Huvinda Huvige Haaruva Dhumbi Lyrics

in Hombisilu

Video:

LYRIC

ಹೂವಿಂದ ಹೂವಿಗೆ
ಹಾರುವ ದುಂಬಿ
ಏನನು ಹಾಡುತಿಹೆ…..
ನೀ ಏನನು ಹಾಡುತಿಹೆ
 
ಹೂವಿಂದ ಹೂವಿಗೆ
ಹಾರುವ ದುಂಬಿ
ಏನನು ಹಾಡುತಿಹೆ…..
ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ
ಕೆಣಕಿ ಏತಕೆ ಕಾಡುತಿಹೇ ನೀ …
 
|| ಹೂವಿಂದ ಹೂವಿಗೆ
ಹಾರುವ ದುಂಬಿ
ಏನನು ಹಾಡುತಿಹೆ
ನೀ ಏನನು ಹಾಡುತಿಹೆ..||
 
ಆ…ಆ……ಆ……ಆ…..ಆ….
 
ಆಸೆಯ ತುಂಬಿ ಹೂವರಳಿರಲು
ಹೂವನು ಕಂಡು ನೀ ಕೆರಳಿರಲು
ಹೂವಿನ ಅಂದ ನಿನಗೇ ಚಂದ
ಮಧು ಮಕರಂದ ನಿನಗಾನಂದ
ಒಲಿಸುವ ರಾಗವ ನೀ ಉಲಿ ಉಲಿದು
ಒಲಿಸುವ ರಾಗವ ನೀ ಉಲಿ ಉಲಿದು
ಏನನು ಬಯಸುತಿಹೆ ನೀ…
 
|| ಹೂವಿಂದ ಹೂವಿಗೆ
ಹಾರುವ ದುಂಬಿ
ಏನನು ಹಾಡುತಿಹೆ
ನೀ ಏನನು ಹಾಡುತಿಹೆ
ಹೂವಿಂದ ಹೂವಿಗೆ
ಹಾರುವ ದುಂಬಿ….||
 
ದುಂಬಿಯೆ ನಿನಗೆ ಮಿಲನಕೆ ಸಂಭ್ರಮ
ಹೂವಿಗೆ ಬೇಕು ಪ್ರೇಮ ಸಮಾಗಮ
ಹೂವಿಗು ದುಂಬಿಗು ಇರುವಾ ಬಂಧ
ಸಮರಸವಿದ್ದರೆ ಸವಿರಾಗಬಂಧ
ಈ ಅನುರಾಗವ ಅರಿಯದೆ ಇಂದು
ಈ ಅನುರಾಗವ ಅರಿಯದೆ ಇಂದು
ಏನನು ಬೇಡುತಿಹೆ ನೀ….
 
|| ಹೂವಿಂದ ಹೂವಿಗೆ
ಹಾರುವ ದುಂಬಿ
ಏನನು ಹಾಡುತಿಹೆ
ನೀ ಏನನು ಹಾಡುತಿಹೆ
ಹೂವಿನ ಕೋಮಲ ಭಾವನೆ
ಕೆಣಕಿ ಏತಕೆ ಕಾಡುತಿಹೇ ನೀ …
ಹೂವಿಂದ ಹೂವಿಗೆ
ಹಾರುವ ದುಂಬಿ….||

Huvinda Huvige Haaruva Dhumbi song lyrics from Kannada Movie Hombisilu starring Vishnuvardhan, Aarathi, Leelavathi, Lyrics penned by Geethapriya Sung by S Janaki, Music Composed by Rajan-Nagendra, film is Directed by Geethapriya and film is released on 1978