Arere Arere Kanaside Yedure Lyrics

in Bahukrita Vesham

LYRIC

ಗಂಡು : ಅರೆರೆ ಅರೆರೆ ಕನಸಿದೆ ಎದುರೆ
             ನೋಡುತ ಮರೆತೆ ನನ್ನ ಹೆಸರೆ
             ಮನಸಿದು ಸೆರೆ…ಹೇ ಹೇ….
             ನಿನದೆ ಜಪವ ನಡೆಸಿದೆ
             ಉಸಿರೇ ಒಂಥರ ಅಮಲು
             ಕುಡಿಯದೆ ಮದಿರೆ ನೀ ನಗುತಿರೆ…
ಹೆಣ್ಣು : ಇನ್ನು ನೀನೇ ಹೊಣೆ ನಿನ್ನ ಆಕರ್ಷಣೆ
             ತುಂಬಾ ಮಿತಿ ಮೀರಿದೆ…
             ಎಲ್ಲಾ ನಿನಗರ್ಪಣೆ ಇಲ್ಲ ಆಕ್ಷೇಪಣೆ
             ಈ ಉಸಿರಿನ್ನು ನಿನದೇ….
ಗಂಡು : ನೂರು ನೂರು ಸಾರಿ
             ಹಾಯಾಗಿ ಸಾಯಬಲ್ಲೆ ಇನ್ನು
             ಒಂದೇ ಒಂದು ಸಾರಿ
             ಈ ನಿನ್ನ ಭೇಟಿಗಾಗಿ ನಾನು
 
ಗಂಡು : ಗುಣುಗುಣುಗಿದೆ ಮನ ಜಪಿಸಿದೆ
             ಮನಸಾರೆ ನಿನ್‌ ಹೆಸರೇ…
             ಪ್ರಣಯವೇ ಎದೆಯೊಳಗಡೆ
             ಬಳಿ ಬಂದರೆ….
             ಇಡಿ ಹೃದಯಕೆ ಕಿಡಿ ತಗುಲಿಸಿ
             ಸೊಗಸಾಗಿ ನಸುನಗುವೇ
             ನಡು ಹಗಲಲೆ ಕನಸಿಗೆ
             ನನ್ನೇ ನೂಕುವೇ….
ಹೆಣ್ಣು : ಆ ಆ….
             ಹೇಗೆ ನಾನು ಕೂರಲಿ ಸುಮ್ಮನೆ
             ನಿನ್ನ ಕಂಗಳ ಚಲನೆ
             ಮರಳಿ ಮರಳಿ ತಲೆಯ
             ಕೆಡಿಸಿ ಮರುಳಾದೆನೆ….
 
|| ಗಂಡು : ಅರೆರೆ ಅರೆರೆ ಕನಸಿದೆ ಎದುರೆ
             ನೋಡುತ ಮರೆತೆ ನನ್ನ ಹೆಸರೆ
             ಮನಸಿದು ಸೆರೆ…ಹೇ ಹೇ….
             ನಿನದೆ ಜಪವ ನಡೆಸಿದೆ
             ಉಸಿರೇ ಒಂಥರ ಅಮಲು
             ಕುಡಿಯದೆ ಮದಿರೆ ನೀ ನಗುತಿರೆ…
ಹೆಣ್ಣು : ಇನ್ನು ನೀನೇ ಹೊಣೆ ನಿನ್ನ ಆಕರ್ಷಣೆ
             ತುಂಬಾ ಮಿತಿ ಮೀರಿದೆ…
             ಎಲ್ಲಾ ನಿನಗರ್ಪಣೆ ಇಲ್ಲ ಆಕ್ಷೇಪಣೆ
             ಈ ಉಸಿರಿನ್ನು ನಿನದೇ….
ಗಂಡು : ನೂರು ನೂರು ಸಾರಿ
             ಹಾಯಾಗಿ ಸಾಯಬಲ್ಲೆ ಇನ್ನು
             ಒಂದೇ ಒಂದು ಸಾರಿ
             ಈ ನಿನ್ನ ಭೇಟಿಗಾಗಿ ನಾನು…..||

Arere Arere Kanaside Yedure song lyrics from Kannada Movie Bahukrita Vesham starring Shashikanth B, Vaishnavi Gowda, Karan Aryan, Lyrics penned by Kaviraj Sung by Karthik, Aishwarya Rangarajan, Vyshak V Bhargav, Music Composed by Vyshak V Bhargav, film is Directed by Prashanth K Yallampalli and film is released on 2022