Kaamanna Kattige Lyrics

in Doorada Betta

Video:

LYRIC

ಕಾಮಣ್ಣ ಕಟ್ಟಿಗೆ ....ಭೀಮಣ್ಣ ಬೆರಣಿ
ಕಾಮಣ್ಣ ಕಟ್ಟಿಗೆ.....ಭೀಮಣ್ಣ ಬೆರಣಿ
ಅಡಿಕೆ ಗೋಟು... ಪೊರಕೆ ಏಟು
ಕಾಮಣ್ಣ ಮಕ್ಕಳು....ಕಳ್ಳ ನನ್ನ ಮಕ್ಕಳು
ಏನೇನು ಕದ್ದರು....ಸೌದೆ ಭರಣಿ ಕದ್ದರು
ಯಾತಕ್ಕೆ ಕದ್ದರು .....ಕಾಮಣ್ಣ ಸುಡೋಕೇ
ಲಬ್ ಲಬ್ ಲಬ್ ಲಬ್  
ಲಬ್ ಲಬ್ ಲಬ್ ಲಬ್  
 
ಹೊಯ್..ಹೇ...
ಹರನ ಮಹಾಪಾರ್ವತಿಪತಿಯೇ
ಹರ ಹರ ಮಹಾದೇವ
 
ವರುಷಕ್ಕೊಮ್ಮೆ...ವರುಷಕ್ಕೊಮ್ಮೆ...
ಬರುವುರು ನಾವು
ಸದಾ ಬರುವರಲ್ಲ
ನಾವು ಸದಾ ಬರುವರಲ್ಲ..
ಕೇಳಿದ್ದನ್ನು ಕೊಡದೆ ಹೋದರೆ
ನಾವು ಬಿಡುವರಲ್ಲ..
ಹೌದು ..ನಾವು ಬಿಡುವರಲ್ಲ..
 
ಸೌದೇ... ಬೆರಣಿ 
ಸೌದೇ ಬೆರಣಿ ಕಾಣಿಕೆ ಸಾಕು
ಬೇರೆ ಬೇಡೊಲ್ಲ..ಬೇರೆ ಬೇಡೊಲ್ಲ
ಕೊಡೊ ಮಾಮೂಲು ಮಡಿಗಿಬಿಟ್ಟರೆ .
ಕೊಡೊ ಮಾಮೂಲು ಮಡಿಗಿಬಿಟ್ಟರೆ .
ತಿರುಗಿ ಬರೋದಿಲ್ಲ ತಿರುಗಿ ಬರೋದಿಲ್ಲ
ನಾವು ತಿರುಗಿ ಬರೋದಿಲ್ಲ
 
ಹುಟ್ಟೋವಾಗ...ಹುಟ್ಟೋವಾಗ
ಇಲ್ಲಿಗೆ ಏನೂ ಹೊತ್ತು ಬರಲಿಲ್ಲ
ಆಹ ಸತ್ತ ಮೇಲೆ
ಅಲ್ಲಿಗೆ ಏನೂ ಕೊಂಡು ಹೋಗೊಲ್ಲ
 
ಹುಟ್ಟೋವಾಗ ಆಹ ಹುಟ್ಟೋವಾಗ
ಇಲ್ಲಿಗೆ ಏನೂ ಹೊತ್ತು ಬರಲಿಲ್ಲ
ಆಹ ಸತ್ತ ಮೇಲೆ
ಅಲ್ಲಿಗೆ ಏನೂ ಕೊಂಡು ಹೋಗೊಲ್ಲ
ಕಾಮನ ಸುಟ್ಟರೆ ಶಿವ ಮೆಚ್ಚುವನು
ಎಂಬುದು ಸುಳ್ಳಲ್ಲ
ಎಂಬುದು ಸುಳ್ಳಲ್ಲ …
ಕಾಮನ ಹಬ್ಬವ ಮಾಡದೆ ಹೋದರೆ
ಹಳ್ಳಿಯು ಉಳಿಯೋಲ್ಲ....
ನಮ್ಮ ಹಳ್ಳಿಯು ಉಳಿಯೋಲ್ಲ....
ಕಾಮನ ಹಬ್ಬ ಆಗದೆ ಹೋದರೆ
ಹಳ್ಳಿಯು ಉಳಿಯೋಲ್ಲ....
ನಮ್ಮ ಹಳ್ಳಿ ಉಳಿಯೋಲ್ಲ...
ನಮ್ಮ ಹಳ್ಳಿ ಉಳಿಯೋಲ್ಲ....
 
||ಕಾಮಣ್ಣ ಕಟ್ಟಿಗೆ ....ಭೀಮಣ್ಣ ಬೆರಣಿ
ಕಾಮಣ್ಣ ಕಟ್ಟಿಗೆ.....ಭೀಮಣ್ಣ ಬೆರಣಿ
ಅಡಿಕೆ ಗೋಟು... ಪೊರಕೆ ಏಟು
ಕಾಮಣ್ಣ ಮಕ್ಕಳು....ಕಳ್ಳ ನನ್ನ ಮಕ್ಕಳು
ಏನೇನು ಕದ್ದರು....ಸೌದೆ ಭರಣಿ ಕದ್ದರು
ಯಾತಕ್ಕೆ ಕದ್ದರು .....ಕಾಮಣ್ಣ ಸುಡೋಕೇ ||
ಲಬ್ ಲಬ್ ಲಬ್ ಲಬ್  
ಲಬ್ ಲಬ್ ಲಬ್ ಲಬ್  
 
ಲೋ.. ಕಾಮಣ್ಣನ ಮಗನೇ... ಓಓ
ಬಾ ಇಲ್ಲಿ... ಬಂದೇ
ಈ ಮಾತಾಯಿ ಕಥೆ ವಸಿ ಹೇಳ್ತಿಯ..
ಹೇಳ್ತೀನಿ... ಹೇಳ್ತೀನಿ
 
ಪುಣ್ಯವತೀ ಈ ಮಹಾತಾಯಿಯು ..
ಆ..ಹ್ಹಾಹ..
ಕಾಳಮ್ಮ...ಭದ್ರ ಕಾಳಮ್ಮ….
ಓ..ಓಹೋಹೊಹೋ...
ಕಾಳಮ್ಮ...ಭದ್ರ ಕಾಳಮ್ಮ
ಪುಣ್ಯವತೀ ಈ ಮಹಾತಾಯಿಯು 
ಕಾಳಮ್ಮ..ಭದ್ರ ಕಾಳಮ್ಮ
ಕಾಳಮ್ಮ..ಭದ್ರ ಕಾಳಮ್ಮ
ಒಂದೊಂದಳ್ಳಿಗೆ ಒಬ್ಬಳೇ ಸಾಕು  
ಕಾಳಮ್ಮ...ಭದ್ರ ಕಾಳಮ್ಮ
ಕಾಳಮ್ಮ...ಭದ್ರ ಕಾಳಮ್ಮ
 
ಈಕೆ ಧಾರಾಳ ಎಂಥದ್ದು...
ಎಂಜಲ ಕೈಲಿ... ಕಾ... ಕಾ.... ಕಾ... 
ಎಂಜಲ ಕೈಲಿ ಕಾಗೆ ಹೊಡೆಯಳು
ಕಾಳಮ್ಮ..ಭದ್ರ ಕಾಳಮ್ಮ
ಆಹ ಕಾಳಮ್ಮ...ಭದ್ರ ಕಾಳಮ್ಮ
 
ಈ ತಾಯಿ ಗುಣ ಹೆಂಗೇ
ನಂಜು ನಾಲಿಗೆ ಕಿಡಿಕಿಡಿ ಮಾತಿನ
ಕಾಳಮ್ಮ...ಭದ್ರ ಕಾಳಮ್ಮ
ಕಾಳಮ್ಮ...ಭದ್ರ ಕಾಳಮ್ಮ
 
ಈಕೆ ಎಂಥ ಪ್ರತಿವೃತೇ...
ಅಂಜಿಸಿ ಗಂಡನ ಉರಿದು ಮುಕ್ಕುವ
ಈ ಕಾಳಮ್ಮ...ಭದ್ರ ಕಾಳಮ್ಮ
ಅಹ ಕಾಳಮ್ಮ...ಭದ್ರ ಕಾಳಮ್ಮ
 
ಹೀಹ್ಹೀ..
ಈ ಅಮ್ಮನ ಮುಖ ನೋಡಿದ್ರೆ
ಗಂಜಿ ದೊರಕದು ಹೊತ್ತಾರೆ ಕಂಡರೆ
ಕಾಳಮ್ಮ...ಭದ್ರ ಕಾಳಮ್ಮ
ಕಾಳಮ್ಮ...ಭದ್ರ ಕಾಳಮ್ಮ
ಓ... ಕಾಳಮ್ಮ... ಭದ್ರ ಕಾಳಮ್ಮ
ಅಹ ಕಾಳಮ್ಮ... ಭದ್ರ ಕಾಳಮ್ಮ
ಒಹೋ ಕಾಳಮ್ಮ... ಭದ್ರ ಕಾಳಮ್ಮ
 
ಕಾಮಣ್ಣನ ಮಕ್ಕಳ ಬೈಯ್ಯುವೆಯೇನೆ
ಕಾಳಮ್ಮ...ಭದ್ರ ಕಾಳಮ್ಮ
ಕಾಳಮ್ಮ...ಭದ್ರ ಕಾಳಮ್ಮ
ಕಾಮಣ್ಣನಾಡುವ ಆಟವ ಮುಂದೆ ನೋಡಮ್ಮ
ನೀನು ನೋಡಮ್ಮ
ನೋಡಮ್ಮ ನೀನು ನೋಡಮ್ಮ
 
ಅಣ್ಣ ಕಾಮಣ್ಣನು ಗಿಳಿಯ ಮ್ಯಾಲೆ ಕುಳಿತಾಗ
ಮಾವು ಬೇವು ಚಿಗುರಿತು ದುಂಬಿ ಗುಯ್‌ ಗುಟ್ಟಿತು
ಅಣ್ಣ ಕಾಮಣ್ಣನ ಆಟವನ್ನು ಕಂಡಾಗ
ಮುದಿಯತನ ಹೋಯಿತು ಪ್ರಾಯ ಮೇಲೆ ಉಕ್ಕಿತು
ಅಣ್ಣ ಕಾಮಣ್ಣನು ಬೆಳ್ಳಿ ಬೆಟ್ಟವೇರ್ದಾಗ
ಬಲದ ಕಣ್ಣು ಅದರಿತು ರತಿಗೆ ಭಯವು ಬಂದಿತು
ಅಣ್ಣ ಕಾಮಣ್ಣನ ಶಿವನ ಎದುರು ನಿಂದಾಗ
ಗೂಳಿ ಗುಟುರು ಹಾಕಿತು ಹಾವು ಬುಸ್‌ ಎಂದಿತು
ಅಣ್ಣ ಕಾಮಣ್ಣನು ಹೂವು ಬಾಣ ಬಿಟ್ಟಾಗ
ರತಿಯ ಎದೆ ನಡುಗಿತು ಶಿವನ ಎದೆ ಗುಡುಗಿತು
ಮೂರನೆ ಕಣ್ಣ ಬಿಟ್ಟ ಕಾಮನು ಒಡನೆ ಸುಟ್ಟ

Kaamanna Kattige song lyrics from Kannada Movie Doorada Betta starring Dr Rajkumar, Bharathi, Leelavathi, Lyrics penned by Chi Udayashankar Sung by P B Srinivas, T A Mothi, Music Composed by G K Venkatesh, film is Directed by Siddalingaiah and film is released on 1973