ಪ್ರೀತಿಗೆ ಕಣ್ಣಿಲ್ಲವೆ ಮೋಸಕ್ಕೆ ಕೊನೆಯಿಲ್ಲವೆ
ಸ್ನೇಹವು ಸುಳ್ಳಾಯಿತೆ ಭಾವನೆ ಬರಿದಾಯಿತೆ
ಈ ಲೋಕವೆಲ್ಲ ಮೋಸ ಇಲ್ಲ ಪ್ರೀತಿ ಒಂದೆ ನಿಮಿಷ
ಈ ಲೋಕವೆಲ್ಲ ಮೋಸ ಇಲ್ಲ ಪ್ರೀತಿ ಒಂದೆ ನಿಮಿಷ
ನಂಬಿದೆ ನಿನ್ನನು ನಾ ನೀಡಿದೆ ಉಸಿರನು
ಉಸಿರನೆ ನಿಲ್ಲಿಸಿ ನೀ ಉಳಿಸಿದೆ ನೆನಪನು
ನೊಂದ ಮನಕ್ಕೆ ನೀ ಬೆಂಕಿಯ ಕೊಳ್ಳಿ ದಹಿಸೊದು ನ್ಯಾಯವೆ
ಕಂಡ ಕನಸ್ಸೆಲ್ಲ ಕರಗಿದೆ ಕೊರಗಿ ಸಹಿಸೋದು ಪ್ರೀತಿಯೆ
ಸಹಿಸೋದು ಪ್ರೀತಿಯೆ
ಮುಪ್ಪಾಗಿ ಹೋಯ್ತು ಮನಸ್ಸು ಕಪ್ಪಾಗಿ ಹೋಯ್ತು ಕನಸ್ಸು
ಪ್ರೀತಿಗೆ ಸೋಲಾಯಿತು ನೋವಿನ ಪಾಲಾಯಿತು
ಹೃದಯವು ಚೂರಾಯಿತು ಕಾಲನ ವಶವಾಯಿತು
ಈ ಲೋಕವೆಲ್ಲ ಮೋಸ ಇಲ್ಲಿ ಪ್ರೀತಿ ಒಂದೆ ನಿಮಿಷ
ಈ ಲೋಕವೆಲ್ಲ ಮೋಸ ಇಲ್ಲಿ ಪ್ರೀತಿ ಒಂದೆ ನಿಮಿಷ
ಕಲ್ಮಶ ಇಲ್ಲದೆ ನಾ ಪ್ರೀತಿಯ ಮಾಡಿದೆ
ಅಂಕುಶ ಇಲ್ಲದೆ ನೀ ನನ್ನನು ಇರಿದೆ
ಕಣ್ಣಿದ್ದು ಕುರುಡು ಬದುಕಿನ್ನು ಬರಡು
ಎಲ್ಲೆಲ್ಲು ಕತ್ತಲೆ
ಮನಸಿದ್ದು ಮರೆವು ಹೃದಯಕ್ಕು ಹಸಿವು
ಕನಸ್ಸೆಲ್ಲ ಬೆತ್ತಲೆ
ಕನಸ್ಸೆಲ್ಲ ಬೆತ್ತಲೆ
ಮುಗಿದಂತೆ ಇನ್ನು ಪಯಣ ಕರೆದಂತೆ ಮುಂದೆ ಮಸಣ
ಆದರು ನಿನ್ನ ನೆನೆಯುವೆ ನಿನ್ನ ನೆನಪಲೆ ದಿನ ಕಳೇಯುವೆ
ಹೃದಯವು ಕ್ಷಣ ನಿಂತರು ನಿನ್ನ ನೆನಪನು ಜೊತೆ ಒಯ್ಯುವೆ
ಈ ಲೋಕವೆಲ್ಲ ಮೋಸ ಇಲ್ಲಿ ಪ್ರೀತಿ ಒಂದೆ ನಿಮಿಷ
ದಿನ ಬದುಕಿಗೊಂದು ವೇಷ ಈ ಲೋಕವೆಲ್ಲ ಮೋಸ