ಪ್ರೀತಿಯ ಪರಿಚಯ ನೀಡಲು ಬರುವೆಯ
ನೂತನ ಪುಟವನು ತೆರೆಯುತ್ತಿದೆ ಹೃದಯ
ಸಂತೆ ನಡುವಲ್ಲೆ ಯಾರು ಕರೆದಂತಿದೆ
ನಿಂತ ಇರುವಲ್ಲೆ ಸ್ಪೂರ್ತಿ ಬರುವಂತಿದೆ
ಈ ಹೃದಯದ ಪ್ರಕರಣ ಬಹಳ ನಾಜೂಕು
ನಾ ಕದವನು ತೆರೆದರೆ ಎದುರೆ ನೀ ಬೇಕು
ನೆನೆವಾಗಲೆ ನಿನ್ನನು ಮಳೆಗಾಲದ ಭಾವನೆ
ತುದಿಗಾಲಲೆ ಕಾಯುವೆ ನಿನಗಾಗಿ
ಸಹವಾಸದ ಸುಂದರ ಅವಕಾಶವು ಬಂದರೆ
ಹನಿಗಣ್ಣಲೆ ನೋಡುವೆ ಬೆರಗಾಗಿ
ಈ ಮನಸ್ಸಿನ ಕಡಲಲಿ ಅಲೆಯ ಸಂಗೀತ
ಈ ಇರುಳಿನ ಕೊನೆಯಲಿ ನಸುಕು ಬಂದೀತ
ಪ್ರೀತಿಯ ಪರಿಚಯ ನೀಡಲು ಬರುವೆಯ
ನೂತನ ಪುಟವನು ತೆರೆಯುತ್ತಿದೆ ಹೃದಯ
ಸಂತೆ ನಡುವಲ್ಲೆ ಯಾರು ಕರೆದಂತಿದೆ
ನಿಂತ ಇರುವಲ್ಲೆ ಸ್ಪೂರ್ತಿ ಬರುವಂತಿದೆ
ಈ ಹೃದಯದ ಪ್ರಕರಣ ಬಹಳ ನಾಜೂಕು
ನಾ ಕದವನು ತೆರೆದರೆ ಎದುರೆ ನೀ ಬೇಕು
ನೆನೆವಾಗಲೆ ನಿನ್ನನು ಮಳೆಗಾಲದ ಭಾವನೆ
ತುದಿಗಾಲಲೆ ಕಾಯುವೆ ನಿನಗಾಗಿ
ಸಹವಾಸದ ಸುಂದರ ಅವಕಾಶವು ಬಂದರೆ
ಹನಿಗಣ್ಣಲೆ ನೋಡುವೆ ಬೆರಗಾಗಿ
ಈ ಮನಸ್ಸಿನ ಕಡಲಲಿ ಅಲೆಯ ಸಂಗೀತ
ಈ ಇರುಳಿನ ಕೊನೆಯಲಿ ನಸುಕು ಬಂದೀತ