Sangathi Modalu Nimma Lyrics

in Devara Duddu

Video:

LYRIC

ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
ನನ್ನ ರೀ...ಎಂದಾಗ ನಕ್ಕು ನಾ ಬಂದಾಗ
ಓ...ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
ನನ್ನ ರೀ... ಎಂದಾಗ ನಕ್ಕು ನಾ ಬಂದಾಗ 
ಮೈಯೆಲ್ಲ ನಾಚಿ ಬೆವೆತು ನಿಂತೋದೆ
ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ
ಹೇಹೇಹೇ .... ಆಆಆ ....
ಮೈಸೂರು ಮಲ್ಲಿಗೆಯ ಹೂವ ಮುಡಿದೋಳೆ
ನನ್ನ ಕೈಯ ಹಿಡಿದೋಳೆ ಬಳ್ಳಿ ಹಂಗೆ ಬಳಕೋಳೆ
ಕೈ ಬಳೆ ನಾದ ಕಿವಿಗಳಿಗಿಂಪು.. (ಆ..)  
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
ಅಹ ..ಕೈ ಬಳೆ ನಾದ ಕಿವಿಗಳಿಗಿಂಪು.. (ಆ..)
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
 
ಈ.. ನನ್ನ ಸೆರೆಯಲ್ಲಿ  ಆಸೆಯ..ಬಂಡಿ ನೀವಿಲ್ಲಿ
ಈ.. ನನ್ನ ಸೆರೆಯಲ್ಲಿ ಆಸೆಯ..ಬಂಡಿ ನೀವಿಲ್ಲಿ
ಏಕೆ ಈ ಕಂಪನ ನಿಮ್ಮ ಬಿಡಲಾರೆ ನಾ 
ಇನ್ನು ಚಿರಬಂಧನ ಅನುದಿನ
ನೀನಿಂದು ಕೊಟ್ಟ ಈ ಕೊಡುಗೆ
ಜೇನು ತುಂಬಿಟ್ಟ ಒಂದು ಸಿಹಿ ಗಡಿಗೆ
ಮತ್ತೆ ಬೇಕೆನ್ಸಿತೆ ಇಲ್ಲ ಸಾಕೆನ್ಸಿತೆ
ಇನ್ನೂ ಏನನ್ಸಿದೆ ಹೇಳು ನೀ
 
|| ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
ನನ್ನ ರೀ... ಎಂದಾಗ ನಕ್ಕು ನಾ ಬಂದಾಗ 
ಮೈಯೆಲ್ಲ ನಾಚಿ ಬೆವೆತು ನಿಂತೋದೆ
ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ…ಹಾ…
ಮೈಸೂರು ಮಲ್ಲಿಗೆಯ ಹೂವ ಮುಡಿದೋಳೆ
ನನ್ನ ಕೈಯ ಹಿಡಿದೋಳೆ ಬಳ್ಳಿ ಹಂಗೆ ಬಳಕೋಳೆ
ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)  
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
ಅಹ ..ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು….||
 
||ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
ನನ್ನ ರೀ... ಎಂದಾಗ ನಕ್ಕು ನಾ ಬಂದಾಗ 
ಮೈಯೆಲ್ಲ ನಾಚಿ ಬೆವೆತು ನಿಂತೋದೆ
ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ…
 
ಹೇಹೇಹೇ .... ಆಆಆ ....
ಮೈಸೂರು ಮಲ್ಲಿಗೆಯ ಹೂವ ಮುಡಿದೋಳೆ
ನನ್ನ ಕೈಯ ಹಿಡಿದೋಳೆ ಬಳ್ಳಿ ಹಂಗೆ ಬಳಕೋಳೆ
ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)  
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
ಅಹ ..ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು||
 
ನಾನಾಡೊ ಕಿವಿ ಮಾತೆಲ್ಲ ನೀನು
ಕೆಂಪಾದ್ರೆ ಗುಟ್ಟು ಊರ್ಗೆಲ್ಲ... ಅಹ್ಹಹ್ಹಹ 
ನಾನಾಡೊ ಕಿವಿ ಮಾತೆಲ್ಲ ನೀನು
ಕೆಂಪಾದ್ರೆ ಗುಟ್ಟು ಊರ್ಗೆಲ್ಲ
ನನ್ನ ಕೆಣಕ್ದಾಗ್ಲೆಲ್ಲ ಸುಮ್ನೆ ಇರುವೋನಲ್ಲ
ಸಾಕು ಸಾಕನಿಸೇ ನಾ ಬಿಡೋಲ್ಲ.. ಹ್ಹಾಂ
 ಹಹ್ಹಹ್ಹಹ್ಹ...  ಹೂರಾಶಿ... ಮಡಿಲಲ್ಲಿ
ಇರಲು ನೀವಿನ್ನ ಜೊತೆಯಲ್ಲಿ
ಕೈಯ ತುಂಟಾಟವೋ ಸರಸ ಚೆಲ್ಲಾಟವೋ
ಯಾವ ಹೊಸ ಪಾಠವೋ ಹೇಳೆ ನಾ (ಅಹ್ಹಹ ಅಹ್ಹ )
 
||ಸಂಗಾತಿ ಮೊದಲು ನಿಮ್ಮ ನಾ ಕಂಡಾಗ
ನನ್ನ ರೀ... ಎಂದಾಗ ನಕ್ಕು ನಾ ಬಂದಾಗ 
ಮೈಯೆಲ್ಲ ನಾಚಿ ಬೆವೆತು ನಿಂತೋದೆ
ಬಾಳಲ್ಲಿ ಪ್ರೀತಿ ಬೆರೆಸಿ ತಂದೋರೆ…
 
ಹೇಹೇಹೇ .... ಆಆಆ ....
ಮೈಸೂರು ಮಲ್ಲಿಗೆಯ ಹೂವ ಮುಡಿದೋಳೆ
ನನ್ನ ಕೈಯ ಹಿಡಿದೋಳೆ ಬಳ್ಳಿ ಹಂಗೆ ಬಳಕೋಳೆ
ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)  
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
ಅಹ ..ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು
ಅರೆರೆ ..ಕೈಯ ಬಳೆ ನಾದ ಕಿವಿಗಳಿಗಿಂಪು.. (ಆ..)
ನಿನ್ನ ಅಂದ ಚಂದ ಕಣ್ಣಿಗೆ ಸೊಂಪು||

Sangathi Modalu Nimma song lyrics from Kannada Movie Devara Duddu starring Rajesh, Srinath, Jayanthi, Lyrics penned by R N Jayagopal Sung by S P Balasubrahmanyam, S Janaki, Music Composed by Rajan-Nagendra, film is Directed by K S L Swamy and film is released on 1977