Devaru Varavanu Kotre Lyrics

in Friends

Video:

LYRIC

ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ
ಆಆನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ

ಓಓ
ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ
ಆಆನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
 
. ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ...
 
||ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ||
 
ಮನಸ್ಸು ನಿನ್ನ ಕಂಡೊಡನೆ
ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೆ
ನಿನ್ನ ಜೀವ ಸೇರೋಯ್ತು
ಹಾ. ನಿನ್ನ ಒಂದು ನಗೆಯೊಳಗೆ
ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೆ
ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ  ನಾ ಬದುಕುವೆ...

||ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ
ಆಆನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ||
 
ಏಳು ಹೆಜ್ಜೆ ಇಡುವೆ ಎಂದು
ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು
ನೂರು ಕಾಲ ಬೇಡುವೆನು
ಹಾ..ಎಲ್ಲ ಋತುಗೂ ಮನವಿ ಬರೆದು
ಗಟ್ಟಿಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು
ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ ಕಂಗಳು ನೋಡಲು
ನಿನ್ನ ರೆಪ್ಪೆಯಲೆ ಬಾಯ್ತೆರೆದು ಕಾದಿರುವೆ ನಾ
ಜಗದಲ್ಲೇ ನೀ ವಿಸ್ಮಯ
ಹೇ ಬಾ ಒಪ್ಪಿಕೊ ಪ್ರೀತಿಯ...

||ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ
ಆಆನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
. ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ...||
 
||ಓಓ ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ||
||ದೇವರು ವರವನು ಕೊಟ್ರೆ
ನಾ ನಿನ್ನೇ ಕೋರುವೆ ಚೆಲುವೆ||

Devaru Varavanu Kotre song lyrics from Kannada Movie Friends starring Vasu, Shyam, Hari, Lyrics penned by K Kalyan Sung by Kumar Sanu, Music Composed by G Krishna, film is Directed by M D Sridhar and film is released on 2002