-
ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ
ಇಲ್ಲ ಎನ್ನುತ ಇಲ್ಲೆ ಇರಲೆ
ಹೀಗೆ ಹೆಸರನು ಹಣೆಯಲ್ಲಿ ಗೀಚಲೆ
ಅನುಮಾನವೆ ಇಲ್ಲ ಮರುಳಾಗುವೆ ಬೇಗನೆ
ಅನುವಾದಿಸಬೇಕೆ ಮನಮೋಹಕ ವೇದನೆ
ತಡಮಾಡದೆ ತುಟಿಯ ಅಂಚಿನ ಅರ್ಜಿ ಸ್ವೀಕರಿಸು
ಕನಸ್ಸಲ್ಲಿಯು ಬಂದು ಹೋಗುವ ಖರ್ಚು ನೀ ಭರಿಸು
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ||
ಯಾವುದೆ ನೆಪವನ್ನು ನೀಡದೆ ಹಟವನ್ನು ಹೂಡದೆ
ದಿನರಾತ್ರಿ ನನ್ನ ಮನಸ್ಸನ್ನ ಸೆಳೆದೋಯ್ದೆ ಬಿಡುವೆ
ನಿನ್ನದೆ ಕರೆಗಾಗಿ ಕಾಯುತ ಪ್ರತಿಬಾರಿ ಸೋಲುತ
ನೆನಪಲ್ಲಿ ಮಿಂದು ನನಗಿಂದು ಕನಸ್ಸೊಂದೆ ಒಡವೆ
ಬೆರಗಾಗುವೆ ನಾನು ಬದಲಾಗುವ ನೋಟಕೆ
ಬರಬಾರದೆ ನೀನು ಬೆಳದಿಂಗಳ ಊಟಕೆ
ಅತಿಯಾಗಿರೊ ನನ್ನ ಭಾವನೆ ನೀನೆ ಊಹಿಸಿಕೊ
ನೆನದಾಕ್ಷಣ ನಾನು ಹಾಜರು ಎಂದೆ ಭಾವಿಸಿಕೊ
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ||
ಮೆಲ್ಲಗೆ ಅಲೆಯಂತೆ ವ್ಯಾಪಿಸಿ ಗುರುತನ್ನು ಛಾಪಿಸಿ
ಒಲವೀಗ ಅಂತು ಬಳಿ ಬಂತು ಬರುವಂತೆ ಬೆಳಕು
ಎಂದಿಗು ಖುಷಿಯನ್ನು ಬೀರುವ ಒಗಟಂತೆ ತೋರುವ
ಅನುರಾಗಕ್ಕಿಂತ ಅರೆ ಉಂಟ ಸಿಹಿಯಾದ ಸರಕು
ಸ್ವರವಾಗುವೆ ನಿನ್ನ ಕೊರಳಲ್ಲಿರೊ ಹಾಡಿಗೆ
ಇದಕ್ಕಿಂತಲು ಚೆಂದ ಕ್ಷಣವೆಲ್ಲಿದೆ ಬಾಳಿಗೆ
ಮನವೀಗಲು ತುಂಬಿ ಬಂದಿದೆ ನಿನ್ನ ಕಾಳಜಿಗೆ
ಇರಬಲ್ಲೆಯ ಬಿಟ್ಟು ನನ್ನನು ಹೇಳು ನೀ ನನಗೆ
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ
ಇಲ್ಲ ಎನ್ನುತ ಇಲ್ಲೆ ಇರಲೆ
ಹೀಗೆ ಹೆಸರನು ಹಣೆಯಲ್ಲಿ ಗೀಚಲೆ||
-
ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ
ಇಲ್ಲ ಎನ್ನುತ ಇಲ್ಲೆ ಇರಲೆ
ಹೀಗೆ ಹೆಸರನು ಹಣೆಯಲ್ಲಿ ಗೀಚಲೆ
ಅನುಮಾನವೆ ಇಲ್ಲ ಮರುಳಾಗುವೆ ಬೇಗನೆ
ಅನುವಾದಿಸಬೇಕೆ ಮನಮೋಹಕ ವೇದನೆ
ತಡಮಾಡದೆ ತುಟಿಯ ಅಂಚಿನ ಅರ್ಜಿ ಸ್ವೀಕರಿಸು
ಕನಸ್ಸಲ್ಲಿಯು ಬಂದು ಹೋಗುವ ಖರ್ಚು ನೀ ಭರಿಸು
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ||
ಯಾವುದೆ ನೆಪವನ್ನು ನೀಡದೆ ಹಟವನ್ನು ಹೂಡದೆ
ದಿನರಾತ್ರಿ ನನ್ನ ಮನಸ್ಸನ್ನ ಸೆಳೆದೋಯ್ದೆ ಬಿಡುವೆ
ನಿನ್ನದೆ ಕರೆಗಾಗಿ ಕಾಯುತ ಪ್ರತಿಬಾರಿ ಸೋಲುತ
ನೆನಪಲ್ಲಿ ಮಿಂದು ನನಗಿಂದು ಕನಸ್ಸೊಂದೆ ಒಡವೆ
ಬೆರಗಾಗುವೆ ನಾನು ಬದಲಾಗುವ ನೋಟಕೆ
ಬರಬಾರದೆ ನೀನು ಬೆಳದಿಂಗಳ ಊಟಕೆ
ಅತಿಯಾಗಿರೊ ನನ್ನ ಭಾವನೆ ನೀನೆ ಊಹಿಸಿಕೊ
ನೆನದಾಕ್ಷಣ ನಾನು ಹಾಜರು ಎಂದೆ ಭಾವಿಸಿಕೊ
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ||
ಮೆಲ್ಲಗೆ ಅಲೆಯಂತೆ ವ್ಯಾಪಿಸಿ ಗುರುತನ್ನು ಛಾಪಿಸಿ
ಒಲವೀಗ ಅಂತು ಬಳಿ ಬಂತು ಬರುವಂತೆ ಬೆಳಕು
ಎಂದಿಗು ಖುಷಿಯನ್ನು ಬೀರುವ ಒಗಟಂತೆ ತೋರುವ
ಅನುರಾಗಕ್ಕಿಂತ ಅರೆ ಉಂಟ ಸಿಹಿಯಾದ ಸರಕು
ಸ್ವರವಾಗುವೆ ನಿನ್ನ ಕೊರಳಲ್ಲಿರೊ ಹಾಡಿಗೆ
ಇದಕ್ಕಿಂತಲು ಚೆಂದ ಕ್ಷಣವೆಲ್ಲಿದೆ ಬಾಳಿಗೆ
ಮನವೀಗಲು ತುಂಬಿ ಬಂದಿದೆ ನಿನ್ನ ಕಾಳಜಿಗೆ
ಇರಬಲ್ಲೆಯ ಬಿಟ್ಟು ನನ್ನನು ಹೇಳು ನೀ ನನಗೆ
||ನಲ್ಲೆ ಎನ್ನುತ ಮೆಲ್ಲ ಬರಲೇ
ನಿನ್ನ ಹೆರಳನ್ನು ಬೆರಳಿಂದ ಬಾಚಲೆ
ಇಲ್ಲ ಎನ್ನುತ ಇಲ್ಲೆ ಇರಲೆ
ಹೀಗೆ ಹೆಸರನು ಹಣೆಯಲ್ಲಿ ಗೀಚಲೆ||
Nalle Enutha song lyrics from Kannada Movie Bhujanga starring Prajwal Devaraj, Meghana Raj, Santhosh Aryavardhan, Lyrics penned by Jayanth Kaikini Sung by Sonu Nigam, Sridevi Kulenur, Music Composed by Poornachandra Tejaswi, film is Directed by L Jeeva (David) and film is released on 2016