Nawaabanaagu Nee Lyrics

in College Kumar

LYRIC

ನವಾಬನಾಗು ನೀ ಸಾಹೇಬನಾಗು ಅಧಿಕಾರಿ ನೀನಾಗು
ಬಲಾಢ್ಯನಾಗು ನೀ ಗುಣಾಢ್ಯನಾಗು ಉಪಕಾರಿ ನೀನು ಆಗು
ನನ್ನ ಕೂಸೇ ನನ್ನ ಕನಸು ನನ್ನ ಕನಸೇ ನನ್ನ ಕೂಸು
ನನ್ನ ಕೂಸೇ ನನ್ನ ಬೆಳಕು ನನ್ನ ಕೂಸೇ ನನ್ನ ಬದುಕು
ನವಾಬನಾಗು ನೀ ಸಾಹೇಬನಾಗು ಅಧಿಕಾರಿ ನೀನಾಗು
 
ಕನಸಿನಲೂ ಬರಬೇಕು ನಿನ್ನ ಶಾಲೆ
ಸರಸ್ವತಿಯ ಕೃಪೆ ಇರಲಿ ನಿನ್ನ ಮೇಲೆ
ಅರೆಘಳಿಗೆ ಕಣ್ರೆಪ್ಪೆ ಮುಚ್ಚದೆಲೇ
ಅರಗಿಸಿಕೋ ಕನ್ನಡದ ಪದಮಾಲೆ
ಓದು ಎಲ್ಲ ಓದು ಮುಂದೆ ನಿಂಗೆ ರಾಜಯೋಗವು
ಕಾಲ ಮೇಲೆ ಕಾಲು ಹಾಕಿ ಕೂರೋ ಕಾಲವು
ಹಣಗಳಿಸಿದರೆ ಕಳೆಯುವುದು ಕಳೆಯದು ಅಕ್ಷರವು
ನನ್ನ ಕೂಸೇ ನನ್ನ ಕನಸು ನನ್ನ ಕನಸೇ ನನ್ನ ಕೂಸು
ನನ್ನ ಕೂಸೇ ನನ್ನ ಬೆಳಕು ನನ್ನ ಕೂಸೇ ನನ್ನ ಬದುಕು
 
ದುಡಿಯುವೆನು ಅಂಬಲಿಗೂ ಕಂಬಳಿಗೂ
ಬರದಿರಲಿ ನನ್ನ ಕಷ್ಟ ನಿನ್ನವರೆಗೂ
ಹಸಿವೆನುವ ಹಳೆ ಗೆಳೆಯ ನನ್ನ ಜೊತೆ
ಖುಷಿಗಳಲೆ ತುಂಬಿರಲಿ ನಿನ್ನ ಜೊತೆ
ನನ್ನ ಬಾಳ ಧಾರೆ ನೀನು ವಿದ್ಯಾವಂತನಾಗಲು
ವಿದ್ಯೆ ನೀನು ಕಾಯಿ ವಿದ್ಯೆ ನಿನ್ನ ಕಾವಲು
ಬಡ ತಂದೆಯ ಈ ಜನುಮಕೆ ನೀ ಕೊಡುವೆಯ ಉಡುಗೊರೆಯ
ನನ್ನ ಕೂಸೇ ನನ್ನ ಕನಸು ನನ್ನ ಕನಸೇ ನನ್ನ ಕೂಸು
ನನ್ನ ಕೂಸೇ ನನ್ನ ಬೆಳಕು ನನ್ನ ಕೂಸೇ ನನ್ನ ಬದುಕು

Nawaabanaagu Nee song lyrics from Kannada Movie College Kumar starring Vikky, Samyuktha Hegde,, Lyrics penned bySung by , Music Composed by Arjun Janya, film is Directed by Hari Santhosh and film is released on 2017