Chandira Thanda Hunnime Rathri Lyrics

ಚಂದಿರ ತಂದ ಹುಣ್ಣಿಮೆ ರಾತ್ರಿ Lyrics

in Chalisuva Modagalu

in ಚಲಿಸುವ ಮೋಡಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ಕೂಗೆಂದಿತು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ತೂಗೆಂದಿತು
 
ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
 
ಏನು ತೊಂದರೆ ಅಲ್ಲಿ ಬಂದರೆ
ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ
ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ್ಯ ಎಳೆಯದೆ
ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ
ಹೊರಗೆ ಹೋಗುವೆಯ
ಬಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ
ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ
ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದೆ ಇಲ್ಲ
 
||ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ತೂಗೆಂದಿತು…||
 
ಅತ್ತೆ ಕಂಡರೆ ಮಾವ ಬಂದರೆ
ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ
ಏನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ
ಏನು ಕೇಳಿಸದು
ಸದ್ದು ಮಾಡದೆ ದೀಪ ಆರಿಸು
ಏನು ಕಾಣಿಸದು
ಅಯ್ಯೊ ನಿನ್ನಾ
ನಿನ್ನ ಹೆಣ್ಣು ಅಂದೋರಿಗೆ ಬುದ್ದಿ ಇಲ್ಲ
ಏನೆ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ
ಆಗಲೆ ನೀನು ಚೆನ್ನ ನಲ್ಲ
ಅಯ್ಯೊ ಏನು ಮಾಡಲಿ ದೇವರೆ ಬಲ್ಲ
 
|| ಆಹ ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು….
ದಿಂಬು ಹಾಸಿಗೆ ನನ್ನ ನೂಕಿತು 
ನನ್ನ ನಲ್ಲನ ತೂಗೆಂದಿತು
ನನ್ನ ಮಂಚವು ಏನೆಂದಿತು 
ನಿನ್ನನ್ನು ಆಚೆಗೆ ನೂಕೆಂದಿತು…||

ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ಕೂಗೆಂದಿತು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ತೂಗೆಂದಿತು
 
ಚಂದಿರ ತಂದ ಹುಣ್ಣಿಮೆ ರಾತ್ರಿ 
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
 
ಏನು ತೊಂದರೆ ಅಲ್ಲಿ ಬಂದರೆ
ಸೇವೆ ಮಾಡುವೆನು
ಹೂವನು ಹಾಸಿ ನಿಮ್ಮ ಮಲಗಿಸಿ
ಲಾಲಿ ಹಾಡುವೆನು
ಮೈಯ್ಯ ಮುಟ್ಟದೆ ಕೈಯ್ಯ ಎಳೆಯದೆ
ದೂರ ನಿಲ್ಲುವೆಯ
ನನ್ನ ನೆಮ್ಮದಿ ಹಾಳು ಮಾಡದೆ
ಹೊರಗೆ ಹೋಗುವೆಯ
ಬಾರಿ ಬ್ರಹ್ಮಚಾರಿ ನೀನು ಬಲ್ಲೆ ಎಲ್ಲ
ಹೆಣ್ಣೆ ನಿನ್ನ ಆರೋಗ್ಯ ಸರಿಯಾಗಿಲ್ಲ
ಪ್ರೀತಿಯೆಂದರೆ ಗೊತ್ತೆ ಇಲ್ಲ
ನನಗೆ ಪ್ರೀತಿಯೆ ಬೇಕಾಗಿಲ್ಲ
ಬೇಡವೆಂದರು ನಾ ಬಿಡುವುದೆ ಇಲ್ಲ
 
||ಅಯ್ಯೊ .. ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು
ನನ್ನ ಮಂಚವು ಮಾತಾಡಿತು 
ನಿನ್ನನ್ನು ಆಚೆಗೆ ನೂಕೆಂದಿತು
ದಿಂಬು ಹಾಸಿಗೆ ನನ್ನ ನೂಕಿತು
ನನ್ನ ನಲ್ಲನ ತೂಗೆಂದಿತು…||
 
ಅತ್ತೆ ಕಂಡರೆ ಮಾವ ಬಂದರೆ
ಮಾನ ಹೋಗುವುದು
ಅಪ್ಪನು ರೇಗಿ ಗದರಿಸಿದಾಗ
ಏನು ಹೇಳುವುದು
ಏಕೆ ಹೆದರುವೆ ಕದವ ಹಾಕುವೆ
ಏನು ಕೇಳಿಸದು
ಸದ್ದು ಮಾಡದೆ ದೀಪ ಆರಿಸು
ಏನು ಕಾಣಿಸದು
ಅಯ್ಯೊ ನಿನ್ನಾ
ನಿನ್ನ ಹೆಣ್ಣು ಅಂದೋರಿಗೆ ಬುದ್ದಿ ಇಲ್ಲ
ಏನೆ ಹೇಳು ನಿನ್ನ ಬಿಟ್ಟು ಬಾಳೋದಿಲ್ಲ
ಕೋಪ ಬಂದರೆ ಸುಮ್ಮನಿರಲ್ಲ
ಆಗಲೆ ನೀನು ಚೆನ್ನ ನಲ್ಲ
ಅಯ್ಯೊ ಏನು ಮಾಡಲಿ ದೇವರೆ ಬಲ್ಲ
 
|| ಆಹ ಚಂದಿರ ತಂದ ಹುಣ್ಣಿಮೆ ರಾತ್ರಿ
ಗಾಳಿಯು ತಂದ ತಣ್ಣನೆ ರಾತ್ರಿ
ಹಾಯಾಗಿ ನಾ ಮಲಗಿರಲು….
ದಿಂಬು ಹಾಸಿಗೆ ನನ್ನ ನೂಕಿತು 
ನನ್ನ ನಲ್ಲನ ತೂಗೆಂದಿತು
ನನ್ನ ಮಂಚವು ಏನೆಂದಿತು 
ನಿನ್ನನ್ನು ಆಚೆಗೆ ನೂಕೆಂದಿತು…||

Chandira Thanda Hunnime Rathri song lyrics from Kannada Movie Chalisuva Modagalu starring Dr Rajkumar, Saritha, Ambika, Lyrics penned by Chi Udayashankar Sung by Dr Rajkumar, S Janaki, Music Composed by Rajan-Nagendra, film is Directed by Singeetham Srinivasa Rao and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ