾಟಿ ಇಂದು ಎಂಬಿ ಕೇರಿಗೆ
ವಲಸೆ ಬಂದವರೆ ನಾವು ವಲಸೆ ಬಂದವರೆ||

Valase Bandavare Naavu Valase Bandavare.. song lyrics from Kannada Movie Huliraya starring Balu Nagendra, Divya Uruduga,, Lyrics penned by Aravind Kaushik Sung by Tejaswi Haridas, Music Composed by Arjun Ramu, film is Directed by Aravind Kaushik and film is released on 2017