ಓ..ಓ….ಒಹೋ...
ಹಕ್ಕಿಯು ಹಾರುತಿದೆ….
ಹಕ್ಕಿಯು ಹಾರುತಿದೆ
ದೂರಕೆ ಹಕ್ಕಿಯು ಹಾರುತಿದೆ
ಹಗಲಿರುಳೆಂಬ ರೆಕ್ಕೆಗಳೊಡನೆ
ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೆ…..
ಈ ದಿನ ಇಲ್ಲಿ ನಾಳೆ ಅದೆಲ್ಲೋ
ಅಂದಿನ ದಿನಗಳು ಇಂದೆಲ್ಲೋ
ಈ ದಿನ ಇಲ್ಲಿ ನಾಳೆ ಅದೆಲ್ಲೋ
ಅಂದಿನ ದಿನಗಳು ಇಂದೆಲ್ಲೋ
ನೆನಪನು ಮಾತ್ರ ನಮ್ಮಲಿ ಉಳಿಸಿ
ಸಾಗಿದ ಸಮಯವು ಈಗೆಲ್ಲೋ
ಏನನು ಜಗಕೆ ಸಾರುತಲಿ
ಪರಿ ಪರಿ ನೋಟವ ತೋರುತಲಿ
|| ಹಕ್ಕಿಯು ಹಾರುತಿದೇ…. ||
ಬಂದವರೆಲ್ಲರು ನಡೆಯಲೆ ಬೇಕು
ತಮ್ಮಯ ಬಾಳಿನ ಯಾತ್ರೆಯಲಿ
ಬಂದವರೆಲ್ಲರು ನಡೆಯಲೆ ಬೇಕು
ತಮ್ಮಯ ಬಾಳಿನ ಯಾತ್ರೆಯಲಿ
ಸಮಯವು ವಯಸನು ತುಂಬುವುದು
ಎಲ್ಲರ ಬಾಳಿನ ಪಾತ್ರೆಯಲಿ
ಕಾಲದ ಚಕ್ರವು ಉರುಳುತಿರೆ
ಬಾಳಿನ ಬಂಡಿಯು ತೆರಳುತಿರೆ
|| ಹಕ್ಕಿಯು ಹಾರುತಿದೇ…. ||
ಒಬ್ಬರೆ ಬಂದರು ಈ ಜಗಕೆ
ಎಲ್ಲರ ಜೊತೆಯಲಿ ಬಾಳುವರು
ಒಬ್ಬರೆ ಬಂದರು ಈ ಜಗಕೆ
ಎಲ್ಲರ ಜೊತೆಯಲಿ ಬಾಳುವರು
ತಾಯಿ ತಂದೆ ಸೋದರ ಸೋದರಿ
ಮಮತೆಯ ರೂಪವ ತೋರುವರು
ಬಾಲ್ಯದ ಕನಸು ಸುಳಿಯುತಿರೆ
ಪ್ರೀತಿಯ ಪಾಶವು ಸೆಳೆಯುತಿರೆ
|| ಹಕ್ಕಿಯು ಹಾರುತಿದೆ….
ಹಕ್ಕಿಯು ಹಾರುತಿದೆ
ದೂರಕೆ ಹಕ್ಕಿಯು ಹಾರುತಿದೆ
ಹಗಲಿರುಳೆಂಬ ರೆಕ್ಕೆಗಳೊಡನೆ
ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೆ…..||
ಓ..ಓ….ಒಹೋ...
ಹಕ್ಕಿಯು ಹಾರುತಿದೆ….
ಹಕ್ಕಿಯು ಹಾರುತಿದೆ
ದೂರಕೆ ಹಕ್ಕಿಯು ಹಾರುತಿದೆ
ಹಗಲಿರುಳೆಂಬ ರೆಕ್ಕೆಗಳೊಡನೆ
ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೆ…..
ಈ ದಿನ ಇಲ್ಲಿ ನಾಳೆ ಅದೆಲ್ಲೋ
ಅಂದಿನ ದಿನಗಳು ಇಂದೆಲ್ಲೋ
ಈ ದಿನ ಇಲ್ಲಿ ನಾಳೆ ಅದೆಲ್ಲೋ
ಅಂದಿನ ದಿನಗಳು ಇಂದೆಲ್ಲೋ
ನೆನಪನು ಮಾತ್ರ ನಮ್ಮಲಿ ಉಳಿಸಿ
ಸಾಗಿದ ಸಮಯವು ಈಗೆಲ್ಲೋ
ಏನನು ಜಗಕೆ ಸಾರುತಲಿ
ಪರಿ ಪರಿ ನೋಟವ ತೋರುತಲಿ
|| ಹಕ್ಕಿಯು ಹಾರುತಿದೇ…. ||
ಬಂದವರೆಲ್ಲರು ನಡೆಯಲೆ ಬೇಕು
ತಮ್ಮಯ ಬಾಳಿನ ಯಾತ್ರೆಯಲಿ
ಬಂದವರೆಲ್ಲರು ನಡೆಯಲೆ ಬೇಕು
ತಮ್ಮಯ ಬಾಳಿನ ಯಾತ್ರೆಯಲಿ
ಸಮಯವು ವಯಸನು ತುಂಬುವುದು
ಎಲ್ಲರ ಬಾಳಿನ ಪಾತ್ರೆಯಲಿ
ಕಾಲದ ಚಕ್ರವು ಉರುಳುತಿರೆ
ಬಾಳಿನ ಬಂಡಿಯು ತೆರಳುತಿರೆ
|| ಹಕ್ಕಿಯು ಹಾರುತಿದೇ…. ||
ಒಬ್ಬರೆ ಬಂದರು ಈ ಜಗಕೆ
ಎಲ್ಲರ ಜೊತೆಯಲಿ ಬಾಳುವರು
ಒಬ್ಬರೆ ಬಂದರು ಈ ಜಗಕೆ
ಎಲ್ಲರ ಜೊತೆಯಲಿ ಬಾಳುವರು
ತಾಯಿ ತಂದೆ ಸೋದರ ಸೋದರಿ
ಮಮತೆಯ ರೂಪವ ತೋರುವರು
ಬಾಲ್ಯದ ಕನಸು ಸುಳಿಯುತಿರೆ
ಪ್ರೀತಿಯ ಪಾಶವು ಸೆಳೆಯುತಿರೆ
|| ಹಕ್ಕಿಯು ಹಾರುತಿದೆ….
ಹಕ್ಕಿಯು ಹಾರುತಿದೆ
ದೂರಕೆ ಹಕ್ಕಿಯು ಹಾರುತಿದೆ
ಹಗಲಿರುಳೆಂಬ ರೆಕ್ಕೆಗಳೊಡನೆ
ಕಾಲದ ಹಕ್ಕಿಯು ಹಾರುತಿದೆ
ಹಕ್ಕಿಯು ಹಾರುತಿದೆ…..||
Hakkiyu Haaruthide song lyrics from Kannada Movie Bhoopathi Ranga starring Dr Rajkumar, Narasimharaju, Dinesh, Lyrics penned by Geethapriya Sung by P B Srinivas, Music Composed by Vijaya Bhaskar, film is Directed by Geethapriya and film is released on 1970