ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು ಘಮ್ಮನೆ ಅರಳುತಿದೆ
ಕದವಿರದ ಹೃದಯವಿದು ನಿನಗಾಗಿ ಕಾಯುತಿದೆ
ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮುಗಿಲುಗಳ ದಿಬ್ಬಣವು ಹೊರಟಿದೆ ಬಾಂದಳದಲ್ಲಿ
ಕವಿತೆಗಳ ಮೆರವಣಿಗೆ ಸಾಗಿದೆ ನನ್ನೆದೆಯಲ್ಲಿ
ಜಡಿಮಳೆಯ ಶೃತಿಯೊಡನೆ ಜೀರುಂಡೆಯ ಸವಿಗಾನ
ಕೊಡೆಯಡಿ ನೀ ಜೊತೆಯಾಗು ಬದುಕಿಗದೆ ಬಹುಮಾನ
ಈ ಮನದ ಚಿಪ್ಪಿನಲಿ ಮಾಡುವೆನು ಜೋಪಾನ
ಇಳೆಯೆದೆಯ ವಿರಹವನೂ ತಣಿಸಿದೆ ಹನಿಗಳ ಬಳಗ
ಇಳಿಯಲು ನೀ ಎದೆಯೊಳಗೆ ಮಿಡಿದಿದೆ ಮೌನದ ರಾಗ
ಮೋಡಗಳ ಊರಿನಲಿ ಮಿಂಚು ಗುಡುಗುಗಳ ಸಂತೆ
ಬಿಗಿದಪ್ಪಿ ನಿಂತರೆ ನೀ ಹೊಸ ಜನ್ಮ ಪಡೆದಂತೆ
ಇರು ಹುಡುಗಿ ಜೊತೆಯಾಗಿ ನೆಲಮುಗಿಲ ಒಲವಂತೆ
||ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು ಘಮ್ಮನೆ ಅರಳುತಿದೆ
ಕದವಿರದ ಹೃದಯವಿದು ನಿನಗಾಗಿ ಕಾಯುತಿದೆ||
||ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ||
ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು ಘಮ್ಮನೆ ಅರಳುತಿದೆ
ಕದವಿರದ ಹೃದಯವಿದು ನಿನಗಾಗಿ ಕಾಯುತಿದೆ
ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮುಗಿಲುಗಳ ದಿಬ್ಬಣವು ಹೊರಟಿದೆ ಬಾಂದಳದಲ್ಲಿ
ಕವಿತೆಗಳ ಮೆರವಣಿಗೆ ಸಾಗಿದೆ ನನ್ನೆದೆಯಲ್ಲಿ
ಜಡಿಮಳೆಯ ಶೃತಿಯೊಡನೆ ಜೀರುಂಡೆಯ ಸವಿಗಾನ
ಕೊಡೆಯಡಿ ನೀ ಜೊತೆಯಾಗು ಬದುಕಿಗದೆ ಬಹುಮಾನ
ಈ ಮನದ ಚಿಪ್ಪಿನಲಿ ಮಾಡುವೆನು ಜೋಪಾನ
ಇಳೆಯೆದೆಯ ವಿರಹವನೂ ತಣಿಸಿದೆ ಹನಿಗಳ ಬಳಗ
ಇಳಿಯಲು ನೀ ಎದೆಯೊಳಗೆ ಮಿಡಿದಿದೆ ಮೌನದ ರಾಗ
ಮೋಡಗಳ ಊರಿನಲಿ ಮಿಂಚು ಗುಡುಗುಗಳ ಸಂತೆ
ಬಿಗಿದಪ್ಪಿ ನಿಂತರೆ ನೀ ಹೊಸ ಜನ್ಮ ಪಡೆದಂತೆ
ಇರು ಹುಡುಗಿ ಜೊತೆಯಾಗಿ ನೆಲಮುಗಿಲ ಒಲವಂತೆ
||ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ
ಮೊದಲ ಸುಂದರ ಕನಸು ಘಮ್ಮನೆ ಅರಳುತಿದೆ
ಕದವಿರದ ಹೃದಯವಿದು ನಿನಗಾಗಿ ಕಾಯುತಿದೆ||
||ಮೊದಲ ಮಳೆ ಮನದೊಳಗೆ ಸುರಿದಿದೆ ಎಡಬಿಡದೆ
ಮೊದಮೊದಲ ಮಿಡಿತವಿದು ಒಲವಿಗೆ ತುಡಿಯುತಿದೆ||