Iduve Ninna Prapancha Lyrics

ಇದುವೇ ನಿನ್ನ ಪ್ರಪಂಚ Lyrics

in Hoovu Mullu

in ಹೂವು ಮುಳ್ಳು

LYRIC

Song Details Page after Lyrice

ದೇವಾ...ಆ ಆ ಆ ಆ….
ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ
ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ
ಹೂವಿನ ಜೊತೆಗೆ ಮುಳ್ಳಿರುವ
ಹಸುವಿನ ರೂಪದಿ ಹುಲಿಯಿರುವ
ಎತ್ತಲ್ಲೂ ಸ್ವಾರ್ಥವೇ ತುಂಬಿರುವಾ ....
 
|| ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ…||

ಎಲ್ಲರು ನೆಂಟರೆ ಎಲ್ಲರು ಮಿತ್ರರೇ
ಸಂತಸದಿಂದ ನಗುವಾಗ
ಹತ್ತಿರ ಯಾರು ಕರೆಯುವರಿಲ್ಲ
ತಳಮಳಿಸುತಲಿ ಅಳುವಾಗ
ಎದ್ದವರನ್ನು ಬೀಳಿಸುತಾ
ಬಿದ್ದವರನ್ನು ತುಳಿಯುವರು
ನೆಂಟರು ಮಿತ್ರರು ಶತ್ರುಗಳಾಗಿ
ಮುಳ್ಳಿನ ಮಾರ್ಗಕೆ ತಳ್ಳುವುರು
 
|| ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ…||

ಒಬ್ಬನು ಬೆಳೆಸಲು ತನ್ನಯ ಆಸ್ತಿ
ಕಸಿಯುವನು ಹಲವರ ರೊಟ್ಟಿ
ಒಬ್ಬನು ತಾನೇ ದೊಡ್ಡವನಾಗಲು 
ನಿಲ್ಲುವನು ಹಲವರ ಮೆಟ್ಟಿ
ಇಂತಹ ಮನುಜರ ಗುಣದಿಂದ 
ಅಮೃತವು ವಿಷವಾಗುತಿದೆ
ಧರ್ಮವು ದೂರಕೆ ಓಡುತಿದೆ
ಹೂವು ಮುಳ್ಳಾಗುತಿದೇ….

ದೇವಾ...ಆ ಆ ಆ ಆ….
ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ
ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ
ಹೂವಿನ ಜೊತೆಗೆ ಮುಳ್ಳಿರುವ
ಹಸುವಿನ ರೂಪದಿ ಹುಲಿಯಿರುವ
ಎತ್ತಲ್ಲೂ ಸ್ವಾರ್ಥವೇ ತುಂಬಿರುವಾ ....
 
|| ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ…||

ಎಲ್ಲರು ನೆಂಟರೆ ಎಲ್ಲರು ಮಿತ್ರರೇ
ಸಂತಸದಿಂದ ನಗುವಾಗ
ಹತ್ತಿರ ಯಾರು ಕರೆಯುವರಿಲ್ಲ
ತಳಮಳಿಸುತಲಿ ಅಳುವಾಗ
ಎದ್ದವರನ್ನು ಬೀಳಿಸುತಾ
ಬಿದ್ದವರನ್ನು ತುಳಿಯುವರು
ನೆಂಟರು ಮಿತ್ರರು ಶತ್ರುಗಳಾಗಿ
ಮುಳ್ಳಿನ ಮಾರ್ಗಕೆ ತಳ್ಳುವುರು
 
|| ಇದುವೇ ನಿನ್ನ ಪ್ರಪಂಚ
ದೇವಾ.. ಇದುವೇ ನಿನ್ನ ಪ್ರಪಂಚ…||

ಒಬ್ಬನು ಬೆಳೆಸಲು ತನ್ನಯ ಆಸ್ತಿ
ಕಸಿಯುವನು ಹಲವರ ರೊಟ್ಟಿ
ಒಬ್ಬನು ತಾನೇ ದೊಡ್ಡವನಾಗಲು 
ನಿಲ್ಲುವನು ಹಲವರ ಮೆಟ್ಟಿ
ಇಂತಹ ಮನುಜರ ಗುಣದಿಂದ 
ಅಮೃತವು ವಿಷವಾಗುತಿದೆ
ಧರ್ಮವು ದೂರಕೆ ಓಡುತಿದೆ
ಹೂವು ಮುಳ್ಳಾಗುತಿದೇ….

Iduve Ninna Prapancha song lyrics from Kannada Movie Hoovu Mullu starring Udayakumar, Kalpana, Balakrishna, Lyrics penned by Geethapriya Sung by S P Balasubrahmanyam, Music Composed by Sathyam, film is Directed by A V Sheshagiri Rao and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ