Naanondu Theera Lyrics

in Arunaraga

Video:

LYRIC

ಗಂಡು : ನಾನೊಂದು ತೀರ  ನೀನೊಂದು ತೀರ
                ನಾನೊಂದು ತೀರ ನೀನೊಂದು ತೀರ
                ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಹೆಣ್ಣು : ನಾನೊಂದು ತೀರ ನೀನೊಂದು ತೀರ
                ನಾನೊಂದು ತೀರ ನೀನೊಂದು ತೀರ
                ಮನಸು ಮನಸು ದೂರ ಪ್ರೀತಿ ಹೃದಯ ಭಾರ
 
ಗಂಡು : ಹೂವು ಚೆಲುವಾಗಿ ಅರಳಿ
                ದುಂಬಿ ಸೆಳೆಯೋದು ಸಹಜ
                ಹೆಣ್ಣು ಸೊಗಸಾಗಿ ಬೆಳೆದು
                ಗಂಡ ಬಯಸೋದು ಸಹಜ
                ಹೀಗೇಕೆ ನಿನಗೆ ಏಕಾಂಗಿ ಬದುಕು....
                ಹೀಗೇಕೆ ನಿನಗೆ ಏಕಾಂಗಿ ಬದುಕು
                ಸಂಗಾತಿ ಇರದೆ ಬಾಳೆಲ್ಲ ಬರಿದು
 
|| ಗಂಡು : ನಾನೊಂದು ತೀರ  ನೀನೊಂದು ತೀರ
               ಮನಸು ಮನಸು ದೂರ ಪ್ರೀತಿ ಹೃದಯ ಭಾರ..||
 
ಹೆಣ್ಣು : ಭೂಮಿ ಆಕಾಶ ಸೇರಿ ಕಲೆತು ಕೂಡೋದು ಉಂಟೆ
                ಕಡಲು ತಾನಾಗಿ ಹರಿದು ನದಿಗೆ ಸೇರೋದು ಉಂಟೆ
                ಚೂರಾದ ಹೃದಯ ಮತ್ತೊಮ್ಮೆ ಮಿಡಿದು
                ಚೂರಾದ ಹೃದಯ ಮತ್ತೊಮ್ಮೆ ಮಿಡಿದು
                ಜೀವಂತ ಬದುಕೇ ಸಂಬಂಧ ತರದು
 
|| ಹೆಣ್ಣು : ನಾನೊಂದು ತೀರ  ನೀನೊಂದು ತೀರ
                ಮನಸು ಮನಸು ದೂರ ಪ್ರೀತಿ ಹೃದಯ ಭಾರ..||
ಗಂಡು :  ನಾನೊಂದು ತೀರ ನೀನೊಂದು ತೀರ
                 ನಾನೊಂದು ತೀರ ನೀನೊಂದು ತೀರ
                 ಮನಸು ಮನಸು ದೂರ ಪ್ರೀತಿ ಹೃದಯ ಭಾರ
ಹೆಣ್ಣು : ಹುಂ..ಹುಂ....ಹುಂ....                
ಗಂಡು : ಹುಂ..ಹುಂ....ಹುಂ....||

Naanondu Theera song lyrics from Kannada Movie Arunaraga starring Ananthnag, Geetha, K S Ashwath, Lyrics penned by Doddarange Gowda Sung by K J Yesudas, Chithra, Music Composed by M Ranga Rao, film is Directed by K V Jayaram and film is released on 1986