ದೇವರ ಹಾಗೆ ನೀ ಓ ನನ್ನ ಸಾರಥಿ
ಅಪ್ಪನೇ ಅಲ್ಲವೇ ಕರಮುಗಿವ ಮೂರುತಿ
ಅಮ್ಮನ ಹೋಲುವ ಅಕ್ಕರೆಯ ತೋರುವ
ಅಪರೂಪ ಅಪ್ಪನು ನೀನು
ನನಗಾಗಿ ಇರುವ ಭಾನು
ಅಳುವನ್ನೆ ಮರೆಸುವ ರೂಪ ನೀನಲ್ಲವೇ
ಬೆನ್ನಿಗೆ ನಿಂತೆ ನೀ ಜೀವಂತ ದೀಪವೆ
ನನ್ನಯ ಜೀವಕೆ ನೀನಾದೆ ದ್ವೀಪವೆ
ನನಗಾಗೆ ಮರುಗಿದೆ ಕರಗಿದೆ
ಸೆಣೆಸಿದೆ ಸವೆಸಿದೆ ನಗುತಲೆ ಬದುಕಿದೆ
ಉಸಿರಿಂದ ಉಸಿರ ಬಸಿದು
ಹರಸೋ ಅರಸನು ನೀನಪ್ಪ
ಬೇಕಾಗಿಲ್ಲ ಯಾರು ನನಗೆ ನೀನಲ್ಲದೆ
ಬೇರಿಲ್ಲದೇನೆ ಚಿಗುರು ಇರಬಲ್ಲದೆ
ದೇವರ ಹಾಗೆ ನೀ ಓ ನನ್ನ ಸಾರಥಿ
ಅಪ್ಪನೇ ಅಲ್ಲವೇ ಕರಮುಗಿವ ಮೂರುತಿ
ಅಮ್ಮನ ಹೋಲುವ ಅಕ್ಕರೆಯ ತೋರುವ
ಅಪರೂಪ ಅಪ್ಪನು ನೀನು
ನನಗಾಗಿ ಇರುವ ಭಾನು
ಅಳುವನ್ನೆ ಮರೆಸುವ ರೂಪ ನೀನಲ್ಲವೇ
ಬೆನ್ನಿಗೆ ನಿಂತೆ ನೀ ಜೀವಂತ ದೀಪವೆ
ನನ್ನಯ ಜೀವಕೆ ನೀನಾದೆ ದ್ವೀಪವೆ
ನನಗಾಗೆ ಮರುಗಿದೆ ಕರಗಿದೆ
ಸೆಣೆಸಿದೆ ಸವೆಸಿದೆ ನಗುತಲೆ ಬದುಕಿದೆ
ಉಸಿರಿಂದ ಉಸಿರ ಬಸಿದು
ಹರಸೋ ಅರಸನು ನೀನಪ್ಪ
ಬೇಕಾಗಿಲ್ಲ ಯಾರು ನನಗೆ ನೀನಲ್ಲದೆ
ಬೇರಿಲ್ಲದೇನೆ ಚಿಗುರು ಇರಬಲ್ಲದೆ