Hambalada Hoovannu Lyrics

ಹಂಬಲದ ಹೂವನ್ನು Lyrics

in Drama

in ಡ್ರಾಮಾ

Video:
ಸಂಗೀತ ವೀಡಿಯೊ:

LYRIC

ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ ,
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನಗಳ ತಂದಿರುವ ವ್ಯಾಪಾರಿ..

ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ
ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ
ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ,
ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..

 
ಹಂಬಲದ ಹೂವನ್ನು. . .
 
ಚಂದಿರನ ಮೊಗದಲ್ಲೆ ಕಂಬನಿಯ ಕಳೆಗಳಿವೆ
ಉಂಟಲ್ಲ ಅದರಲ್ಲೆ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ ಲೋಕವೇ ಬಿಂಬಿಸಲಿ
ಮೋಹದಲಿ ಸಂಕುಚಿತವಾದೀತೆ ನೋಟ..
ಬಾಡೀತೆ ಈ ಜೀವ ಬಿಡಿಯಾಗಿ
ಬದುಕನ್ನೆ ನೋಡೋಣ ಇಡಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ. . .
 
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನಗಳ ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ ,
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನವನು ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ ,
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನಗಳ ತಂದಿರುವ ವ್ಯಾಪಾರಿ..

ಹಿಡಿಯಷ್ಟು ಹೃದಯದಲಿ ಹಿಡಿಸಲಾಗದೆ ಹೋದ
ಮೌನವನು ಶ್ರುತಿ ಮಾಡೋ ವ್ಯಾಯಮವೇಕೆ..
ಅಚ್ಚು-ಮೆಚ್ಚಾಗಿರುವ ಈ ಭಾವ ಸರಿತೆಯಲಿ
ಅಚ್ಚಿನ ದೋಷಗಳು ಮೈದೂರಬೇಕೇ…
ಹರಿವಾಗ ಈ ಬಾಳು ನದಿಯಾಗಿ,
ಇರಬೇಕೇ ನೀ ಸಣ್ಣ ಸುಳಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ..

 
ಹಂಬಲದ ಹೂವನ್ನು. . .
 
ಚಂದಿರನ ಮೊಗದಲ್ಲೆ ಕಂಬನಿಯ ಕಳೆಗಳಿವೆ
ಉಂಟಲ್ಲ ಅದರಲ್ಲೆ ನಮಗೊಂದು ಪಾಠ..
ಈ ಪುಟ್ಟ ಕಂಗಳಲಿ ಲೋಕವೇ ಬಿಂಬಿಸಲಿ
ಮೋಹದಲಿ ಸಂಕುಚಿತವಾದೀತೆ ನೋಟ..
ಬಾಡೀತೆ ಈ ಜೀವ ಬಿಡಿಯಾಗಿ
ಬದುಕನ್ನೆ ನೋಡೋಣ ಇಡಿಯಾಗಿ
ಬೇಕೇನು ಈ ಪ್ರೀತಿ ಇತ್ಯಾದಿ. . .
 
ಹಂಬಲದ ಹೂವನ್ನು ಕಣ್ಣಲ್ಲಿ ಅರಳಿಸುತ,
ಅಂಗಳದಿ ನಿಂತಿರುವ ಸಂಚಾರಿ..
ಜೋಳಿಗೆಯ ತುಂಬೆಲ್ಲ ನಾಜೂಕು ಬಣ್ಣಗಳ,
ಸ್ವಪ್ನಗಳ ತಂದಿರುವ ವ್ಯಾಪಾರಿ..
ಬೆಳದೀತೆ ಆಸೆಗಳ ಈ-ಯಾದಿ ,
ಕಳದೀತೆ ನಡುವೆಲ್ಲ ಈ ಹಾದಿ…
ಬೇಕೇನು ಈ ಪ್ರೀತಿ ಇತ್ಯಾದಿ..

Hambalada Hoovannu song lyrics from Kannada Movie Drama starring Ambarish, Yash, Radhika Pandith, Lyrics penned by Jayanth Kaikini Sung by Sunitha Goparaju, Music Composed by V Harikrishna, film is Directed by Yogaraj Bhat and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ