Yaava Janmada Maithri Lyrics

ಯಾವ ಜನ್ಮದ ಮೈತ್ರಿ Lyrics

in Gowri

in ಗೌರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.....ಅ......ಆ...... 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....
 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....
 
|| ಯಾವ ಜನ್ಮದ ಮೈತ್ರಿ….||
 
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ...ಓ ನನ್ನ ನೆಚ್ಚಿನ ಬಂಧು....
 
|| ಯಾವ ಜನ್ಮದ ಮೈತ್ರಿ….||

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು     
ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ  ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು…
 
|| ಯಾವ ಜನ್ಮದ ಮೈತ್ರಿ….||
 
ಅದರರ್ಥ  ಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಙಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳಾವು
ಒಂದಾಗಿ ಮುಂದುವರೆಯುವಾ ...
 
|| ಯಾವ ಜನ್ಮದ ಮೈತ್ರಿ….||

ಆ.....ಅ......ಆ...... 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....
 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ.....
 
|| ಯಾವ ಜನ್ಮದ ಮೈತ್ರಿ….||
 
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಗುರುದೇವನಾಣೆ...ಓ ನನ್ನ ನೆಚ್ಚಿನ ಬಂಧು....
 
|| ಯಾವ ಜನ್ಮದ ಮೈತ್ರಿ….||

ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು     
ಮೇಲೆ ತೆರೆನೊರೆ ಎದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ  ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿರೆ ಪ್ರೇಮತೀರ್ಥದಿ ಮಿಂದು…
 
|| ಯಾವ ಜನ್ಮದ ಮೈತ್ರಿ….||
 
ಅದರರ್ಥ  ಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಙಾಸೆಯಲಿ ಕಾಲಹರಣವದೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳಾವು
ಒಂದಾಗಿ ಮುಂದುವರೆಯುವಾ ...
 
|| ಯಾವ ಜನ್ಮದ ಮೈತ್ರಿ….||

Yaava Janmada Maithri song lyrics from Kannada Movie Gowri starring Sahukar Janaki, Dr Rajkumar, Sandhya, Lyrics penned by Kuvempu Sung by S Janaki, Music Composed by G K Venkatesh, film is Directed by S K A Chari and film is released on 1963
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ